ನಾಪೋಕು, ಜು. ೧೩: ಪಟ್ಟಣ ವ್ಯಾಪ್ತಿಯ ಹದಗೆಟ್ಟ ರಸ್ತೆಯಿಂದಾಗಿ ಜನರು ಪರದಾಡುವಂತಾಗಿದೆ. ಪಟ್ಟಣ ಸೇರಿದಂತೆ ಇಲ್ಲಿನ ಬೇತು ರಸ್ತೆ, ಹಳೆ ತಾಲೂಕು ರಸ್ತೆಗಳಲ್ಲಿ ಹೊಂಡ ಗುಂಡಿಗಳಾಗಿದ್ದು ಸಂಚಾರ ದುಸ್ತರವಾಗಿದೆ. ಪಾದಾಚಾರಿಗಳು, ಪ್ರಯಾಣಿಕರು ವಾಹನ ಚಾಲಕರು ಹಿಡಿ ಶಾಪ ಹಾಕುವಂತಾಗಿದೆ. ಮಳೆಗಾಲಕ್ಕೂ ಮುನ್ನ ಹದಗೆಟ್ಟ ರಸ್ತೆಗಳನ್ನು ದುರಸ್ತಿಪಡಿಸಲಾಗುತ್ತದೆ ಎಂಬ ಆಶಾಭಾವನೆ ಸಾರ್ವಜನಿಕರು ಹೊಂದಿದ್ದರಾದರೂ ಜನಪ್ರತಿನಿಧಿಗಳ ಭರವಸೆ ಭರವಸೆಯಾಗಿಯೇ ಉಳಿದಿದೆ. ಇದೀಗ ಮಳೆ ಸುರಿಯುವ ವೇಳೆ ಹೊಂಡಗಳಲ್ಲಿ ನೀರು ತುಂಬಿಕೊAಡು ವಾಹನ ಚಾಲಕರು ವಾಹನ ಚಾಲನೆ ಮಾಡಲು ಹರ ಸಾಹಸ ಪಡುತ್ತಿರುವುದು ಒಂದಡೆಯಾದರೆ ಪಾದಾಚಾರಿಗಳಿಗೆ ಕೆಸರಿನ ಸಿಂಚನದ ಸಂಚಾರ ತಪ್ಪುತ್ತಿಲ್ಲ. ದ್ವಿಚಕ್ರ ವಾಹನ ಸವಾರರು ಗುಂಡಿಗೆ ಬಿದ್ದು ಕೆಲವೊಮ್ಮೆ ರಸ್ತೆಗೂ ಬಿದ್ದು ಕಷ್ಟಪಟ್ಟು ತೆರಳುವಂತಾಗಿದೆ.

ಪಟ್ಟಣದಿಂದ ಹಳೆ ತಾಲೂಕಿಗೆ ತೆರಳುವ ನಾಪೋಕ್ಲು ಭಾಗಮಂಡಲ ಮುಖ್ಯರಸ್ತೆಯ ಕೆಪಿಎಸ್ ಶಾಲೆಯ ಬಳಿ, ಪೊನ್ನು ಮುತ್ತಪ್ಪ ದೇವಾಲಯದ ಬಳಿ ಹಾಗೂ ನೂತನವಾಗಿ ನಿರ್ಮಾಣಗೊಂಡಿರುವ ಪೆಟ್ರೋಲ್ ಬಂಕ್ ಬಳಿ ಡಾಂಬರು ಎಂಬುದೇ ಇಲ್ಲ. ಎಲ್ಲೆಂದರಲ್ಲಿ ಗುಂಡಿಗಳಾಗಿವೆ. ಇತ್ತ ಬೇತು ಗ್ರಾಮಕ್ಕೆ ತೆರಳುವ ನಾಪೋಕ್ಲು ಪಾರಾಣೆ ರಸ್ತೆಯಲ್ಲಿ ವಾಹನಗಳ ದಟ್ಟಣೆಯು ಅಧಿಕವಾಗಿದ್ದು ರಸ್ತೆ ಸಂಚಾರವು ದುಸ್ತರವಾಗಿದೆ. ಪಟ್ಟಣದಿಂದ ಅನತಿ ದೂರಕ್ಕೆ ತೆರಳುತ್ತಿದ್ದಂತೆ ರಸ್ತೆ ಮಧ್ಯದಲ್ಲಿ ದೊಡ್ಡ ಹೊಂಡವೊAದು ಇದ್ದು ವಾಹನಗಳು ಆ ಹೊಂಡದ ಮೂಲಕವೇ ಚಲಿಸಬೇಕಾಗಿದೆ. ಮಳೆಗಾಲಕ್ಕೂ ಮುನ್ನ ರಸ್ತೆಯಲ್ಲಿನ ಹೊಂಡಗಳನ್ನು ಮುಚ್ಚಿ ಒಂದಷ್ಟು ದುರಸ್ತಿ ಕಾರ್ಯ ಮಾಡಿದ್ದರೆ ಜನಸಾಮಾನ್ಯರಿಗೆ ಅನುಕೂಲವಾಗುತಿತ್ತು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಇನ್ನು ಮುಖ್ಯ ರಸ್ತೆ ಬಿಟ್ಟು ಬೇತು ಗ್ರಾಮದಿಂದ ಸಸ್ಯ ಕ್ಷೇತ್ರಕ್ಕೆ ತೆರಳುವ ಕವಲು ದಾರಿಯಲ್ಲಿ ಹಲವು ವಾಹನಗಳು ಇದೀಗ ಸಂಚರಿಸುತ್ತಿವೆ .ಈ ರಸ್ತೆಯು ಪೂರ್ಣ ಹದಗೆಟ್ಟಿದೆ. ಕೆಲವು ಭಾಗಗಳಲ್ಲಿ ನೀರು ನಿಂತು ಕೆರೆಯಂತಾಗುತ್ತಿದೆ. ಮಡಿಕೇರಿ ರಸ್ತೆಯಿಂದ ಬೇತು ಗ್ರಾಮಕ್ಕೆ ತೆರಳುವ ಈ ಕವಲು ರಸ್ತೆಯ ಅಲ್ಪ ಭಾಗವನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಮಾಡಲಾಗಿದೆ. ಇನ್ನುಳಿದ ಭಾಗ ಕಿತ್ತು ಹೋಗಿದ್ದು, ರಸ್ತೆ ಎಲ್ಲಿದೆ ಎಂದು ಕಾಣಿಸದಂತಾಗಿದೆ.

ನಾಪೋಕ್ಲು ಭಾಗಮಂಡಲ ರಸ್ತೆಯಲ್ಲಿ ನಡೆದಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಬಂದೊದಗಿದೆ. ಕನಿಷ್ಠ ಗುಂಡಿ ಮುಚ್ಚುವ ಕೆಲಸವನ್ನು ಮಾಡುತ್ತಿಲ್ಲ. ಯುದ್ಧದ ಕಾರಣದಿಂದ ಡಾಂಬರು ಬರುತ್ತಿಲ್ಲ ಎಂದು ಶಾಸಕರು ಹೇಳಿಕೆ ನೀಡಿದ್ದಾರೆ. ನಾಗರಿಕರು ಎಚ್ಚೆತ್ತು ರಸ್ತೆ ಅವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಲಿದ್ದೇವೆ ಎಂದು ಅಲ್ಪಸಂಖ್ಯಾತ ಮೋರ್ಚಾದ ಮಾಜಿ ಜಿಲ್ಲಾಧ್ಯಕ್ಷ ಸಿ.ಎಂ.ರಫೀಕ್ ಎಮ್ಮೆಮಾಡು ತಿಳಿಸಿದ್ದಾರೆ.

ಪಟ್ಟಣದಿಂದ ಮಕ್ಕಿಶಾಸ್ತಾವು ದೇವಾಲಯದ ರಸ್ತೆ ಸಂಪೂರ್ಣ ದುಸ್ಥಿತಿಯಿಂದ ಕೂಡಿದೆ. ರಸ್ತೆ ದುರಸ್ತಿ ಪಡಿಸಿ ಎರಡು ಮೂರು ತಿಂಗಳು ಕಳೆಯುವಷ್ಟರಲ್ಲಿ ಮತ್ತೆ ಹಾಳಾಗಿದೆ. ಕನಿಷ್ಠ ಮೂಲಭೂತ ಸೌಲಭ್ಯ ಒದಗಿಸಲಾಗದ ಆಡಳಿತ ವ್ಯವಸ್ಥೆ ನಿಲುವು ಖಂಡನೀಯ ಎಂದು ಹಳೆ ತಾಲೂಕು ಕಾಫಿ ಬೆಳೆಗಾರರಾದ ಮುಂಡAಡ ಶಾಂತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಟ್ಟಣ ವ್ಯಾಪ್ತಿಯ ಗುಂಡಿ ಬಿದ್ದ ರಸ್ತೆಗಳಲ್ಲಿ ಆಟೋ ಚಾಲನೆ ಮಾಡುವುದು ದುಸ್ತರವಾಗಿದೆ. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಹದಗೆಟ್ಟ ರಸ್ತೆಯಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುವುದು ಹಿಂಸೆಯಾಗಿದೆ ಎನ್ನುತ್ತಾರೆ ಆಟೋಚಾಲಕ ಮಂಜುನಾಥ್.

ಗುAಡಿ ಬಿದ್ದ ರಸ್ತೆಗಳಲ್ಲಿ ಸಂಚರಿಸುವುದು ದ್ವಿಚಕ್ರ ವಾಹನ ಚಾಲಕರಿಗೆ ಬಹಳ ಸಮಸ್ಯೆ ತಂದೊಡ್ಡಿದೆ. ನಾಗರಿಕರ ಗೋಳನ್ನು ಕೇಳುವವರಿಲ್ಲ ಎಂದು ಪೇರೂರು ಗ್ರಾಮದ ಟಿ.ಪಿ. ಮುತ್ತಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದ್ವಿಚಕ್ರ ವಾಹನ ಚಾಲಕರು ಗುಂಡಿಗಳಲ್ಲಿ ಬಿದ್ದು ತೊಂದರೆಗೊಳಗಾಗಿದ್ದಾರೆ ಎಂದು ನಾಪೋಕ್ಲುವಿನ ವಿಜಯನ್ ತಿಳಿಸಿದ್ದಾರೆ.

ಕಾಟಚಾರಕ್ಕೆ ಗುಂಡಿಗಳನ್ನು ಮುಚ್ಚಿದ್ದು ಯಾವುದೇ ಪ್ರಯೋಜನ ಇಲ್ಲವಾಗಿದೇ ನಡೆದಾಡಲು ಸಾಧ್ಯವಿಲ್ಲದಂತಾಗಿದೆ ಎಂದು ಎಮ್ಮೆಮಾಡುವಿನ ಚಂಬಾರAಡ ಸಾದಲಿ ಹೇಳಿದ್ದಾರೆ.