ಚೆಟ್ಟಳ್ಳಿ, ಜು.೭: ಕಾಫಿಮಂಡಳಿ ಅಧೀನದ ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆ ವತಿಯಿಂದ ಕಾಫಿ ಬೆಳೆಗಾರರ ಹಕ್ಕುಗಳು ಮತ್ತು ಕಾಫಿ ತಳಿಗಳ ಸಂರಕ್ಷಣೆಗೆ ಸಂಬAಧಿಸಿದAತೆ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸ ಲಾಗಿದೆ.
“ಇmಠಿoತಿeಡಿiಟಿg ಉಡಿoತಿeಡಿs ಣhಡಿough ಈಚಿಡಿmeಡಿs ಗಿಚಿಡಿieಣಥಿ Pಡಿoಣeಛಿಣioಟಿ uಟಿಜeಡಿ PPಗಿ ಈಖಂ” ಎಂಬ ವಿಷಯದಡಿ ತಾ.೯ ರಂದು ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆಯ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಕಾಫಿಮಂಡಳಿ ತಿಳಿಸಿದೆ.
ಕಾರ್ಯಕ್ರಮದಲ್ಲಿ ಸಸ್ಯ ತಳಿಗಳು ಮತ್ತು ರೈತರ ಹಕ್ಕುಗಳ ಸಂರಕ್ಷಣಾ ಕಾಯ್ದೆ (PPಗಿ ಈಖಂ) ಕುರಿತು ಜಾಗೃತಿ ಮೂಡಿಸುವುದು, ರೈತರ ಹಕ್ಕುಗಳು ಮತ್ತು ಅವರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವುದು, ಕಾಫಿ ತಳಿಗಳ ನೋಂದಣಿ ಹಾಗೂ ಕಾನೂನುಬದ್ಧ ರಕ್ಷಣೆಯ ಮಹತ್ವವನ್ನು ವಿವರಿಸುವುದು ಮತ್ತು ಸುಸ್ಥಿರ ಕಾಫಿ ಬೆಳವಣಿಗೆಯನ್ನು ಉತ್ತೇಜಿಸುವ ಕುರಿತು ಚರ್ಚೆಗಳು ನಡೆಯಲಿವೆ.
ಆಸಕ್ತ ಕಾಫಿ ಬೆಳೆಗಾರರು, ಸಂಶೋಧಕರು ಹಾಗೂ ಕಾಫಿ ಕ್ಷೇತ್ರದ ತಜ್ಞರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಕಾರ್ಯಕ್ರಮದ ಸಂಯೋಜಕರಾದ ಡಾ. ಜೀನಾ ದೇವಾಸಿಯಾ ಮೊಬೈಲ್ ಸಂಖ್ಯೆ: ೯೯೦೨೦೧೭೮೬೭, ಇ-ಮೇಲ್: ರಿeeಟಿಚಿಜevಚಿsiಚಿ@gmಚಿiಟ.ಛಿom ಸಂಪರ್ಕಿಸಬಹುದು.