ವೀರಾಜಪೇಟೆ, ಜು. ೯: ವೀರಾಜಪೇಟೆಗೆ ನೀರು ಸರಬರಾಜು ಆಗುವ ಬೇತ್ರಿ ಕಾವೇರಿ ಹೊಳೆಯ ಬಳಿ ಮುಖ್ಯ ಸ್ಥಾವರಕ್ಕೆ ಮಣ್ಣು ಮಿಶ್ರಿತವಾಗಿದ್ದು, ಅಲ್ಲದೆ ವಿದ್ಯುತ್ ಪೂರೈಕೆ ಇಲ್ಲದ ಕಾರಣ ವೀರಾಜಪೇಟೆ ನಗರಕ್ಕೆ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಪಿ.ಕೆ. ನಾಚಪ್ಪ ತಿಳಿಸಿದ್ದಾರೆ.