ಕಣಿವೆ, ಜು. ೧೨: ಕುಶಾಲನಗರ ಪುರಸಭಾ ವ್ಯಾಪ್ತಿಯಲ್ಲಿನ ಸೋಮೇಶ್ವರ ದೇವಾಲಯದ ಬಳಿಯ ರಸ್ತೆಯಲ್ಲಿ ಮರಣ ಗುಂಡಿಗಳು ನಿರ್ಮಾಣವಾಗಿವೆ.

ಮಳೆಯ ನೀರು ಸರಾಗವಾಗಿ ಹರಿಯಲು ಸೂಕ್ತ ಚರಂಡಿಗಳು ಇಲ್ಲದ ಕಾರಣ ನೀರು ರಸ್ತೆಯ ಬದಿಯಲ್ಲಿ ಹರಿದು ಅಪಾಯಕಾರಿ ಗುಂಡಿಗಳು ನಿರ್ಮಾಣಗೊಂಡು ವರ್ಷ ಕಳೆದರೂ ಕೂಡ ಇದುವರೆಗೂ ಸಂಬAಧಿಸಿದವರು ಕೂಡ ಇತ್ತ ಗಮನ ಹರಿಸಿಲ್ಲ. ಪ್ರವಾಸಿ ಮಂದಿರದಿAದ ರೈತ ಸಹಕಾರ ಭವನಕ್ಕೆ ತೆರಳುವ ರಸ್ತೆಯಲ್ಲಿಯೂ ಇಂತಹುದೇ ಸ್ವರೂಪದ ಗುಂಡಿಗಳು ನಿರ್ಮಾಣವಾಗಿವೆ.

ದ್ವಿಚಕ್ರ ವಾಹನ ಸವಾರರು ಆಪತ್ತಿಗೆ ಸಿಲುಕುವ ಮುನ್ನಾ ಪುರಸಭೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ರಸ್ತೆಗಳ ಗುಂಡಿಗಳನ್ನು ಮುಚ್ಚುವ ಮೂಲಕ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.