ಕಡAಗ, ಜು. ೯: ವೀರಾಜಪೇಟೆಯ ಅನ್ವಾರುಲ್ ಹುದಾ ಪಬ್ಲಿಕ್ ಶಾಲೆಯಲ್ಲಿ ೨೦೨೬-೨೭ನೇ ಶೈಕ್ಷಣಿಕ ಸಾಲಿನ ನೂತನ ವಿದ್ಯಾರ್ಥಿ ನಾಯಕರ ಪದಗ್ರಹಣ ಸಮಾರಂಭವು ಶಾಲಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಭಾರತೀಯ ಸೇನೆಯ ನಿವೃತ್ತ ಯೋಧ ಸಲಾಂ ಎಂ.ಕೆ. ಹವಲ್ದಾರ್ ಅವರು, ಭಾರತೀಯ ಸೇನೆಯಲ್ಲಿ ೧೭ ವರ್ಷಗಳ ಕಾಲ ಸಲ್ಲಿಸಿದ ಸೇವೆಯ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊAಡರು.
ವಿದ್ಯಾರ್ಥಿಗಳು ಶಿಸ್ತು, ಸಮಯಪ್ರಜ್ಞೆ, ಜವಾಬ್ದಾರಿ, ಪ್ರಾಮಾಣಿಕತೆ ಹಾಗೂ ದೇಶಪ್ರೇಮದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ನಾಯಕರಾಗಿ ಬೆಳೆಯಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ನಾಯಕರಿಗೆ ಮುಖ್ಯ ಅತಿಥಿಗಳು ಹಾಗೂ ಶಾಲಾ ಪ್ರಾಂಶುಪಾಲರು ಬ್ಯಾಡ್ಜ್ ತೊಡಿಸಿ ಅಧಿಕಾರದ ಜವಾಬ್ದಾರಿ ಹಸ್ತಾಂತರಿಸಿದರು. ಬಳಿಕ ವಿದ್ಯಾರ್ಥಿ ನಾಯಕರು ಪ್ರಮಾಣವಚನ ಸ್ವೀಕರಿಸಿದರು. ಶಾಲಾ ನಾಯಕಿಯಾಗಿ ಹುದಾ ಅಲೀರಾ, ಹೆಡ್ ಬಾಯ್ ಆಗಿ ನಝಲ್, ಹೆಡ್ ಗರ್ಲ್ ಆಗಿ ರಮೀಝಾ, ಕ್ರೀಡಾ ಕಾರ್ಯದರ್ಶಿಗಳಾಗಿ ಶಹಲ್ ಸಿ.ಯು. ಹಾಗೂ ರಿಲಾ ಫಾತಿಮಾ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಶಹಝಾದ್ ಹಾಗೂ ಅಫ್ರೀನಾ, ಶಿಸ್ತು ಕಾರ್ಯದರ್ಶಿಗಳಾಗಿ ರಫ್ಹಾನ್ ಹಾಗೂ ರಿಜ್ವಾನಾ ಅಧಿಕಾರ ಸ್ವೀಕರಿಸಿದರು.
ಶಾಲೆಯ ಪ್ರಾಂಶುಪಾಲರಾದ ಹಸೈನಾರ್ ಎನ್. ಅವರು ವಿದ್ಯಾರ್ಥಿಗಳಿಗೆ ನಾಯಕತ್ವದ ಮಹತ್ವದ ಕುರಿತು ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ಅನ್ವಾರುಲ್ ಹುದಾ ವಿದ್ಯಾಸಂಸ್ಥೆಗಳ ಮುಖ್ಯಸ್ಥರಾದ ಶೈಖುನಾ ಅಶ್ರಫ್ ಅಹ್ಸಾನಿ, ಧಾರ್ಮಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಯಾಕೂಬ್ ಮಾಸ್ಟರ್, ಶಾಲಾ ಆಡಳಿತಾಧಿಕಾರಿ ಇಲ್ಯಾಸ್ ಅನ್ವಾರಿ, ಶಿಕ್ಷಕರಾದ ಶಕೀರ್ ಮಾಸ್ಟರ್, ಶಿಕ್ಷಕ-ಶಿಕ್ಷಕಿಯರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕಿ ಅಮಾನತ್ ಸ್ವಾಗತಿಸಿ, ಮನೋಜ್ ವಂದಿಸಿದರು.