ಮಡಿಕೇರಿ, ಜು. ೯: ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ನೂತನ ಅಧ್ಯಕ್ಷರಾಗಿ ನಿವೃತ್ತ ಮುಖ್ಯೋಪಾಧ್ಯಾಯ ಟಿ.ಜಿ. ಪ್ರೇಮ್ ಕುಮಾರ್ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಮಡಿಕೇರಿಯ ಕೊಡಗು ಪತ್ರಿಕಾ ಭವನದ ಸಭಾಂಗಣದಲ್ಲಿ ಬಳಗದ ಅಧ್ಯಕ್ಷ ಲೋಕನಾಥ ಅಮೆಚೂರ್ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಇವರನ್ನು ಆರಿಸಲಾಯಿತು. ಅಲ್ಲದೆ ಉಪಾಧ್ಯಕ್ಷರಾಗಿ ಎಂ. ಮೊಯ್ದಿನ್, ರೇವತಿ ರಮೇಶ್, ಗೌರವ ಕಾರ್ಯದರ್ಶಿಯಾಗಿ ಭಾರತಿ ರಮೇಶ್, ಕೋಶಾಧಿಕಾರಿಯಾಗಿ ಕಡ್ಲೇರ ತುಳಸಿ ಮೋಹನ್, ಸಹಕಾರ್ಯದರ್ಶಿಯಾಗಿ ಕೆ.ವಿ. ಉಮೇಶ್ ಅವರನ್ನು ಆರಿಸಲಾಯಿತು. ನಿರ್ದೇಶಕರುಗಳಾಗಿ ಎಂ.ಪಿ. ಕೇಶವ ಕಾಮತ್, ಟಿ.ಪಿ. ರಮೇಶ್, ಅಂಬೆಕಲ್ ನವೀನ್, ಕೆ.ಟಿ. ಬೇಬಿ ಮ್ಯಾಥ್ಯು, ನೆರವಂಡ ಉಮೇಶ್, ಲೋಕನಾಥ್ ಅಮೆಚೂರ್, ಶ್ವೇತಾ ರವೀಂದ್ರ, ಬಿ.ಆರ್. ಜೋಯಪ್ಪ, ಸುನಿತಾ ಪಿ.ಪಿ. ಗೌರವ ಸಲಹೆಗಾರರಾಗಿ ಬಿ.ಎ. ಷಂಶುದ್ದೀನ್, ಎಸ್.ಐ. ಮುನೀರ್ ಅಹ್ಮದ್, ಜಯಪ್ಪ ಹಾನಗಲ್ ಅವರನ್ನು ಆರಿಸಲಾಯಿತು.
ಮಹಾಸಭೆಯಲ್ಲಿ ಕಳೆದ ವಾರ್ಷಿಕ ವರದಿಯನ್ನು ಗೌರವ ಕಾರ್ಯದರ್ಶಿ ಭಾರತಿ ರಮೇಶ್ ಮಂಡಿಸಿದರು. ವಾರ್ಷಿಕ ಲೆಕ್ಕಪತ್ರವನ್ನು ಕೋಶಾಧಿಕಾರಿ ಕಡ್ಲೇರ ತುಳಸಿ ಮೋಹನ್ ಮಂಡಿಸಿ ಸಭೆಯ ಒಪ್ಪಿಗೆ ಪಡೆದರು. ಮಹಾಸಭೆಯ ಪ್ರಾರಂಭದಲ್ಲಿ ನಿಧನ ಹೊಂದಿದ ಸಂಘದ ಸದಸ್ಯರುಗಳಾದ ಲಿಯಾಕತ್ ಆಲಿ, ಮನು ಶೆಣೈ, ಟಿ.ಸಿ. ತಮ್ಮಯ್ಯ, ಕೇಶವ ಪೆರಾಜೆ ಅವರ ಆತ್ಮಕ್ಕೆ ಶಾಂತಿ ಕೋರಿ ¸
Àಂತಾಪ ಸೂಚಿಸಲಾಯಿತು. ಸದಸ್ಯರುಗಳಾದ ಚಂದನ್ ಕಾಮತ್, ಪ್ರೇಮ ರಾಘವಯ್ಯ ಇನ್ನಿತರರು ಉಪಸ್ಥಿತರಿದ್ದರು. ರೇವತಿ ರಮೇಶ್ ಸ್ವಾಗತಿಸಿ, ಭಾರತಿ ರಮೇಶ್ ನಿರೂಪಿಸಿದರು.