ಮಡಿಕೇರಿ, ಜು. ೬: ಆರೋಗ್ಯ ಕ್ಷೇತ್ರದಲ್ಲಿ ದೇಶದಾದ್ಯಂತ ಸೇವೆ ಸಲ್ಲಿಸುತ್ತಿರುವ ಎ.ಐ.ಕೆ.ಎಂ.ಸಿ.ಸಿ. ಸಂಸ್ಥೆಯ ಮಡಿಕೇರಿ ಘಟಕವನ್ನು ಕರ್ನಾಟಕ ಸರ್ಕಾರದ ಆರೋಗ್ಯ ಸಚಿವರು ಹಾಗೂ ಕೊಡಗು ಜಿಲ್ಲಾ ಪ್ರಾಕೃತಿಕ ವಿಕೋಪ ನಿರ್ವಹಣೆಯ ಮೇಲುಸ್ತುವಾರಿಗಳಾದ ಯು.ಟಿ. ಖಾದರ್ ಉದ್ಘಾಟಿಸಿದರು.
ವ್ಯಕ್ತಿ ಆರೋಗ್ಯವಂತನಾಗಿದ್ದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಎ.ಐ.ಕೆ.ಎಂ.ಸಿ.ಸಿ. ಸಂಸ್ಥೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ಎಲ್ಲಾ ಸಂಘ-ಸAಸ್ಥೆಗಳು ಜನರ ಆರೋಗ್ಯದ ವಿಚಾರದಲ್ಲಿ ಕಾಳಜಿ ಮತ್ತು ಜಾಗೃತಿ ವಹಿಸಬೇಕು ಎಂದು ಸಚಿವ ಖಾದರ್ ಕರೆ ನೀಡಿದರು. ಸಂಸ್ಥೆಯ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಎಂ.ಕೆ. ನೌಶಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಎ.ಐ.ಕೆ.ಎಂ.ಸಿ.ಸಿ. ಸಂಸ್ಥೆ ದೇಶದಲ್ಲಿ ಒಟ್ಟು ೧೧೭ ಸಂಸ್ಥೆಗಳನ್ನು ಹೊಂದಿದ್ದು, ೧೪,೭೦೦ ಜನ ಸ್ವಯಂ ಸೇವಕರು ಆರ್ಥಿಕವಾಗಿ ದುರ್ಬಲವಾಗಿರುವ ರೋಗಿಗಳ ಮನೆಗೆ ತೆರಳಿ ಅವರ ಸೇವೆ ಮಾಡುತ್ತಿದ್ದಾರೆ.
ಯಾವುದೇ ಕ್ಷಣದಲ್ಲಿ ರೋಗಿಗಳು ಸಹಾಯ ನೆರವು ಕೋರಿದಲ್ಲಿ ಸ್ಪಂದನ ನೀಡಲು ಸಿದ್ಧರಾಗಿರುವುದಾಗಿ ತಿಳಿಸಿದರಲ್ಲದೇ, ಕೊಡಗು ಜಿಲ್ಲೆಯಲ್ಲಿ ೧೨೦೦ ಬೆಡ್ ಪೇಷೆಂಟ್ಗಳ ಯೋಗಕ್ಷೇಮವನ್ನು ನಿರಂತರವಾಗಿ ನೋಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಕೊಡಗಿನಲ್ಲಿ ಸೇವೆ ಕೋರಿ ಹೆಲ್ಪ್ಲೈನ್ ಸಂಖ್ಯೆ ೯೫೫೯೧೬೩೯೩೬ ಗೆ ಕರೆ ಮಾಡಿ ಉಪಯೋಗ ಪಡೆಯಬಹುದೆಂದರು.
ಕೊಡಗು ರಕ್ತನಿಧಿ ಘಟಕದ ಮುಖ್ಯಸ್ಥ ಡಾ. ಕರುಂಬಯ್ಯ ಮಾತನಾಡಿ, ಸಂಸ್ಥೆಯ ಆರಂಭವನ್ನು ರಕ್ತದಾನದ ಮೂಲಕ ಪ್ರಾರಂಭಿಸಿರುವುದು ಇತರ ಎಲ್ಲಾ ಸಂಘ-ಸAಸ್ಥೆಗಳಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ, ಎ.ಐ.ಕೆ.ಎಂ.ಸಿ.ಸಿ ಸಂಸ್ಥೆ ಕ್ಲಿಷ್ಟಕರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ರೋಗಿಗಳನ್ನು ನಿರಂತರವಾಗಿ ಉಪಚರಿಸುವ ಅದ್ಭುತ ಕಾರ್ಯ ಮಾಡುತ್ತಿದ್ದು ಇದು ದೇವರು ಕೂಡಾ ಮೆಚ್ಚುವ ಕೆಲಸವಾಗಿದೆ ಎಂದರು.
ಸAಸ್ಥೆಯ ಸದಸ್ಯರು ಸೇರಿದಂತೆ ೨೦ ಮಂದಿ ರಕ್ತದಾನ ಮಾಡಿದರು. ಸಂಸ್ಥೆಯ ಮುಖ್ಯಸ್ಥ ಅಬ್ದುಲ್ ಗಫೂರ್, ಘಟಕದ ಅಧ್ಯಕ್ಷ ರಿಯಾಜ್, ಪ್ರಧಾನ ಕಾರ್ಯದರ್ಶಿ ಶಮೀರ್, ಕೆಪಿಸಿಸಿ ಸದಸ್ಯ ಯಾಕುಬ್, ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ, ಪ್ರಮುಖರಾದ ಕಲೀಲ್ ಬಾಷ, ಕೋಚನ ಚೇತನ್, ಎಂ.ಎ. ನಿಷಾರ್ ಸೇರಿದಂತೆ ಸಂಸ್ಥೆಯ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.