ಮಡಿಕೇರಿ, ಜು. ೯: ಮನೆಯ ಅಂಗಳಕ್ಕೆ ಲಗ್ಗೆಯಿಟ್ಟ ಕಾಡಾನೆ ಪಕ್ಕದ ತೋಟದಲ್ಲಿದ್ದ ಕೃಷಿ ಫಸಲನ್ನು ನಾಶಗೊಳಿಸಿದೆ. ಅಯ್ಯಂಗೇರಿಯ ತೊತ್ತಿಯಂಡ ಪಳಂಗಪ್ಪ ಅವರ ಮನೆಯ ಅಂಗಳಕ್ಕೆ ಬಂದ ಕಾಡಾನೆ ಕಾಫಿ, ಬಾಳೆ, ತೆಂಗಿನ ಫಸಲನ್ನು ನಾಶ ಮಾಡಿದೆ. ಅಲ್ಲದೆ ಪಕ್ಕದ ಗೋಪಾಲ ಅರುಣ್ ಅವರ ತೋಟಕ್ಕೂ ನುಗ್ಗಿ ನಷ್ಟ ಉಂಟುಮಾಡಿದೆ. ಸೂಕ್ತ ಪರಿಹಾರದೊಂದಿಗೆ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.