ಮೈಸೂರು, ಜು. ೫: ಮೈಸೂರಿನ ಕೊಡವ ಸಮಾಜ ಯೂತ್ ವಿಂಗ್, ಮೈಸೂರು ಕೊಡವ ಸಮಾಜ ಹಾಗೂ ಹಾಕಿ ಮೈಸೂರು ಆಶ್ರಯದಲ್ಲಿ ಆಯೋಜಿಸಿರುವ ಕೊಡವ ಹಾಕಿ ಪ್ರೀಮಿಯರ್ ಲೀಗ್ ಸೀಸನ್-೨ನಲ್ಲಿ ಅಂಜಿಗೇರಿ ನಾಡು ತಂಡವು ಕೂರ್ಗ್ ಟೈಟಾನ್ ವಿರುದ್ಧ ೨-೧ ಗೋಲುಗಳ ಅಂತರದಿAದ ಜಯಿಸುವ ಮೂಲಕ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಮೈಸೂರಿನ ಚಾಮುಂಡಿ ವಿಹಾರ ಟರ್ಫ್ ಹಾಕಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಅಂತಿಮ ಸುತ್ತಿನ ಪಂದ್ಯದಲ್ಲಿ ಸೋಮಯ್ಯ ಅವರು ಪೆನಾಲ್ಟಿ ಕಾರ್ನರ್‌ನಲ್ಲಿ ಅತ್ಯಾಕರ್ಷಕ ಗೋಲು ದಾಖಲಿಸುವ ಮೂಲಕ ತಂಡಕ್ಕೆ ಮುನ್ನಡೆ ತಂದರು. ಆರ್ಯನ್ ಮತ್ತೊಂದು ಗೋಲು ದಾಖಲಿಸಿ ತಂಡಕ್ಕೆ ಹುರುಪು ತುಂಬಿದರು. ಸೋತ ತಂಡ ಕೂರ್ಗ್ ಟೈಟಾನ್ ಪರ ದೇಶ್ ಪೂವಯ್ಯ ಅವರು ಒಂದು ಗೋಲು ಗಳಿಸಿದರೂ ತಂಡವು ನಿರೀಕ್ಷಿತ ಪ್ರತ್ಯುತ್ತರ ನೀಡುವಲ್ಲಿ ವಿಫಲವಾಯಿತು. ಪರಿಣಾಮವಾಗಿ ಆರಂಭದಿAದಲೂ ಅತ್ಯುತ್ತಮ ಪ್ರದರ್ಶನ ನೀಡಿದ ಅಂಜಿಗೇರಿ ನಾಡು ತಂಡ ಚಾಂಪಿಯನ್‌ಶಿಪ್ ಪಡೆದುಕೊಂಡಿತು.
ಇದಕ್ಕೂ ಮುನ್ನ ನಡೆದ ೧ನೇ ಸೆಮಿಫೈನಲ್‌ನಲ್ಲಿ ಅಂಜಿಗೆರಿ ನಾಡು ತಂಡವು ಕಾಕೋಟ್ ಸ್ಟೆöÊಕರ್ಸ್ ವಿರುದ್ಧ ೩-೨ ಗೋಲುಗಳಿಂದ ಗೆದ್ದು ಫೈನಲ್‌ಗೆ ಪ್ರವೇಶಿಸಿತ್ತು. ಅದೇ ರೀತಿ ೨ನೇ ಸೆಮಿಫೈನಲ್‌ನಲ್ಲಿ ಕೂರ್ಗ್ ಟೈಟಾನ್ ತಂಡವು ೨-೧ ಗೋಲುಗಳಿಂದ ಪಳೇ ತಾಲೂಕ್ ವಿರುದ್ಧ ಜಯಿಸಿ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದುಕೊಂಡಿತ್ತು.
ಪಳೇ ತಾಲೂಕುಗೆ ೩ನೇ ಸ್ಥಾನ
೩ನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಪಳೇ ತಾಲೂಕು ತಂಡವು ಕಾಕೊಟ್ ಸ್ಟೆçöÊರ‍್ಸ್ ವಿರುದ್ಧ ೨-೧ ಗೋಲುಗಳ ಅಂತರದಿAದ ಜಯಿಸಿತು. ಅತ್ಯಂತ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಎರಡೂ ತಂಡಗಳೂ ಗೆಲುವಿಗಾಗಿ ಶ್ರಮಿಸಿದವು. ಆದರೆ ಪಳೇ ತಾಲೂಕ್ ತಂಡ ಎರಡು ಗೋಲು ದಾಖಲಿಸಿ ಮೇಲುಗೈ ಸಾಧಿಸುವ ಮೂಲಕ ಗೆಲುವು ತನ್ನದಾಗಿಸಿಕೊಂಡಿತು. ಪಳೇ ತಾಲೂಕ್ ತಂಡದ ಪರವಾಗಿ ನಾಚಪ್ಪ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಹಾಗೂ ಮಹಿಳಾ ಆಟಗಾರ್ತಿ ದೇಚಕ್ಕ ತಲಾ ಒಂದು ಗೋಲು ಪಡೆದರು. ಕಾಕೊಟ್ ಸ್ಟೆçöÊರ‍್ಸ್ ಪರವಾಗಿ ಪೂಣಚ್ಚ ಪೆನಾಲ್ಟಿ ಕಾರ್ನರ್ ಮೂಲಕ ಏಕೈಕ ಗೋಲು ಹೊಡೆದರು.
ಪ್ರಶಸ್ತಿ ವಿತರಣೆ
ಕೊಡವ ಸಮಾಜ ಮೈಸೂರು ಅಧ್ಯಕ್ಷ ಪೊಂಜAಡ ಗಣಪತಿ, ಉಪಾಧ್ಯಕ್ಷ ಮಾಚಿಮಾಡ ನಾಣಯ್ಯ, ಮೈಸೂರು ಕೊಡವ ಸಮಾಜ ಕ್ರೀಡಾ ಮತ್ತು ಸಾಂಸ್ಕೃತಿಕ ಕ್ಲಬ್ ಅಧ್ಯಕ್ಷ ಮಚ್ಚಂಡ ಪ್ರಕಾಶ್ ಬೆಳ್ಳಿಯಪ್ಪ, ಹಾಕಿ ಮೈಸೂರು ಅಧ್ಯಕ್ಷ ಕೆ.ಬಿ. ದಿಲೀಪ್, ಉಪಾಧ್ಯಕ್ಷ ಕೋಟೆರ ಮುದ್ದಯ್ಯ, ಕೊಡವ ಸಮಾಜ ಯುವ ಘಟಕ ಅಧ್ಯಕ್ಷ ವರುಣ್ ಹಾಗೂ ಮತ್ತಿತರ ಗಣ್ಯರು ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಿಸಿದರು.