ಕೂಡಿಗೆ, ಜು. ೧೨: ಕೂಡಿಗೆ ಆಂಜೆಲಾ ವಿದ್ಯಾನಿಕೇತನದ ಮಂತ್ರಿಮAಡಲದ ಪದಗ್ರಹಣ ಸಮಾರಂಭ ಶಾಲಾ ಸಭಾಂಗಣದಲ್ಲಿ ನೆರವೇರಿತು.

೨೦೨೬-೨೭ನೇ ಶೈಕ್ಷಣಿಕ ಸಾಲಿನ ಕ್ಯಾಬಿನೆಟ್ ಮಂತ್ರಿಮAಡಲದ ಪದಗ್ರಹಣ ಕಾರ್ಯಕ್ರಮಕ್ಕೆ ಮೈಸೂರು ಘಟಕದ ಪ್ರಿನ್ಸಿಪಲ್ ಇನ್ಸ್ಪೆಕ್ಟರ್ ಹವಿಲ್ದಾರ್ ವಿನಯ ಎಂ.ಎಸ್. ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಚಾಲನೆ ನೀಡಿದರು..

ಶಾಲಾ ಮುಖ್ಯೋಪಾಧ್ಯಾಯರಾದ ಭಗಿನಿ ಅನಿತಾ ಡಿಸೋಜ ನೂತನವಾಗಿ ಆಯ್ಕೆಯಾದ ಶಾಲಾ ನಾಯಕರು ಹಾಗೂ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು.

ವಿದ್ಯಾರ್ಥಿಗಳು ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕತೆ, ಶಿಸ್ತು ಹಾಗೂ ಸೇವಾ ಮನೋಭಾವದಿಂದ ನಿರ್ವಹಿಸುವುದಾಗಿ ಪ್ರತಿಜ್ಞೆ ಸ್ವೀಕರಿಸಿದರು. ಹಾಗೂ ಭಗಿನಿ ಮೇರಿ ಮಚ್ಚಾಡೋ ಮಕ್ಕಳಿಗೆ ಅಧಿಕಾರದ ಗುರುತುಗಳನ್ನು (ಬ್ಯಾಡ್ಜ್) ನೀಡಿದರು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ಅನಿತಾ ಡಿಸೋಜಾ ಹಾಗೂ ವ್ಯವಸ್ಥಾಪಕಿ ಸಿಸ್ಟರ್ ಮೇರಿ ಮಚಾಡೋ ಗೌರವ ಅತಿಥಿಗಳಾದ ಹವಿಲ್ದಾರ್ ವಿನಯ್ ಎಂ.ಎಸ್. ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ನಾಯಕತ್ವ, ಜವಾಬ್ದಾರಿ ಮತ್ತು ಸೇವಾ ಮನೋಭಾವದ ಕುರಿತು ಪ್ರೇರಣಾದಾಯಕ ಸಂದೇಶ ನೀಡಿದರು.

ಮುಖ್ಯ ಅತಿಥಿಗಳಾದ ವಿನಯ್ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು, ಒಗ್ಗಟ್ಟು, ಉತ್ತಮ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಶಾಲೆಯ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಭಗಿನಿ ನಿರ್ಮಲ, ಹರೀಶ್, ವಸಂತ್, ರೇಖಾ ಬಿ.ಎನ್., ಕಾವ್ಯಶ್ರೀ ಹಾಗೂ ಲತಾ ಎಸ್.ಪಿ. ಉಪಸ್ಥಿತರಿದ್ದರು.