ಮಡಿಕೇರಿ, ಜು.೬: ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಾಣಿಶಾಸ್ತç ವಿಭಾಗದ ಪ್ರೊ.ಎಂ.ಪಿ.ಕೃಷ್ಣ ಅವರನ್ನು ಕಾಲೇಜಿನ ವತಿಯಿಂದ ಬೀಳ್ಕೊಡಲಾಯಿತು.
ಕಾಲೇಜು ಸಭಾಂಗಣದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದÀ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಪ್ರೊ.ಮೇಜರ್ ರಾಘವ ಬಿ. ಅವರು ತಮ್ಮ ಹುಟ್ಟೂರಿನ ಈ ಕಾಲೇಜಿನಲ್ಲಿ ಪದವಿ ಪಡೆದ ಪ್ರೊ.ಎಂ.ಪಿ.ಕೃಷ್ಣ ಅವರು ಇದೇ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದುತ್ತಿರುವುದು ಹೆಮ್ಮೆ ಎನಿಸಿದೆ ಎಂದರು. ಹಿಂದಿ ವಿಭಾಗದ ಪ್ರೊ.ಶ್ರೀಧರ್ ಆರ್ ಹೆಗ್ಡೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ವರನ್ನು ಸ್ವಾಗತಿಸಿದರು. ವಾಣಿಜ್ಯ ಶಾಸ್ತç ವಿಭಾಗದ ಪ್ರೊ.ಗಾಯತ್ರಿ ದೇವಿ ಎ. ಅವರು ಪ್ರಾರ್ಥಿಸಿದರು. ೩೧ ವರ್ಷಗಳ ಸುದೀರ್ಘ ಸಾರ್ಥಕ ಸೇವೆ ಸಲ್ಲಿಸಿದ ಪ್ರೊ.ಎಂ.ಪಿ.ಕೃಷ್ಣ ಅವರ ಕುರಿತು ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಪ್ರೊ.ನಯನ ಕೆ, ಅರ್ಥಶಾಸ್ತç ವಿಭಾಗದ ಮುಖ್ಯಸ್ಥ ಪ್ರೊ.ತಿಪ್ಪೇಸ್ವಾಮಿ ಇ, ವಾಣಿಜ್ಯ ಶಾಸ್ತç ವಿಭಾಗದ ಪ್ರೊ.ಗಾಯತ್ರಿ ದೇವಿ, ಭೌತಶಾಸ್ತç ವಿಭಾಗದ ಮುಖ್ಯಸ್ಥ ಪ್ರೊ.ನಾಗರಾಜ್ ಕೆ.ಪಿ, ಆಂಗ್ಲಭಾಷಾ ವಿಭಾಗದ ಸಹ ಪ್ರಾಧ್ಯಾಪಕ ರಮೇಶ್ ಹೆಚ್.ಆರ್, ಉಪನ್ಯಾಸಕರಾದ ಡಾ.ನಳಿನಿ ಹಾಗೂ ಮುಖೇಶ್ ಅವರುಗಳು ಅಭಿಪ್ರಾಯ ಹಂಚಿಕೊAಡರು. ಪ್ರೊ.ಎಂ.ಪಿ.ಕೃಷ್ಣ ಅವರು ತಮ್ಮ ಸುದೀರ್ಘ ಸೇವಾ ಅನುಭವಗಳನ್ನು ಹಾಗೂ ಶೈಕ್ಷಣಿಕ ಒಡನಾಟವನು ವಿವರಿಸಿದರು. ಕಾಲೇಜಿನ ವತಿಯಿಂದ ಇವರನ್ನು ಸನ್ಮಾನಿಸುವ ಮೂಲಕ ಗೌರವಿಸಿ ಬೀಳ್ಕೊಡಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು, ಕೊಡಗು ವಿಶ್ವವಿದ್ಯಾನಿಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಚೇರಿ ಸಹಾಯಕಿ ಪವಿತ್ರಾವತಿ ಹೆಚ್.ಜಿ ವಂದಿಸಿದರು.