ಮಡಿಕೇರಿ, ಜು. ೧೩: ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿನ ಎ.ವಿ.ಶಾಲೆಯಿಂದ ಅಬ್ಬಿಫಾಲ್ಸ್ಗೆ ಹಾಗೂ ಭಗವತಿ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಭಿವೃದ್ಧಿ ಪಡಿಸುತ್ತಿರುವುದರಿಂದ ವಾಹನಗಳಿಗೆ ಓಡಾಟವನ್ನು ನಿರ್ಬಂಧಿಸಲಾಗಿದೆ.
ಲಘು ವಾಹನಗಳಿಗೆ ಪರ್ಯಾಯ ರಸ್ತೆ ಇದ್ದು ಭಾರಿ ವಾಹನಗಳಿಗೆ ಪರ್ಯಾಯ ರಸ್ತೆ ಇರುವುದಿಲ್ಲ. ಆದ್ದರಿಂದ ತಾ. ೧೪ ರಿಂದ ಆಗಸ್ಟ್, ೫ ರವರೆಗೆ ಈ ರಸ್ತೆಯ ಕಾಮಗಾರಿ ನಡೆಯಬೇಕಾಗಿರುವುದರಿಂದ ವಾಹನ ಚಾಲಕರು ಕಾಮಗಾರಿ ನಡೆಸಲು ಸಹಕರಿಸುವಂತೆ ನಗರಸಭೆ ಪೌರಾಯುಕ್ತ ಎಚ್.ಆರ್.ರಮೇಶ್ ಕೋರಿದ್ದಾರೆ.