ಮಡಿಕೇರಿ, ಜು. ೧೨: ಜವಾಹರ್ ನವೋದಯ ವಿದ್ಯಾಲಯದ ವತಿಯಿಂದ ೨೦೨೭-೨೮ನೇ ಶೈಕ್ಷಣಿಕ ವರ್ಷದ ೬ನೇ ತರಗತಿ ಪ್ರವೇಶಕ್ಕಾಗಿ ನಡೆಯುವ ಜವಾಹರ್ ನವೋದಯ ವಿದ್ಯಾಲಯ ಆಯ್ಕೆ ಪರೀಕ್ಷೆ (ಎಓಗಿSಖಿ-೨೦೨೭)ಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅಭ್ಯರ್ಥಿಯು ೧೦.೦೫.೨೦೧೫ ರಿಂದ ೩೧.೦೭.೨೦೧೭ ರ ನಡುವಿನ ಅವಧಿಯಲ್ಲಿ ಜನಿಸಿರಬೇಕು. ೨೦೨೬-೨೭ನೇ ಶೈಕ್ಷಣಿಕ ವರ್ಷದಲ್ಲಿ ೫ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಥಿಯು ಸಂಬAಧಿತ ಜಿಲ್ಲೆಯ ನಿವಾಸಿಯಾಗಿರಬೇಕು ಹಾಗೂ ನವೋದಯ ವಿದ್ಯಾಲಯ ಸಮಿತಿಯು ನಿಗದಿಪಡಿಸಿರುವ ಅರ್ಹತಾ ಷರತ್ತುಗಳನ್ನು ಪೂರೈಸಿರಬೇಕು. ಅರ್ಜಿಯನ್ನು ಆನ್‌ಲೈನ್ ಮೂಲಕ ಉಚಿತವಾಗಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ತಾ. ೩೧ ಕೊನೆಯ ದಿನ

ಹೆಚ್ಚಿನ ಮಾಹಿತಿಗಾಗಿ ನವೋದಯ ವಿದ್ಯಾಲಯ ಸಮಿತಿಯ ಅಧಿಕೃತ ವೆಬ್‌ಸೈಟ್ hಣಣಠಿs://ಟಿಚಿvoಜಚಿಥಿಚಿ.gov.iಟಿ ಅನ್ನು ಸಂಪರ್ಕಿಸಬಹುದಾಗಿದೆ.