ಮಡಿಕೇರಿ, ಜು. ೧೩: ಸರಕಾರದ ಭವ್ಯ ಅತಿಥಿಗೃಹಗಳಿವೆ... ದೊಡ್ಡ ದೊಡ್ಡ ಕಚೇರಿಗಳು, ಬಹುಮಹಡಿ ಕಟ್ಟಡದಂತಹ ಭವ್ಯ ಬಂಗಲೆಗಳೂ ಇವೆ. ಇದರ ನಡುವೆ ಇದು ಯಾವುದು ಸರಕಾರಿ ಭೂತ ಬಂಗಲೆ ಎಂದು ಅಚ್ಚರಿಪಡಬೇಡಿ. ಇದು ರಾಜ್ಯ ಸರಕಾರಕ್ಕೆ ಅತ್ಯಧಿಕವಾದ ಆದಾಯವನ್ನು ತಂದು ಕೊಡುವ ಅಬಕಾರಿ ಇಲಾಖೆಯ ವಿಚಾರ... ಕೊಡಗು ಜಿಲ್ಲೆ ರಾಜ್ಯದಲ್ಲಿ ಮದ್ಯದ ವಿಚಾರದಲ್ಲಿ ಇನ್ನಿತರ ಜಿಲ್ಲೆಗಳಿಗಿಂತ ಒಂದು ಹೆಜ್ಜೆ ಮುಂದೆಯೇ ಇರುವುದು ಇಡೀ ರಾಜ್ಯಕ್ಕೇ ಗೊತ್ತು.

ಈ ಜಿಲ್ಲೆಯಲ್ಲಿ ಅಬಕಾರಿ ಇಲಾಖೆಗೆಂದು ಜಿಲ್ಲಾ ಕೇಂದ್ರ ಮಡಿಕೇರಿಯ ಹೊರವಲಯದಲ್ಲಿ ಇಲಾಖೆಯ ಎಲ್ಲಾ ಮುಖ್ಯ ಕಚೇರಿಗಳನ್ನು ಒಳಗೊಂಡAತೆ “ಅಬಕಾರಿ ಭವನ''ವೊಂದನ್ನು ನಿರ್ಮಿಸುವ ಯೋಜನೆಯನ್ನು ರೂಪಿಸಲಾಗಿತ್ತು. ಈ ಯೋಜನೆಯನ್ನು ಪ್ರಾರಂಭಿಸಲು ಉದ್ದೇಶಿಸಿದ್ದು, ೨೦೦೮-೦೯ನೇ ಸಾಲಿನಲ್ಲಿ ಇದೀಗ ಬರೋಬರಿ ೧೮ ವರ್ಷ ಪೂರ್ಣಗೊಂಡಿದೆ. ಆದರೆ ಭವನ ಕಾರ್ಯಾರಂಭಗೊಳ್ಳುವ ಬದಲಾಗಿ ಕಾಡಾಪಾಲಾಗಿದೆ. ಅಷ್ಟಕ್ಕೂ ಭವನವೇನೂ ಪೂರ್ಣಪ್ರಮಾಣದಲ್ಲಿ ತಲೆ ಎತ್ತಿಲ್ಲ ಆರಂಭಿಕ ಹಂತದ ಕೆಲಸದೊಂದಿಗೆ ಮತ್ತೆ ಗರಬಡಿದಂತಾಗಿದೆ.

ಮಡಿಕೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಬಕಾರಿ ಉಪ ಆಯುಕ್ತರ ಕಚೇರಿ, ಜಿಲ್ಲಾ ತಂಡದ ಕಚೇರಿ, ಅಬಕಾರಿ ಉಪ ಅಧೀಕ್ಷಕರ ಕಚೇರಿ, ಮಡಿಕೇರಿ ಉಪ ವಿಭಾಗ ಹಾಗೂ ಅಬಕಾರಿ ನಿರೀಕ್ಷಕರ ಕಚೇರಿ, ಮಡಿಕೇರಿ ವಲಯ ಕಚೇರಿಗಳನ್ನು ಒಳಗೊಂಡAತೆ ಅಬಕಾರಿ ಭವನ ನಿರ್ಮಿಸುವುದು ಈ ಯೋಜನೆಯಾಗಿತ್ತು. ೨೦೦೮-೦೯ ನೇ ಇಸವಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅಬಕಾರಿ ಭವನ ನಿರ್ಮಿಸುವುದು ಚಿಂತನೆಯಾಗಿದ್ದು, ಇದಕ್ಕಾಗಿ ಆಗಿನ ಸರಕಾರ ರೂ. ೨೮ ಕೋಟಿಯನ್ನು ಆರಂಭಿಕವಾಗಿ ಪ್ರಕಟಿಸಿತ್ತು. ಇದರಲ್ಲಿ ಕೊಡಗು ಜಿಲ್ಲೆಯ ಅಬಕಾರಿ ಭವನವೂ ಒಂದಾಗಿತ್ತು.

ಜಾಗ ಹಂಚಿಕೆ

ಈ ಭವನ ನಿರ್ಮಾಣಕ್ಕೆಂದು ಕೊಡಗು ಜಿಲ್ಲಾಡಳಿತ ಆಗಿನ ಜಿಲ್ಲಾಧಿಕಾರಿಗಳ ಮೂಲಕ ಮಡಿಕೇರಿ ತಾಲೂಕಿನ ಕೆ. ನಿಡುಗಣೆ ಗ್ರಾಮದ ಸರ್ವೆ ನಂ ೧೪/೧/೨ ರಲ್ಲಿ ೧.೭೦ ಎಕರೆ ಜಾಗದ ನಿವೇಶನವನ್ನು ಹಂಚಿಕೆ ಮಾಡಿತ್ತು. ೨೦೦೮-೦೯ನೇ ಸಾಲಿನಲ್ಲಿ ಈ ಭವನದ ಕಾಮಗಾರಿಗೆಂದು ರೂ. ೭೦ ಲಕ್ಷ ಅನುದಾನ ಬಂದಿದೆ. ಸದರಿ ಅನುದಾನದಲ್ಲಿ ನೆಲಮಹಡಿಯನ್ನು ನಿರ್ಮಾಣ ಮಾಡಲಾಗಿದೆ. ಈ ಸಂದರ್ಭದಲ್ಲಿ ಇದು ಒಟ್ಟಾರೆಯಾಗಿ ರೂ ೨ ಕೋಟಿಯ ಯೋಜನೆಯಾಗಿತ್ತು.

ರೂ. ೨ ಕೋಟಿಯಿಂದ ರೂ. ೬.೫೦ ಕೋಟಿಗೆ..!

ಆರಂಭದಲ್ಲಿ ರೂ ೨ ಕೋಟಿಯ ಯೋಜನೆಗೆ ರೂ. ೭೦ ಲಕ್ಷ ದೊರೆತಿತ್ತು. ಇದರಲ್ಲಿ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ನೆಲಮಹಡಿ ನಿರ್ಮಾಣ ಕಾರ್ಯ ಆ ಸಂದರ್ಭದಲ್ಲಿ ನಡೆದಿದೆ. ಆದರೆ ತದ ನಂತರದಲ್ಲಿ ಚಿಕ್ಕಾಸೂ ಬಿಡುಗಡೆಯಾಗಿಲ್ಲ. ಇದೀಗ ಈ ಕಟ್ಟಡ ಕಾಡಿನೊಳಗಿನ ಭೂತ ಬಂಗಲೆಯಾಗಿದೆ.

ನೆಲಮಹಡಿ ನಿರ್ಮಾಣದ ಬಳಿಕ ಮೊದಲನೇ ಹಾಗೂ ಎರಡನೇ ಮಹಡಿಗಳ ನಿರ್ಮಾಣ ಕಾಮಗಾರಿಗೆ ೨೦೧೮-೧೯ನೇ ಸಾಲಿನಲ್ಲಿ ಮತ್ತೆ ಅಂದಾಜು ಕ್ರಿಯಾಯೋಜನೆ ಮಾಡಲಾಗಿದ್ದು, ಈ ಸಂದರ್ಭ ರೂ. ೪.೯೫ ಕೋಟಿಗೆ ಯೋಜನಾ ವೆಚ್ಚ ಏರಿಕೆಯಾಗಿತ್ತು. ಆದರೆ ೨೦೦೮-೦೯ನೇ ಸಾಲಿನ ರೂ ೭೦ ಲಕ್ಷ ಅನುದಾನದ ಬಳಿಕ ಯಾವುದೇ ಸರಕಾರಗಳಿಂದ ಅಬಕಾರಿ ಭವನ ನಿರ್ಮಾಣ ಯೋಜನೆಗೆ ಅನುದಾನ ಬಿಡುಗಡೆಯಾಗಿಲ್ಲ.

ಇದೀಗ ೨೦೨೩-೨೪ನೇ ಸಾಲಿನಲ್ಲಿ ಮತ್ತೆ ಲೋಕೋಪಯೋಗಿ ಇಲಾಖೆಯ ಮೂಲಕ ಭವನದ ಮುಂದಿನ ಕಾಮಗಾರಿಗೆ ಮತ್ತೆ ಕ್ರಿಯಾಯೋಜನೆ ಮಾಡಲಾಗಿದ್ದು, ಯೋಜನಾ ವೆಚ್ಚ ರೂ. ೬.೫೦ ಕೋಟಿಗೆ ಏರಿದೆ. ಭವನದ ಬಾಕಿ ಉಳಿದ ಕಟ್ಟಡ ನಿರ್ಮಾಣ, ಪೀಠೋಪಕರಣ ವ್ಯವಸ್ಥೆ, ನೀರು ಸರಬರಾಜು, ನೈರ್ಮಲೀಕರಣ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ, ಸಮರ್ಪಕ ರಸ್ತೆ, ಕಾಂಕ್ರೀಟ್ ಚರಂಡಿ, ಕಾಂಪೌAಡ್ ನಿರ್ಮಾಣ ಹಾಗೂ ಇತರ ಕಾಮಗಾರಿಗಳು ಅಗತ್ಯವಾಗಿದೆ.

ಇದೀಗ ಇನ್ನಷ್ಟು ಕೋಟಿ ಹೆಚ್ಚಳ

ರೂ. ೬.೫೦ ಕೋಟಿಯ ಕ್ರಿಯಾಯೋಜನೆಯಂತೆ ಪ್ರಸ್ತುತದ ಯೋಜನಾ ವೆಚ್ಚದ ಅಂದಾಜು ಮಾಡಿರುವುದು ೨೦೨೩-೨೪ನೇ ಸಾಲಿನಲ್ಲಿ. ಇದೀಗ ಮತ್ತೆ ಎರಡು ವರ್ಷಗಳು ಉರುಳಿರುವ ಹಿನ್ನೆಲೆ ಮತ್ತೆ ಅಂದಾಜು ಪಟ್ಟಿ ತಯಾರಿಸಲೇಬೇಕಾಗುತ್ತದೆ. ಈ ಹಿನ್ನೆಲೆ ಯೋಜನೆ ರೂ. ೬.೫೦ ಕೋಟಿಯಿಂದ ರೂ. ೧೦ ಕೋಟಿಗೆ ಏರಿಕೆಯಾದರೂ ಅಚ್ಚರಿಪಡಬೇಕಾಗಿಲ್ಲ.

ಭವನ ನಿರ್ಮಾಣದ ಯೋಜನೆಯನ್ನು ಪೂರ್ಣಗೊಳಿಸಲು ಅನುದಾನ ಕೋರಿ ಸರಕಾರಕ್ಕೆ ಅಬಕಾರಿ ಇಲಾಖೆಗೆ ನಿರಂತರವಾಗಿ ಮೂರು - ನಾಲ್ಕು ವರ್ಷದಿಂದ ಪತ್ರ ಬರೆಯಲಾಗುತ್ತಿದೆಯಾದರೂ ಇಲಾಖೆಯಾಗಲಿ, ಸರಕಾರವಾಗಲಿ “ಕ್ಯಾರೇ'' ಎನ್ನುತ್ತಿಲ್ಲ. ಇಂತಹ ಯೋಜನೆಗಳನ್ನು ಏತಕ್ಕಾಗಿ ಸಂಬAಧಿಸಿದ ಇಲಾಖೆ, ಸರಕಾರಗಳು ಹಮ್ಮಿಕೊಳ್ಳಬೇಕು ಎಂಬದು ಸಾರ್ವಜನಿಕವಾದ ಗಂಭೀರ ಪ್ರಶ್ನೆಯಾಗಿದೆ.