ಚೆಯ್ಯಂಡಾಣೆ, ಜು. ೧೩: ಸುನ್ನಿ ಸ್ಟೂಡೆಂಟ್ ಫೆಡರೇಶನ್ (ಎಸ್‌ಎಸ್‌ಎಫ್) ಮಡಿಕೇರಿ ಡಿವಿಷನ್ ಸಾಹಿತ್ಯೋತ್ಸವ ಕಾರ್ಯಕ್ರಮ ನಾಪೋಕ್ಲುವಿನಲ್ಲಿ ಎರಡು ದಿನಗಳ ಕಾಲ ಯಶಸ್ವಿಯಾಗಿ ನಡೆಯಿತು.

ನಾಪೋಕ್ಲು ಮಾರುಕಟ್ಟೆ ಮೈದಾನದಲ್ಲಿ ನಡೆದ ಸಾಹಿತ್ಯೋತ್ಸವ ಕಾರ್ಯಕ್ರಮಕ್ಕೆ ಗಣ್ಯರು ಧ್ವಜಾರೋಹಣ ನೆರವೇರಿಸಿ ಅದ್ಧೂರಿ ಚಾಲನೆ ನೀಡಿದ್ದರು. ತಾ. ೧೧ರ ರಾತ್ರಿ ಪ್ರಖ್ಯಾತ ವಾಗ್ಮಿ ಮೊಹಮ್ಮದ್ ರಾಫಿ ಇಮಮಿ ಕಾಮಿಲ್ ಸಖಾಫಿ ಮುಖ್ಯ ಭಾಷಣ ಮಾಡಿದರು.

ಈ ಸಂದರ್ಭ ವೇದಿಕೆಯಲ್ಲಿ ಎಸ್‌ವೈಎಸ್ ರಾಜ್ಯ ಉಪಾಧ್ಯಕ್ಷ ಸಯ್ಯಿದ್ ಇಲ್ಯಾಸ್ ಅಲ್ ಐದರೂಸಿ ತಂಙಳ್, ಸಯ್ಯಿದ್ ಸೈಫುದ್ದೀನ್ ತಂಙಳ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ಮಡಿಕೇರಿ ಡಿವಿಷನ್ ಗೆ ಒಳಪಟ್ಟ ೩ ಸೆಕ್ಟರ್ ಗಳ ೨೭ ಯೂನಿಟ್ ಗಳಿಂದ ೨೫೦ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದರು. ವಿವಿಧ ಭಾಷೆಗಳಲ್ಲಿ ಭಾಷಣ, ಹಾಡು, ಕ್ಯಾಲಿಗ್ರಫಿ, ಪ್ರಬಂಧ, ಬರವಣಿಗೆ, ಕವಿತೆ ವಾಚನ, ಕವಿತೆ ಬರವಣಿಗೆ, ಕಥೆ ರಚನೆ ಹಾಗೂ ವಿವಿಧ ಸ್ವರ್ಧೆಗಳು ನಡೆದವು.

ಎಮ್ಮೆಮಾಡು ಸೆಕ್ಟರ್ ೧೩೧೦ ಅಂಕ ಪಡೆದು ಪ್ರಥಮ ಸ್ಥಾನಗಳಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ನಾಪೋಕ್ಲು ಸೆಕ್ಟರ್ ೧೧೨೭ ಅಂಕ ಪಡೆದು ದ್ವಿತೀಯ ಸ್ಥಾನಗಳಿಸಿ ರನ್ನರ್ಸ್ ಪ್ರಶಸ್ತಿಗೆ ಭಾಜನವಾಯಿತು. ಮಡಿಕೇರಿ ಸೆಕ್ಟರ್ ೯೧೨ ಅಂಕ ಪಡೆದು ತೃತೀಯ ಸ್ಥಾನ ಪಡೆದು ಕೊಂಡಿತು.

ಎಸ್‌ಎಸ್‌ಎಫ್ ಮಡಿಕೇರಿ ಡಿವಿಷನ್ ಚೆರ್ಮೆನ್ ಜಂಶಿರ್ ಸಖಾಫಿ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭವನ್ನು ಎಸ್ ಜೆಎಂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಸುದ್ದಿನ್ ಅಮ್ಜದಿ ಉದ್ಘಾಟಿಸಿ ಮಾತನಾಡಿದರು.ಎಸ್‌ವೈಎಸ್ ಜಿಲ್ಲಾಧ್ಯಕ್ಷರಾದ ಮುನೀರ್ ಮಲ್ಳರಿ ಸಂದೇಶ ಭಾಷಣ ನಡೆಸಿದರು. ೨೦೨೭ರ ಮಡಿಕೇರಿ ಡಿವಿಷನ್ ಸಾಹಿತ್ಯೋತ್ಸವ ಕಾರ್ಯಕ್ರಮಕ್ಕೆ ಅತಿಥ್ಯ ವಹಿಸುವ ಪಡಿಯಾಣಿ ಯೂನಿಟ್ ನ ಕಾರ್ಯಕರ್ತರಿಗೆ ಗಣ್ಯರು ಎಸ್‌ಎಸ್‌ಎಫ್ ಧ್ವಜವನ್ನು ಹಸ್ತಾಂತರಿಸಿದರು.

ಈ ಸಂದರ್ಭ ಎಸ್‌ಎಸ್‌ಎಫ್ ಮಡಿಕೇರಿ ಡಿವಿಷನ್ ಅಧ್ಯಕ್ಷ ಹಾರಿಸ್ ಝುಹರಿ, ಎಸ್ ವೈಎಸ್ ರಾಜ್ಯ ಉಪಾಧ್ಯಕ್ಷರಾದ ಸಯ್ಯಿದ್ ಇಲ್ಯಾಸ್ ತಂಙಳ್, ಸಯ್ಯಿದ್ ಸೈಫುದ್ದಿನ್ ತಂಙಳ್, ಸಯ್ಯಿದ್ ಝಕರಿಯ ತಂಙಳ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ ಕೊಟ್ಟಮುಡಿ, ಕೊಡಗು ಸುನ್ನೀ ವೆಲ್ಫೇರ್‌ನ ಉಸ್ಮಾನ್ ಹಾಜಿ, ಕೆಸಿಎಫ್ ಅಂತರರಾಷ್ಟಿçÃಯ ನಾಯಕ ಅಬ್ದುಲ್ ಜಲೀಲ್ ನಿಝಾಮಿ, ಎಸ್‌ವೈಎಸ್ ಮಾಜಿ ರಾಜ್ಯಾಧ್ಯಕ್ಷ ಅಬ್ದುಲ್ ಹಫೀಲ್ ಸಅದಿ, ಎಸ್‌ಜೆಎಂ ಜಿಲ್ಲಾಧ್ಯಕ್ಷರಾದ ಅಬ್ದುಲ್ಲ ಸಖಾಫಿ, ಮಾರ್ಕಝ್‌ನ ಇಸ್ಮಾಯಿಲ್ ಸಖಾಫಿ, ಶಾದುಲಿ ಹಾಜಿ, ರಾಶೀದ್ ಅನ್ವಾರಿ, ಜಾಬೀರ್ ನಿಝಾಮಿ, ಮುಸ್ತಫಾ ಸಖಾಫಿ, ಅರಫಾತ್, ಜುನೈದ್ ನೆಲ್ಯಾಹುದಿಕೇರಿ, ಬಷೀರ್ ಅಝಾದ್ ನಗರ, ಮೊಹಮ್ಮದ್ ರಾಫಿ ಹಿಮಮಿ, ಅಸ್ಲಂ, ಜುನೈದ್ ಬೇತ್ರಿ, ಉಸ್ಮಾನ್ ಮೂರ್ನಾಡು, ಗಫೂರ್ ಮಾಪಿಳ್ಳೆತೊಡ್, ಶಫೀಕ್ ಎಡತರ, ಸುಬೈರ್ ನಾಪೋಕ್ಲು, ಯೂನಸ್, ಫಾರೂಕ್, ತಶ್ರೀಪ್, ಹಾರಿಸ್ ಟಿ.ಎಚ್., ಆಸ್ಕರ್, ನೌಫಲ್ ಸೇರಿದಂತೆ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ಸಯ್ಯಿದ್ ಸೈಫುದ್ದಿನ್ ಅಲ್ ಐದರೂಸಿ ತಂಙಳ್ ಪ್ರಾರ್ಥಿಸಿ, ಎಸ್‌ಎಸ್‌ಎಫ್ ಮಡಿಕೇರಿ ಡಿವಿಷನ್ ಕನ್ವಿನರ್ ಜೌಹರ್ ಕುಂಜಿಲ ಸ್ವಾಗತಿಸಿ, ಡಿವಿಷನ್ ಪ್ರಧಾನ ಕಾರ್ಯದರ್ಶಿ ಜುನೈದ್ ಬೇತ್ರಿ ಸರ್ವರನ್ನು ವಂದಿಸಿದರು.