ಮಡಿಕೇರಿ, ಜು. ೭: ಹವಾಮಾನ ಇಲಾಖೆಯ ಮಾಹಿತಿ... ಮುನ್ಸೂಚನೆಗಳು ಏನೇ ಇರಬಹುದು. ಆದರೆ ಕೊಡಗು ಜಿಲ್ಲೆಯಲ್ಲಿನ ವಿಶೇಷವೆಂದರೆ ಮಳೆ ನಕ್ಷತ್ರಗಳ ಆಧಾರದಲ್ಲಿ ಇಲ್ಲಿನ ಜನತೆ ಮುಂಗಾರು ಮಳೆಯ ಸನ್ನಿವೇಶವನ್ನು ಅವಲೋಕಿಸುತ್ತಿರುತ್ತಾರೆ.
ವಾಡಿಕೆಯಂತೆ ಮುಂಗಾರು ಸಂದರ್ಭದಲ್ಲಿ ಆರಿದ್ರಾ, ಪುನರ್ವಸು, ಆಶ್ಲೇಷ, ಪುಷ್ಯ ಮಳೆ ನಕ್ಷತ್ರಗಳಲ್ಲಿ ಮಳೆಯ ಆರ್ಭಟ ಹೆಚ್ಚಿರುತ್ತದೆ. ಈ ಬಾರಿ ಆರಿದ್ರ ಆರಂಭದಲ್ಲಿ ಹೆಚ್ಚು ಮಳೆಯಾಗದಿದ್ದರೂ ಕೊನೆಯ ಪಾದದಲ್ಲಿ ಒಂದಷ್ಟು ಬಿರುಸು ತೋರಿತ್ತು. ಇದೀಗ ಜುಲೈ ೬ ರಿಂದ ಪುನರ್ವಸು ಮಳೆ ಪ್ರಾರಂಭಗೊAಡಿದ್ದು, ಮೊದಲ ದಿನದಿಂದಲೇ ಮಳೆಯ ತೀವ್ರತೆ ಹೆಚ್ಚಾಗಿದೆ. ಬಹುತೇಕ ಜಿಲ್ಲೆಯಾದ್ಯಂತ ನಿನ್ನೆಯಿಂದ ಗಾಳಿ ಸಹಿತವಾಗಿ ರಭಸದ ಮಳೆಯಾಗುತ್ತಿದೆ. ಅದರಲ್ಲೂ ದಕ್ಷಿಣ ಕೊಡಗಿನ ಪೊನ್ನಂಪೇಟೆ, ಶ್ರೀಮಂಗಲ, ಹುದಿಕೇರಿ ಹೋಬಳಿ ವ್ಯಾಪ್ತಿಯಲ್ಲಿ ಗಾಳಿಯ ಅಬ್ಬರದೊಂದಿಗೆ ಮಳೆಯೂ ನೈಜ ಮುಂಗಾರಿನ ಚಿತ್ರಣವನ್ನು ಕಾಣುವಂತಾಗಿದೆ.
ಕಳೆದ ೨೪ ಗಂಟೆಗಳಲ್ಲಿ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಜಿಲ್ಲೆಯಲ್ಲಿ ಮುಂಗಾರು ಆರಂಭದ ಬಳಿಕ ಇದೇ ಮೊದಲ ಬಾರಿಗೆ ಎಂಬAತೆ ಸರಾಸರಿ ೨.೩೦ ಇಂಚು ಸರಾಸರಿ ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ೩.೦೬, ವೀರಾಜಪೇಟೆ ೨.೦೬, ಪೊನ್ನಂಪೇಟೆ ೩.೩೨, ಸೋಮವಾರಪೇಟೆ ೨.೨೧ ಹಾಗೂ ಕುಶಾಲನಗರ ತಾಲೂಕಿನಲ್ಲಿ ೦.೭೮ ಇಂಚು ಮಳೆ ಕಳೆೆದ ೨೪ ಗಂಟೆಗಳಲ್ಲಿ ಸುರಿದಿದೆ.
ಭಾಗಮಂಡಲ - ಪೊನ್ನಂಪೇಟೆ ಅಧಿಕ
ಭಾಗಮಂಡಲ ಹೋಬಳಿ ವ್ಯಾಪ್ತಿಯಲ್ಲಿ ಕಳೆದ ೨೪ ಗಂಟೆ ಅವಧಿಯಲ್ಲಿ ೬.೬೦ ಇಂಚು ಮಳೆ ದಾಖಲಾಗಿದ್ದರೆ, ಪೊನ್ನಂಪೇಟೆ ಹೋಬಳಿಯಲ್ಲಿ ೫ ಇಂಚು ಮಳೆಯಾಗಿದೆ. ಉಳಿದಂತೆ ಶ್ರೀಮಂಗಲ ೩.೪೦, ಹುದಿಕೇರಿ ೩.೬೦, ಬಾಳೆಲೆ ೧.೪೪, ಅಮ್ಮತ್ತಿ ೧.೫೬, ವೀರಾಜಪೇಟೆ ಹೋಬಳಿಯಲ್ಲಿ ೨.೫೬ ಇಂಚು ಮಳೆಯಾಗಿದೆ. ಮಡಿಕೇರಿ ತಾಲೂಕಿನ ಮಡಿಕೇರಿ ಹೋಬಳಿ ೨.೪೦, ಸಂಪಾಜೆ ೨, ನಾಪೋಕ್ಲು ೧.೨೮, ಸೋಮವಾರಪೇಟೆ ೨.೧೬, ಶನಿವಾರಸಂತೆ ೧.೧೬, ಶಾಂತಳ್ಳಿ ೩.೩೨, ಕೊಡ್ಲಿಪೇಟೆ ೨.೨೦, ಸುಂಟಿಕೊಪ್ಪ ೧.೧೬, ಕುಶಾಲನಗರ ಹೋಬಳಿಯಲ್ಲಿ ೦.೪೦ ಇಂಚು ಮಳೆಯಾಗಿದೆ.
ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಹಾನಿ ಸಂಭವಿಸಿರುವ ಕುರಿತು ವರದಿಯಾಗಿದೆ. ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆ ಕಾವೇರಿ, ಲಕ್ಷö್ಮಣ ತೀರ್ಥ, ಕಕ್ಕಟ್ಪೊಳೆ ಸೇರಿದಂತೆ ಇತರ ನದಿ, ತೊರೆಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಈ ತನಕ ಮಳೆ ಕಡಿಮೆಯಿದ್ದ ಪರಿಣಾಮ ಕುಂಠಿತವಾಗಿದ್ದ ಕೃಷಿಚಟುವಟಿಕೆಯತ್ತ ರೈತರು ಇದೀಗ ಗಮನ ಹರಿಸುತ್ತಿದ್ದಾರೆ. ದಕ್ಷಿಣ ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಶಾಲಾ - ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸದಿರುವ ಬಗ್ಗೆ “ಶಕ್ತಿ'' ಕಚೇರಿಗೆ ಹಲವಾರು ದೂರವಾಣಿ ಕರೆಗಳು ಬಂದಿದ್ದವು.