ಮುಳ್ಳೂರು, ಜು. ೭: ಸಮೀಪದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳ ೨೦೨೫-೨೬ನೇ ಸಾಲಿನ ವಿದ್ಯಾರ್ಥಿಗಳ ಸಂಸತ್ತು ಚುನಾವಣೆಯನ್ನು ನಡೆಸಲಾಯಿತು. ಸಾರ್ವತ್ರಿಕ ಚುನಾವಣಾ ಪ್ರಕ್ರಿಯೆಯಂತೆ ನೀತಿಸಂಹಿತೆ ಜಾರಿಗೊಳಿಸಿ ಮೊಬೈಲ್‌ನಲ್ಲಿ ಎವಿಎಂ ಆ್ಯಪ್ ಸೃಷ್ಟಿಸಿ ಆ್ಯಪ್ ಮೂಲಕ ಮತದಾನದ ವ್ಯವಸ್ಥೆ ಮಾಡಲಾಗಿತ್ತು.
ಶಾಲೆಯ ಮುಖ್ಯ ಶಿಕ್ಷಕಿ ಎಂ.ಸಿ. ನಳಿನಿ ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಶಿಕ್ಷಕರಾದ ಪ್ರಿಯಾಂಕಾ ಚಿಪಳೂಣಕರ್ ಮೊದಲನೆ ಮತಗಟ್ಟೆ ಅಧಿಕಾರಿಯಾಗಿ, ಸಂಗೀತಾ ಎರಡನೇ ಮತಗಟ್ಟೆ ಅಧಿಕಾರಿಯಾಗಿ, ಡಿ.ಎಸ್. ಮಧುಕುಮಾರ್ ಮೂರನೇ ಮತಗಟ್ಟೆ ಅಧಿಕಾರಿಯಾಗಿ ಕಾರ್ಯ ನಿರ್ವಸಿದರು. ಶಿಕ್ಷಕರಾದ ರೂಪ, ಸಂಗೀತಾ, ನೇತ್ರಾವತಿ ಚುನಾವಣಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿದರು. ಸಂಸತ್ತು ಚುನಾವಣೆಯಲ್ಲಿ ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಶಿಕ್ಷಕಿ ರೂಪ ಪ್ರಮಾಣವಚನ ಬೋಧಿಸಿ ಪ್ರಮಾಣ ಪತ್ರವನ್ನು ವಿತರಿಸಿದರು.