ಪೊನ್ನಂಪೇಟೆ, ಜು. ೭: ಪೊನ್ನಂಪೇಟೆ ತಾಲೂಕಿನಲ್ಲಿ ಕಳೆದ ೩-೪ ದಿನಗಳಿಂದ ಉತ್ತಮ ಮಳೆ ಯಾಗುತ್ತಿದೆ. ಇದರಿಂದ ರೈತರು ಗದ್ದೆಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ನಡುವೆ ಬಿ. ಶೆಟ್ಟಿಗೇರಿ ಗ್ರಾಮದ ರೈತರ ಭತ್ತದ ಗದ್ದೆಗಳಲ್ಲಿ ಮಳೆಯ ಜೊತೆಗೆ ಗುಂಪು ಗುಂಪಾಗಿ ಹಳದಿ ಬಣ್ಣದ ಕಪ್ಪೆಗಳು ಕಾಣಿಸಿಕೊಂಡು ಗ್ರಾಮಸ್ಥರ ಗಮನ ಸೆಳೆದಿವೆ. ಕೆ.ಪಿ. ಗಿರೀಶ್ ಎಂಬವರ ಗದ್ದೆಯಲ್ಲಿ ಮೊದಲು ಐನೂರರಿಂದ ಆರುನೂರು ಕಪ್ಪೆಗಳು ಕಂಡುಬAದವು.

ಭತ್ತದ ಗದ್ದೆಗಳು ಕಪ್ಪೆಗಳ ಸಂತಾನೋತ್ಪತ್ತಿಗೆ ಅನುಕೂಲಕರ ತಾಣವಾಗಿದೆ. ಮಳೆಗಾಲದಲ್ಲಿ ಗಂಡು ಕಪ್ಪೆಗಳು ಹೆಣ್ಣು ಕಪ್ಪೆಗಳನ್ನು ಆಕರ್ಷಿಸಲು ಜೋರಾಗಿ ಶಬ್ದ ಮಾಡುತ್ತವೆ. ಕೆಲವು ಜಾತಿಯ ಗಂಡು ಕಪ್ಪೆಗಳು ಸಂತಾನೋತ್ಪತ್ತಿ ಸಮಯದಲ್ಲಿ ತನ್ನ ಹಸಿರು ಬಣ್ಣವನ್ನು ಮರೆಮಾಚಿ ಹಳದಿ ಬಣ್ಣಕ್ಕೆ ತಿರುಗುವುದು ವಿಶೇಷ ವಾಗಿದೆ. ಇದೇ ಕಾರಣ ದಿಂದ ಮಳೆಗಾಲದ ಆರಂಭದಲ್ಲಿ ಗದ್ದೆಗಳಲ್ಲಿ ಹಳದಿ ಬಣ್ಣದ ಗಂಡು ಕಪ್ಪೆಗಳು ಹೆಚ್ಚಾಗಿ ಕಾಣಿಸುತ್ತವೆ ಎಂದು ತಜ್ಞರು ಹೇಳುತ್ತಾರೆ. ಸಾಮಾನ್ಯವಾಗಿ ಹಸಿರು ಅಥವಾ ಕಂದು ಬಣ್ಣದಲ್ಲಿರುವ ಕಪ್ಪೆಗಳು ಮಳೆಗಾಲದಲ್ಲಿ ಸಂತಾನೋತ್ಪತ್ತಿಗಾಗಿ ತಮ್ಮ ಬಣ್ಣವನ್ನು ಹಳದಿಗೆ ಬದಲಾಯಿಸಿಕೊಳ್ಳುತ್ತವೆ. ಇವುಗಳನ್ನು ಇಂಡಿಯನ್ ಬುಲ್ ಫ್ರಾಗ್ (Iಟಿಜiಚಿಟಿ ಃuಟಟ ಜಿಡಿog) ಎಂದು ಕರೆಯುತ್ತಾರೆ.

ಈ ಸಮಯದಲ್ಲಿ ಗಂಡು ಕಪ್ಪೆಗಳು ಹೆಣ್ಣು ಕಪ್ಪೆಗಳನ್ನು ಆಕರ್ಷಿಸಲು ಗಾಢವಾದ ಹಳದಿ ಬಣ್ಣಕ್ಕೆ ತಿರುಗುತ್ತವೆ. ಕಪ್ಪೆಗಳು ಭತ್ತದ ಬೆಳೆಗೆ ತೊಂದರೆ ಕೊಡುವ ಕೀಟಗಳನ್ನು ತಿಂದು ಬೆಳೆಗಳನ್ನು ರಕ್ಷಣೆ ಮಾಡುವುದರಿಂದ ರೈತ ಸ್ನೇಹಿಗಳು ಎನಿಸಿಕೊಂಡಿವೆ.