ಕಡಂಗ, ಜು. ೧೨: ನಾಪೋಕ್ಲು ಸಮೀಪದ ಕುಂಜಿಲ ಪೈನರಿ ಮುಸ್ಲಿಂ ಜಮಾಅತ್‌ನ ಅಧ್ಯಕ್ಷ ಶೌಕತ್ ಅಲಿ ಅಧ್ಯಕ್ಷತೆಯಲ್ಲಿ ಕುಂಜಿಲ ಪೈನರಿ ಸಭಾಂಗಣದಲ್ಲಿ ೨೦೨೫/೨೬ನೇ ಸಾಲಿನ ವಾರ್ಷಿಕ ಮಹಾಸಭೆ ನಡೆಯಿತು.

ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಕುಂಡAಡ ಸಫಾ ಮಹಮ್ಮದ್ ಹಾಜಿ, ಉಪಾಧ್ಯಕ್ಷರಾಗಿ ಮುಸ್ತು ಬಾರಿಕೆ, ಕಾರ್ಯದರ್ಶಿಯಾಗಿ ಶರೀಫ್ ಪೊಯಕ್ಕರೆ, ಕೋಶಾಧಿಕಾರಿಯಾಗಿ ರಶೀದ್ ವಯಕೋಲ್, ರೌಲತುಲ್ ಉಲೂಮ್ ದರ್ಸ್ ಅಧ್ಯಕ್ಷರಾಗಿ ಹಾರಿಸ್ ಝ್ಯನಿ, ಕಾರ್ಯದರ್ಶಶಿಯಾಗಿ ಸಾಜಿದ್ ಪಯ್ಯಡಿ, ಕೋಶಾಧಿಕಾರಿಯಾಗಿ ಮಹಮದ್ ಹಾಜಿ ತರಮಲ್, ರಿಲೀಫ್ ಫಂಡ್ ಅಧ್ಯಕ್ಷರಾಗಿ ಮುಸ್ತಫಾ ಮಾನಿ, ಕಾರ್ಯದರ್ಶಿಯಾಗಿ ಮಜೀದ್ ಕುಂಡAಡ, ಕೋಶಾಧಿಕಾರಿಯಾಗಿ ನಜೀರ್ ಸಖಾಫಿ ಮಕ್ಕಿ, ಕಟ್ಟಡ ಸಮಿತಿ ಅಧ್ಯಕ್ಷರಾಗಿ ಮಹಮದ್ ಹಾಜಿ ಅದವೇಲ್, ಕಾರ್ಯದರ್ಶಿಯಾಗಿ ಮೊಯ್ದುಕುನ್ನಿ ಪೂಯಕರೆ, ಕೋಶಾಧಿಕಾರಿಯಾಗಿ ರಝು ಕುಂಡAಡ, ಸಲಹಾ ಸಮಿತಿ ಸದಸ್ಯರಾಗಿ ವಯಕೋಲ್ ಅಬು, ಹಂಸ ಪಯ್ಯಡಿ, ಮಹಮದ್ ಉಸ್ತಾದ್ ಪೇನತೋಡ್, ಇಬ್ರಾಹಿಮ್ ಬಾರಿಕೆ, ಅಬೂಬಕ್ಕರ್, ಐಡಿಯಲ್ ಆಪು ಅವರನ್ನು ಸಮಿತಿ ಸದಸ್ಯರುಗಳಾಗಿ ನೇಮಿಸಲಾಯಿತು.