ಮಡಿಕೇರಿ, ಜು. ೬: ಜಿಲ್ಲೆಯಲ್ಲಿ ಭಾನುವಾರ ರಾತ್ರಿಯಿಂದ ಹಲವೆಡೆಗಳಲ್ಲಿ ರಭಸದ ಗಾಳಿ - ಮಳೆಯಾಗಿದೆ. ಕಳೆದ ೨೪ ಗಂಟೆಗಳಲ್ಲಿ ಸರಾಸರಿ ೧.೨೮ ಇಂಚು ಮಳೆ ಸುರಿದಿದೆ. ಮುಂಗಾರು ಈ ಹಿಂದಿನ ವರ್ಷಗಳಂತೆ ತೀವ್ರತೆ ಕಾಣದಿದ್ದರೂ ನಡು ನಡುವೆ ಸುರಿಯುತ್ತಿರುವ ಬಿರುಸಿನ ಮಳೆಗೆ ಅಲ್ಲಲ್ಲಿ ಒಂದಷ್ಟು ಹಾನಿಗಳೂ ಉಂಟಾಗುತ್ತಿವೆ.

ಭಾಗಮAಡಲ ಹೋಬಳಿಯಲ್ಲಿ ೩.೦೮ ಇಂಚು, ಪೊನ್ನಂಪೇಟೆ ಹೋಬಳಿಯಲ್ಲಿ ೩ ಇಂಚು, ಶ್ರೀಮಂಗಲ ೨.೪೦, ಹುದಿಕೇರಿ ೧.೫೨ ಇಂಚು, ಅಮ್ಮತ್ತಿ, ೧.೮೮ ಕೊಡ್ಲಿಪೇಟೆ ಹೋಬಳಿಯಲ್ಲಿ ೧.೦೮ ಇಂಚು ಮಳೆ ಕಳೆದ ೨೪ ಗಂಟೆಗಳಲ್ಲಿ ಸುರಿದಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ತಾ. ೯ರ ತನಕ ಕೊಡಗು ಸೇರಿ ಹಲವೆಡೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ.

ಮಹಿಳೆ ಪಾರು

ವೀರಾಜಪೇಟೆ ಹೋಬಳಿ ಬೇಟೋಳಿ ನಿವಾಸಿ ಸಿಂಧು ಎಂಬವರು ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಸಂದರ್ಭ ಸ್ಕೂಟರ್ ಮೇಲೆ ಮರ ಬಿದ್ದಿರುವ ಘಟನೆ ನಡೆದಿದೆ. ಅದೃಷ್ಟವಶಾತ್ ಇವರು ಸಣ್ಣ ಪುಟ್ಟ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ವೀರಾಜಪೇಟೆ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ತಹಶೀಲ್ದಾರ್ ಪ್ರವೀಣ್ ಸೇರಿದಂತೆ ವಿವಿಧ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ೪ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ)

ತಡೆಗೋಡೆ ಕುಸಿತ

ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಕಿಕೊಪ್ಪದ ಲೀಲಾ ಎಂಬವರ ಮನೆಯ ತಡೆಗೋಡೆ ಕುಸಿದಿದ್ದು ಹಾನಿಯುಂಟಾಗಿದೆ. ಇದರಿಂದಾಗಿ ಇವರ ಮನೆಯು ಅಪಾಯದಂಚಿನಲ್ಲಿದೆ.