ಮುಳ್ಳೂರು, ಜು. ೭: ಸಮಾಜ ಸೇವಕ ಮತ್ತು ಉದ್ಯಮಿ ಹರಪಳ್ಳಿ ರವೀಂದ್ರ ಅವರು ಸಮಿಪದ ಶನಿವಾರಸಂತೆ ಸ.ಮಾ.ಪ್ರಾ. ಶಾಲೆ ಮತ್ತು ತ್ಯಾಗರಾಜ ಕಾಲೋನಿಯ ಸ. ಹಿ. ಪ್ರಾ. ಶಾಲೆ ಸೇರಿದಂತೆ ಸುಮಾರು ೩೦೦ ಕಿಂತ ಹೆಚ್ಚಿನ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಣೆ ಮಾಡಿದರು ಶನಿವಾರಸಂತೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪುಸ್ತಕಗಳೊಂದಿಗೆ ಒಡನಾಟಇಟ್ಟುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಮುಖ ರಾದ ಚಕ್ರವರ್ತಿ ಸುರೇಶ್, ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್, ಮೂದರವಳ್ಳಿ ವಿನೋದ್, ಪೃಥ್ವಿ, ಪ್ರಸಾದ್, ಪ್ರಣೀತ್, ತಾಳೂರು ಪುನೀತ್, ಶನಿವಾರಸಂತೆ ಕ್ಲಸ್ಟರ್ ಸಿ.ಕೆ.ದಿನೇಶ್, ಎಸ್‌ಡಿಎಂಸಿ ಅಧ್ಯಕ್ಷ ಚರಣ್, ಶಾಲಾ ಮುಖ್ಯ ಶಿಕ್ಷಕಿ ಲಲಿತ, ಶಿಕ್ಷಕಿಯರಾದ ಮಮತ, ಕವಿತಾ, ರಜೀಯಾ, ಶಿಕ್ಷಕಿಯರು ಹಾಜರಿದ್ದರು.