ಮಡಿಕೇರಿ, ಜು. ೯: ದಕ್ಷಿಣ ಕೊಡಗಿನ ಇತಿಹಾಸ ಪ್ರಸಿದ್ಧ ಬಾಡಗರಕೇರಿ ಗ್ರಾಮದಲ್ಲಿರುವ ಶ್ರೀ ಮೃತ್ಯುಂಜಯ ಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಕಾರ್ಯ ದೇವರ ಬಿಂಬ ಪುನರ್ ಪ್ರತಿಷ್ಠಾಪನೆಯೊಂದಿಗೆ ಇಂದು ಸಂಪನ್ನಗೊAಡಿತು.

ತಾ. ೬ ರಿಂದ ಪ್ರಾರಂಭಗೊAಡಿದ್ದ ವಿವಿಧ ಪೂಜಾ ಕೈಂಕರ್ಯಗಳ ಬಳಿಕ ಅಂತಿಮ ದಿನವಾಗಿದ್ದ ಇಂದು ಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಜರುಗಿದ ವಿಧಿ ವಿಧಾನಗಳು ನೆರೆದಿದ್ದ ಭಕ್ತಾದಿಗಳನ್ನು ಪುಳಕಿತಗೊಳಿಸಿತು. ಗ್ರಾಮದ, ನಾಡಿನ ಭಕ್ತಾದಿಗಳು ಪೂಜಾ ಕೈಂಕರ್ಯಗಳಲ್ಲಿ ಶ್ರದ್ಧಾಭಕ್ತಿಯೊಂದಿಗೆ ಪಾಲ್ಗೊಂಡು ಅಪರೂಪದ ಧಾರ್ಮಿಕ ವೈಭವವನ್ನು ಸಾಕ್ಷೀಕರಿಸಿದರು.

ವರ್ಷದ ಎಲ್ಲಾ ದಿನಗಳಲ್ಲೂ ಮೃತ್ಯುಂಜಯ ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು, ಅನ್ನದಾನ ಜರುಗುವ ಈ ದೇವಾಲಯದಲ್ಲಿನ ಕೆಲವೊಂದು ಜೀರ್ಣೋದ್ಧಾರ ಕಾರ್ಯಗಳನ್ನು ಮಾರ್ಚ್ ೨೨ ರಿಂದ ಪ್ರಾರಂಭಿಸಲಾಗಿದ್ದು, ಈ ಕೆಲಸ ಕಾರ್ಯ ಮುಕ್ತಾಯದ ಬಳಿಕ ಅಷ್ಟಬಂಧ ಬ್ರಹ್ಮಕಲಶೋತ್ಸವ ಕೈಂಕರ್ಯವನ್ನು ೪ ದಿನಗಳ ಕಾಲ ಹಮ್ಮಿಕೊಳ್ಳಲಾಗಿತ್ತು.

ಗುರುವಾರ ಬೆಳಿಗ್ಗೆ ೭ ರಿಂದ ದೇವಾಲಯದಲ್ಲಿ ಗಣಪತಿ ಹೋಮದೊಂದಿಗೆ ಕೈಂಕರ್ಯ ಪ್ರಾರಂಭಗೊAಡು, ತತ್ವಹೋಮ, ತತ್ವ ಕಲಶಪೂಜೆ, ೯.೦೯ ರಿಂದ ೧೦.೨೨ರ ಸಿಂಹ ಲಗ್ನದ ಶುಭ ಮುಹೂರ್ತದಲ್ಲಿ ಶ್ರೀ ಮೃತ್ಯುಂಜಯ ದೇವರ ಬಿಂಬ ಪ್ರತಿಷ್ಠೆ, ಅಷ್ಟಬಂಧ ಲೇಪನ, ಜೀವಕಲಶಾಭಿಷೇಕ, ಶಿಖರ ಪ್ರತಿಷ್ಠೆ, ತತ್ವಕಲಶಾಭಿಷೇಕ,

೪ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ಮಹಾಪೂಜೆ, ಮಂತ್ರಾಕ್ಷತೆಯೊAದಿಗೆ ವಿಧಿ - ವಿಧಾನಗಳು ಪೂರ್ಣಗೊಂಡವು. ಚಂಡೆವಾದ್ಯ, ಗಂಟೆ - ಜಾಗಟೆಗಳ ನಿನಾದದೊಂದಿಗೆ ಕ್ಷೇತ್ರದಲ್ಲಿ ಭಕ್ತಿಯ ಪರಾಕಾಷ್ಠೆ ಕಂಡುಬAದಿತು.

ದೈವಿಕ ಕೈಂಕರ್ಯದ ಹಿನ್ನೆಲೆ ದೇವಾಲಯ ಹೂವಿನ ಅಲಂಕಾರ, ವಿದ್ಯುತ್ ಅಲಂಕಾರದೊAದಿಗೆ ಕಂಗೊಳಿಸುತ್ತಿತ್ತು. ಪ್ರಮುಖವಾಗಿ ದೇವರ ಗರ್ಭಗುಡಿ, ತೀರ್ಥಮಂಟಪ, ಗಣಪತಿ ಗುಡಿಯನ್ನು ಶಿಲೆಯ ಕೆತ್ತನೆಯಲ್ಲಿ ಜೀರ್ಣೋದ್ಧಾರಗೊಳಿಸಲಾಗಿದ್ದು, ಇದೀಗ ದೇಗುಲ ಆಕರ್ಷಣೆಯ ತಾಣವಾಗಿಯೂ ಪರಿವರ್ತನೆಗೊಂಡಿದೆ. ಬೆಳಿಗ್ಗೆ ಸ್ಥಳೀಯ ಮಹಿಳೆಯರು ತಳಿಯತಕ್ಕಿ ಬೊಳಕ್ ಸಹಿತವಾಗಿ ದೇಗುಲದ ಮುಖ್ಯದ್ವಾರದಿಂದ ಒಳಭಾಗದತ್ತ ಸಾಂಪ್ರದಾಯಿಕ ಉಡುಗೆಯಲ್ಲಿ ಸಾಗಿಬಂದರು.

ಹಸುವಿನ ಪ್ರವೇಶ ಸೇರಿದಂತೆ ಹಲವು ರೀತಿಯ ದೈವಿಕ ವಿಧಿ - ವಿಧಾನಗಳು ಭಕ್ತರನ್ನು ಭಾವನಾಲೋಕಕ್ಕೆ ಕೊಂಡೊಯ್ದಿತ್ತು. ಒಳಭಾಗದಲ್ಲಿನ ಕೈಂಕರ್ಯಗಳನ್ನು ವೀಕ್ಷಿಸಲು ದೇವಸ್ಥಾನದ ಹೊರಭಾಗದಲ್ಲಿ ಎಲ್‌ಇಡಿ ಪರದೆಯನ್ನು ಅಳವಡಿಸಿ ಅನುಕೂಲ ಕಲ್ಪಿಸಲಾಗಿತ್ತು.

ನೀಲೇಶ್ವರ ಉಚ್ಚಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವೈದ್ಧಿಕ ತಂಡದ ಮೂಲಕ ಊರಕೂಡು ಕಟ್ಟಿನ ಯಜಮಾನತ್ವದಲ್ಲಿ ಧಾರ್ಮಿಕ ಕೈಂಕರ್ಯಗಳು ಜರುಗಿದವು. ಅಪರಾಹ್ನ ಭಕ್ತಾದಿಗಳಿಗೆ ಅನ್ನದಾನದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

ಪೂಜಾ ವಿಧಿ - ವಿಧಾನಗಳ ಬಳಿಕ ಪ್ರತಿಕ್ರಿಯಿಸಿದ ನೀಲೇಶ್ವರ ಉಚ್ಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು ಬಾಡಗರಕೇರಿಯ ಪ್ರಾಕೃತಿಕ ನೆಲೆ ಹಾಗೂ ಮಣ್ಣು ದೈವತ್ವದ ಶಕ್ತಿ ಹೊಂದಿರುವ ಸ್ಥಾನವಾಗಿದೆ. ಈ ಸನ್ನಿಧಿಯ ಮಹಿಮೆ ಪ್ರಪಂಚದಾದ್ಯAತ ಪ್ರಜ್ವಲಿಸಲಿದೆ. ಪುರಾತನವಾದ ಈ ಕ್ಷೇತ್ರ ಇನ್ನೂ ಬೆಳಗಲಿದೆ ಎಂಬದಾಗಿ ಹೇಳಿದರು.

ದೈವಿಕ ಕಾರ್ಯಗಳಲ್ಲಿ ದೇವಸ್ಥಾನದ ದೇವತಕ್ಕರಾದ ಅಣ್ಣೀರ ಕುಟುಂಬದ ದಾದಾ ಗಣಪತಿ, ನಾಡ್‌ತಕ್ಕರಾದ ಕಾಯಪಂಡ ಕುಟುಂಬದ ಅಯ್ಯಪ್ಪ, ಆಡಳಿತ ಮಂಡಳಿ ಅಧ್ಯಕ್ಷರಾದ ಚೋನಿರ ಸುಬ್ರಮಣಿ, ಉಪಾಧ್ಯಕ್ಷ ಕಾಯಪಂಡ ಸ್ಟಾö್ಯಲಿನ್ ಗಣಪತಿ, ಕಾರ್ಯದರ್ಶಿ ಬಲ್ಯಮೀದೇರಿರ ಸಂಪತ್, ಖಂಜಾAಚಿ ಬಲ್ಯಮೀದೇರಿರ ಚೇತನ್ ಸೋಮಣ್ಣ, ಆಡಳಿತ ಮಂಡಳಿ ಸದಸ್ಯರುಗಳಾದ ಕಾಯಪಂಡ ಎಸ್. ಕಾವೇರಪ್ಪ, ಅಣ್ಣೀರ ಸರು, ಕಾಯಪಂಡ ಸುರೇಂದ್ರ, ಅಣ್ಣೀರ ಲೋಕೇಶ್, ಮೀದೇರಿರ ಗಣಪತಿ, ಬಲ್ಯಮೀದೇರಿರ ರನ್ನು, ಮಲ್ಲೇಂಗಡ ಶಮ್ಮಿ ನರೇಂದ್ರ, ಕಾಯಪಂಡ ಸುನಿಲ್, ದೇಗುಲದ ಮುಖ್ಯ ಅರ್ಚಕರಾದ ಗಿರೀಶ್ ಸೇರಿದಂತೆ ಗ್ರಾಮಸ್ಥರು, ವಿವಿಧೆಡೆಯಿಂದ ಆಗಮಿಸಿದ್ದ ಭಕ್ತಾದಿಗಳು ಪಾಲ್ಗೊಂಡಿದ್ದರು.

ಇAದಿನಿAದ ಎಂದಿನAತೆ ಕೈಂಕರ್ಯ

ಅಷ್ಟಬAಧಕಲಶೋತ್ಸವ ಹಿನ್ನೆಲೆ ದೇಗುಲದಲ್ಲಿ ನಿತ್ಯದ ಪೂಜಾ ವಿಧಿ - ವಿಧಾನಗಳು ಇರಲಿಲ್ಲ. ಇದೀಗ ತಾ. ೧೦ ರಿಂದ (ಇಂದಿನಿAದ) ಎಂದಿನAತೆ ಪೂಜಾ ಕಾರ್ಯಗಳು ಮುಂದುವರಿಯಲಿದೆ. ೪೭ ದಿನದ ನಂತರ ಶತರುದ್ರಾಭಿಷೇಕ ನಡೆಯಲಿದೆ ಎಂದು ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ.