ಮಡಿಕೇರಿ, ಜು. ೧೨: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ತಾ. ೨೪ ರಂದು ೧೮ ರಿಂದ ೩೦ ವರ್ಷದೊಳಗಿನ ಕಲಾ ತಂಡಗಳಿAದ ಯುವ ಸೌರಭ ಕಲಾ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ.
ಸಾರ್ವಜನಿಕರು ಹಾಗೂ ಕಾಲೇಜು ವಿದ್ಯಾರ್ಥಿಗಳಲ್ಲಿ ಇರುವ ಪ್ರತಿಭೆಯನ್ನು ಗುರುತಿಸುವ ಸಲುವಾಗಿ ಸುಗಮ ಸಂಗೀತ, ಜಾನಪದ ಗೀತ, ನೃತ್ಯ ಮತ್ತು ಸಮೂಹ ನೃತ್ಯ, ಜಾನಪದ ಕಲೆಗಳು-ಕಂಸಾಳೆ, ಡೊಳ್ಳು ಹಾಗೂ ನಾಟಕ ಮತ್ತು ಯಕ್ಷಗಾನ ೧ ಕಲಾ ಪ್ರದರ್ಶನಕ್ಕೆ ೧ ತಂಡವನ್ನು ಕಳುಹಿಸಿ ಸಹಕರಿಸುವಂತೆ ಕೋರಿದೆ. ಪಾಲ್ಗೊಂಡ ಕಲಾ ತಂಡಕ್ಕೆ ಸಂಭಾವನೆ ನೀಡಲಾಗುತ್ತದೆ. ಪಾಲ್ಗೊಳ್ಳಲು ಇಚ್ಚಿಸುವ ಕಲಾ ತಂಡಗಳು ತಾ. ೧೫ ರೊಳಗೆ ಹೆಸರು ನೀಡಬೇಕಾದ ದೂರವಾಣಿ ಸಂಖ್ಯೆ: +೯೧ ೬೩೬೧೩೮೯೮೯೪ ನ್ನು ಸಂಪರ್ಕಿಸಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ತಿಳಿಸಿದ್ದಾರೆ.