ಕೂಡಿಗೆ: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನವಗ್ರಾಮದಲ್ಲಿರುವ ಪ್ರಮೀಳಾ ರಾಮನಾಯಕ್ ಎಂಬವರಿಗೆ ಸೇರಿದ ಮನೆಯ ತಳಪಾಯ ಮತ್ತು ಗೋಡೆ ಬಿರುಕುಗೊಂಡಿರುವ ಘಟನೆ ಕಂಡುಬರುತ್ತಿದೆ.
ಬಡ ಕುಟುಂಬದ ಪ್ರಮೀಳಾ ರಾಮನಾಯಕ್ ಎಂಬವರಿಗೆ ವಸತಿ ರಹಿತರ ಫಲಾನುಭವಿಗಳ ಆಯ್ಕೆ ಸಂದರ್ಭ ಕಳೆದ ೧೫ ವರ್ಷಗಳ ಹಿಂದೆ ನಿರ್ಮಿಸಲಾದ ರಾಜೀವ್ ಗಾಂಧಿ ಆಶ್ರಯ ಮನೆಯ ತಳಪಾಯ ಮತ್ತು ಮನೆಯ ಸುತ್ತಲಿನ ಗೋಡೆ ಬಿರುಕುಗೊಂಡು ಭಯದ ವಾತಾವರಣದಲ್ಲಿ ಬಡ ಕುಟುಂಬದವರು ತಮ್ಮ ಜೀವನ ಸಾಗಿಸುತ್ತಿದ್ದಾರೆ. ಸಂಬAಧಿಸಿದ ಇಲಾಖೆ ಅಧಿಕಾರಿ ವರ್ಗದವರು ಸ್ಥಳ ಪರಿಶೀಲನೆ ನಡೆಸಿ ಮುಂದಾಗುವ ಅನಾಹುತ ತಡೆಯಲು ಮುಂದಾಗಬೇಕೆAದು ಸ್ಥಳೀಯ ಗ್ರಾಮಸ್ಥರ ಆಗ್ರಹವಾಗಿದೆ.