ಕೂಡಿಗೆ, ಜು. ೧೩: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಲು ಇನ್ನೂ ೧೩ ಅಡಿಗಳಷ್ಟು (ಗರಿಷ್ಠ ೨,೮೫೯ ಅಡಿ-ಸಮುದ್ರ ಮಟ್ಟದಿಂದ. ಪ್ರಸ್ತುತ ೨,೮೪೬ ಅಡಿಯಷ್ಟು ತುಂಬಿದೆ) ಬಾಕಿ ಇದ್ದು, ಮಳೆ ಕೊರತೆಯ ಕಾರಣ ಒಳ ಹರಿಯುವಿಕೆಯ ನೀರಿನ ಪ್ರಮಾಣದಲ್ಲೂ ಭಾರಿ ಕುಸಿತ ಕಂಡುಬAದಿದೆ.

ಕಳೆದ ಸಾಲಿನಲ್ಲಿ ಈ ಅವಧಿಯಲ್ಲಿ ತುಂಬಿ ತುಳುಕುತ್ತಿದ್ದ ಹಾರಂಗಿ ಜಲಾಶಯ, ಈ ಬಾರಿ ಜುಲೈ ಎರಡನೇ ವಾರಕ್ಕೆ ಕಾಲಿಟ್ಟರೂ ಕೇವಲ ೫.ಟಿ.ಎಂ.ಸಿ.ಯಷ್ಟು ನೀರು ಸಂಗ್ರಹವಾಗಿದೆ. ಅಣೆಕಟ್ಟೆಯ ಅಚ್ಚುಕಟ್ಟು ಪ್ರದೇಶದ ರೈತರಿಗೆ ನಿಗಮದ ವತಿಯಿಂದ ನೀರು ಬಳಕೆ ಮಾಡಿಕೊಂಡು ಬೇಸಾಯ ಮಾಡಲು ಯಾವುದೇ ರೀತಿಯ ಸೂಚನೆ ಇನ್ನು ಕೂಡ ದೊರಕಿಲ್ಲ. ಮಳೆಗಾಲದ ಬದಲಾಗಿ ಈ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬೇಸಿಗೆ ಮಾದರಿಯಲ್ಲಿ ಬಿಸಿಲು ಇರುವುದರಿಂದಾಗಿ ರೈತರು ಭತ್ತದ ಸಸಿಮಡಿಗಳಿಗೆ ಬಿತ್ತನೆ ಮಾಡಬೇಕಾದ ಸಮಯವಾಗಿದ್ದರೂ ಬಿತ್ತನೆ ಬೀಜಗಳನ್ನು ಖರೀದಿಸಿ ಮನೆಯಲ್ಲಿ ಶೇಖರಿಸುವಂತಹ ಪ್ರಸಂಗ ಎದುರಾಗಿದೆ.

ಸರ್ಕಾರದ ಈವÀÀರೆಗಿನ ಸುತ್ತೋಲೆಯಂತೆ ಅಣೆಕಟ್ಟೆಯಲ್ಲಿ ಪ್ರಮುಖವಾಗಿ ಕುಡಿಯುವ ನೀರಿನ ವ್ಯವಸ್ಥೆಗೆ ಅನುಕೂಲವಾಗುವಂತೆ ನೀರಿನ ಮಟ್ಟವನ್ನು ಕಾಪಾಡಲು ಸೂಚನೆ ಬಂದಿದೆ. ಕಳೆದ ವಾರದಿಂದ ಹಾರಂಗಿ ಅಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಸ್ವಲ್ಪ ಪ್ರಮಾಣದ ಮಳೆ ಬಿದ್ದ ಪರಿಣಾಮವಾಗಿ ಅಣೆಕಟ್ಟೆಗೆ ಒಳ ಹರಿಯುವಿಕೆ ಪ್ರಮಾಣವು ೨,೫೦೦ ಕ್ಯೂಸೆಕ್ಸ್(ಕ್ಯೂಬಿಕ್ ಫೀಟ್ ಪರ ಸೆಕೆಂಡ್) ಇದ್ದಿದ್ದು ಇದೀಗ ಮಳೆಯ ಪ್ರಮಾಣವು ಕಡಿಮೆಯಾದ ಹಿನ್ನೆಲೆಯಲ್ಲಿ ಅಣೆಕಟ್ಟೆಗೆ ಕೇವಲ ೨,೦೩೬ ಕ್ಯೂಸೆಕ್ಸ್ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಸÀರಕಾರದ ಆದೇಶದಂತೆ ಒಳ ಹರಿವಿನ ನೀರನ್ನು ಸಂಗ್ರಹಿಸಲಾಗುತ್ತಿದ್ದು, ನಂತರ ದಿನಗಳ ಆದೇಶದಂತೆ ಮುಂದಿನ ಕ್ರಮ ವಹಿಸಲಾಗುವುದು ಎಂದು ಹಾರಂಗಿ ನೀರಾವರಿ ಇಲಾಖೆಯ ಇಂಜಿನಿಯರ್ ತಿಳಿಸಿದ್ದಾರೆ.

ಕೆ.ಕೆ. ನಾಗರಾಜಶೆಟ್ಟಿ