ಮಡಿಕೇರಿ, ಜು. ೭: ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡುವುದು ಕಂಡುಬAದಲ್ಲಿ ಕೆಆರ್‌ಎಸ್ ಪಕ್ಷದ ಸಹಾಯವಾಣಿ ಸಂಪರ್ಕಿಸುವAತೆ ಕರ್ನಾಟಕ ರಾಷ್ಟç ಸಮಿತಿ ಪಕ್ಷ ಮನವಿ ಮಾಡಿದೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್ ಶಾಸ್ತಿç, ಕಳೆದ ಹಲವು ವರ್ಷಗಳಿಂದ ಗೊಬ್ಬರ ಪೂರೈಕೆಯಲ್ಲಿ ರೈತರಿಗೆ ನಿರಂತರವಾಗಿ ಮೋಸ ಆಗುತ್ತಲಿದೆ.

ಯೂರಿಯಾ, ಡಿಎಪಿ ರಸಗೊಬ್ಬರವನ್ನು ಅವುಗಳ ಎಂಆರ್‌ಪಿ ಬೆಲೆಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ದೂರುಗಳು ರಾಜ್ಯವ್ಯಾಪಿ ಕೇಳಿಬರುತ್ತಿದ್ದು, ಕೆಆರ್‌ಎಸ್ ಪಕ್ಷ ಸಹಾಯವಾಣಿ ಆರಂಭಿಸಿದೆ ಎಂದು ಮಾಹಿತಿ ನೀಡಿದರು.

ಸಮರ್ಪಕವಾಗಿ ರಸಗೊಬ್ಬರ ವನ್ನು ಪೂರೈಕೆ ಮಾಡಬೇಕು, ಮಾರಾಟಗಾರರು ಎಫ್‌ಸಿಒ ೧೯೮೫ ಷರತ್ತುಗಳ ಪ್ರಕಾರ ಗೊಬ್ಬರ ಬೆಲೆ, ದಾಸ್ತಾನು ವಿವರಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು, ಅಕ್ರಮಗಳ ಬಗ್ಗೆ ದೂರುಗಳು ನೀಡಲು ಸಂಬAಧಪಟ್ಟ ಕೃಷಿ ಅಧಿಕಾರಿಗಳ ಮೊಬೈಲ್ ನಂಬರ್ ಫಲಕದಲ್ಲಿ ಪ್ರದರ್ಶಿಸಬೇಕು, ರಸಗೊಬ್ಬರ ಕಂಪೆನಿಗಳು ಸಬ್ಸಿಡಿ ರಸಗೊಬ್ಬರದ ಜೊತೆಗೆ ಡೀಲರ್‌ಗಳಿಗೆ ಲಿಂಕ್ಡ್ ಉತ್ಪನ್ನಗಳನ್ನು ನೀಡುವುದನ್ನು ನಿಲ್ಲಿಸಬೇಕು, ಬಲವಂತವಾಗಿ ಮಾರುವುದನ್ನು ಸ್ಥಗಿತಗೊಳಿಸಬೇಕು, ನಿಯಮ ಉಲ್ಲಂಘನೆ ಕಂಡುಬAದಲ್ಲಿ ಡೀಲರ್‌ಗಳ ಲೈಸನ್ಸ್ ರದ್ದು ಮಾಡಲು ಕ್ರಮವಹಿಸಬೇಕೆಂದು ಆಗ್ರಹಿಸಿದರು.

ರೈತ ಘಟಕದ ಕಾರ್ಯದರ್ಶಿ ಕೆ.ಆರ್. ಪ್ರಭುಸ್ವಾಮಿ ಮಾತನಾಡಿ, ನಡೆಯುತ್ತಿರುವ ರೈತರಿಗೆ ಆಗುತ್ತಿರುವ ನಷ್ಟ ತಪ್ಪಿಸಬೇಕು. ಅಕ್ರಮ ಕಂಡುಬAದಲ್ಲಿ ಕೆಆರ್‌ಎಸ್ ಪಕ್ಷದ ಸಹಾಯವಾಣಿ ೭೩೪೯೫೭೭೧೩೦ಗೆ ಸಂಪರ್ಕಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಕಂದಳ್ಳಿ ಮಹೇಶ್, ಕಾರ್ಯದರ್ಶಿ ಸತೀಶ್ ಕುಮಾರ್, ಶೇಖರ್ ಕುಮಾರ್ ಹಾಜರಿದ್ದರು.