ಮಡಿಕೇರಿ, ಜು. ೪: ನಗರಕ್ಕೆ ಭೇಟಿ ನೀಡಿದ ಉಪಲೋಕಾಯುಕ್ತರು ೨ನೇ ದಿನವೂ ಸಮಸ್ಯೆಗಳ ಪರಿಶೀಲನೆಯಲ್ಲಿ ತೊಡಗಿಕೊಂಡರು. ತಾ. ೩ ರ ಬೆಳಿಗ್ಗೆ ೭ ಗಂಟೆಯಿAದ ವಿವಿಧ ಕಡೆಗಳಿಗೆ ಭೇಟಿ ನೀಡಲು ಆರಂಭಿಸಿದ ಉಪಲೋಕಾಯುಕ್ತರಾದ ಫಣೀಂದ್ರ ಅವರು, ಅಂದು ರಾತ್ರಿ ೯.೩೦ರ ತನಕವೂ ಸಾರ್ವಜನಿಕರ ಅಹವಾಲು ಆಲಿಸಿದರು. ಮರುದಿನ ಬೆಳಿಗ್ಗಿನಿಂದಲೇ ಮತ್ತೇ ಸಮಸ್ಯೆಗಳಿರುವ ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಿದರು.
ಜಿ.ಪಂ. ಸಭಾಂಗಣದಲ್ಲಿ ದೂರುಗಳ ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಸಂಬAಧ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ದೂರುದಾರರು ಮತ್ತು ಎದುರುದಾರರ ಸಮ್ಮುಖದಲ್ಲಿ ನಡೆದ ವಿಚಾರಣಾ ಸಭೆ ತಾ. ೩ ರಂದು ರಾತ್ರಿ ೯.೩೦ರ ತನಕ ನಡೆಯಿತು. ಇಲ್ಲಿ ಕೈಗೆತ್ತಿಕೊಂಡಿದ್ದ ೭೮ ಪ್ರಕರಣಗಳ ಪೈಕಿ ೪೫ ಪ್ರಕರಣಗಳು ಇತ್ಯರ್ಥಗೊಂಡವು. ೨೦ ಅರ್ಜಿದಾರರು ಗೈರಾದರು.
೨ನೇ ದಿನವೂ ಮುಂದುವರಿದ ಭೇಟಿ
ಉಪಲೋಕಾಯುಕ್ತರಾದ ಕೆ.ಎನ್.ಫಣೀಂದ್ರ ಅವರು, ೨ನೇ ದಿನದಂದು ಜಿಲ್ಲಾಸ್ಪತ್ರೆ, ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಸತಿ ನಿಲಯ, ಮಡಿಕೇರಿಯ ದಾಸವಾಳ ರಸ್ತೆಯ ಉದ್ಯಾನವನ ಜಾಗವನ್ನು ಪರಿಶೀಲನೆ ನಡೆಸಿದರು.
ಭೇಟಿಗೂ ಮುನ್ನ ಕೊಡಗಿನ ಅಧಿಕಾರಿಗಳ ಸಹಿತ ಐತಿಹಾಸಿಕ ಶ್ರೀ ಓಂಕಾರೇಶ್ವರ ಸನ್ನಿಧಿಗೆ ಉಪಲೋಕಾಯುಕ್ತರು ತೆರಳಿ ಪೂಜೆಯಲ್ಲಿ ಪಾಲ್ಗೊಂಡರು. ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚುಮ್ಮಿ ದೇವಯ್ಯ ಅವರು ಉಪಲೋಕಾಯುಕ್ತರನ್ನು ಸ್ವಾಗತಿಸಿದರು.
ಅನಂತರ ಜಿಲ್ಲಾಸ್ಪತ್ರೆಗೆ ತೆರಳಿದ ಕೆ.ಎನ್. ಫಣೀಂದ್ರ ಅವರು ಮೊದಲು ಅಧಿಕಾರಿಗಳಿಂದ ಕೆಲವೊಂದು ಮಾಹಿತಿಯನ್ನು ಪಡೆದುಕೊಂಡರು. ವೈದ್ಯರ ಕರ್ತವ್ಯ ಅವಧಿ, ಲಭ್ಯವಿರುವ ಸೌಲಭ್ಯ ಸೇರಿದಂತೆ ನಾನಾ ಪ್ರಶ್ನೆಗಳನ್ನು ಜಿಲ್ಲಾಸ್ಪತ್ರೆ ಡೀನ್ ಮತ್ತು ನಿರ್ದೇಶಕ ಡಾ. ಲೋಕೇಶ್ ಹಾಗೂ ಅಧೀಕ್ಷಕ ಡಾ. ಸೋಮಶೇಖರ್ ಅವರಿಗೆ ಕೇಳಿದರು. ನಂತರ ಹಾಜರಾತಿ ವಹಿಯನ್ನು ಪರಿಶೀಲಿಸಿ ಕೆಲ ವೈದ್ಯಾಧಿಕಾರಿಗಳು ಸಹಿ ಮಾಡದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ ವೈಟ್ನರ್ ಹಾಕಿ ಹಾಜರಾತಿ ವಹಿಯಲ್ಲಿ ತಿದ್ದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಉಪಲೋಕಾಯುಕ್ತರು, ಈ ರೀತಿ ಕೆಲಸದಿಂದ ಏನೋ ಮುಚ್ಚಿಡುವ ಯತ್ನ ನಡೆದಿದೆ ಎಂಬ ಅನುಮಾನ ಮೂಡುತ್ತದೆ ಎಂದರು.
ಅನಂತರ ತುರ್ತು ಚಿಕಿತ್ಸಾ ಘಟಕ, ರಕ್ತ ನಿಧಿ, ಒಳ-ಹೊರರೋಗಿ ವಿಭಾಗ, ಮಹಿಳಾ ಮತ್ತು ಮಕ್ಕಳ ವಿಭಾಗಗಳಿಗೆ ತೆರಳಿ ವ್ಯವಸ್ಥೆಗಳ ಕುರಿತು ಪರಿಶೀಲನೆ ನಡೆಸಿದರು. ಒಳರೋಗಿ ವಿಭಾಗದಲ್ಲಿ ರೋಗಿಗಳನ್ನು ವಿಚಾರಿಸಿದ ಸಂದರ್ಭ ಎಲ್ಲ ವ್ಯವಸ್ಥೆಯೂ ಸರಿಯಿದೆ ಎಂದು ಮಾಹಿತಿ ನೀಡಿದರು. ಶೌಚಾಲಯಗಳಿಗೂ ತೆರಳಿ ಪರಿಶೀಲನೆ ನಡೆಸಿದ ಉಪಲೋಕಾಯುಕ್ತರು ಶುಚಿತ್ವ ಮತ್ತಷ್ಟು ಕಾಯ್ದುಕೊಳ್ಳಬೇಕು. ಅಲ್ಲದೆ ರೋಗಿಗಳು ಕುಳಿತುಕೊಳ್ಳಲು ಇರುವ ಕುರ್ಚಿಗಳನ್ನು ಬದಲಾಯಿಸಬೇಕು ಎಂದು ಸೂಚಿಸಿದರು.
ಆಸ್ಪತ್ರೆಯಲ್ಲಿ ಊಟ, ಬಿಸಿನೀರಿನ ವ್ಯವಸ್ಥೆ, ಚಿಕಿತ್ಸೆಗೆ ಹಣಪಡೆಯಲಾಗುತ್ತಿದೆಯ ? ಸೇರಿದಂತೆ ಇನ್ನಿತರ ಪ್ರಶ್ನೆಗಳನ್ನು ಕೇಳಿದರು. ವೈದ್ಯಕೀಯ ವಿದ್ಯಾರ್ಥಿಗಳು ಚಿಕಿತ್ಸೆ ನೀಡುತ್ತಿದ್ದಾರೆ ಎಂಬ ದೂರಿಗೆ ಸಂಬAಧಿಸಿದAತೆ ಪ್ರತಿಕ್ರಿಯಿಸಿದ ಉಪಲೋಕಾಯುಕ್ತರು, ವಿದ್ಯಾರ್ಥಿಗಳು ಚಿಕಿತ್ಸೆ ಬಗ್ಗೆ ತಿಳಿದುಕೊಳ್ಳುವುದರಲ್ಲಿ ಅಡ್ಡಿಯಿಲ್ಲ. ಆದರೆ, ಆ ಸಂದರ್ಭ ನುರಿತ ತಜ್ಞರು ಜೊತೆಗಿದ್ದು, ಮಾರ್ಗದರ್ಶನ ನೀಡಬೇಕೆಂದರು.
ಉದ್ಯಾನ ಜಾಗದಲ್ಲಿ ಕಸ, ವಾಹನ ನಿಲುಗಡೆ
ಮಡಿಕೇರಿಯ ದಾಸವಾಳ ರಸ್ತೆಯ ಉದ್ಯಾನವನ ಜಾಗದಲ್ಲಿ ಕಸ ತುಂಬಿರುವುದು ಹಾಗೂ ಖಾಸಗಿ ವಾಹನ ನಿಲುಗಡೆ ಮಾಡಿರುವುದರ ಬಗ್ಗೆ ಉಪಲೋಕಾಯುಕ್ತರಾದ ಫಣೀಂದ್ರ ಅವರು ಕಿಡಿಕಾರಿದರು.
ಉದ್ಯಾನ ಎಂದು ಗುರುತಿಸಿದ ಜಾಗದಲ್ಲಿ ಉದ್ಯಾನವನವೇ ಇಲ್ಲ. ಬದಲಾಗಿ ವಾಹನ ನಿಲುಗಡೆಯ ಸ್ಥಳವಾಗಿ, ಕಸದ ಕೊಂಪೆಯಾಗಿ ಬದಲಾಗಿದೆ. ಇದಕ್ಕೆ ಕಾರಣವೇನು ಎಂದು ಪೌರಾಯುಕ್ತ ರಮೇಶ್ ಅವರನ್ನು ಪ್ರಶ್ನಿಸಿ, ತರಾಟೆಗೆ ತೆಗೆದುಕೊಂಡರು. ಸೂಕ್ತ ಭದ್ರತೆಯನ್ನು ಕಲ್ಪಿಸಬೇಕು. ಜಾಗವನ್ನು ರಕ್ಷಿಸಬೇಕು. ೪ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ಉತ್ತಮ ವಾತಾವರಣವನ್ನು ಸೃಷ್ಟಿಸಬೇಕೆಂದು ತಾಕೀತು ಮಾಡಿದರು.
ಇದೇ ಸಂದರ್ಭ ವೈದ್ಯಕೀಯ ತ್ಯಾಜ್ಯಗಳು ತುಂಬಿದ್ದ ಚೀಲಗಳು ಕಂಡುಬAದವು. ಇದನ್ನು ಗಮನಿಸಿದ ಉಪಲೋಕಾಯುಕ್ತರು ಪರಿಶೀಲಿಸಿ ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು. ಈ ಸಂದರ್ಭ ಅಸುಪಾಸಿನ ನಿವಾಸಿಗಳು ಆಟೋದಲ್ಲಿ ಬಂದ ವ್ಯಕ್ತಿಯೊಬ್ಬರು ಕಸ ಹಾಕಿದ್ದು, ಪ್ರಶ್ನಿಸಿದ ಸಂದರ್ಭ ನಮ್ಮ ಜೊತೆ ವಾಗ್ವಾದ ನಡೆಸುತ್ತಾರೆ ಎಂದು ಮಾಹಿತಿ ನೀಡಿದರು. ತಕ್ಷಣ ವೀಡಿಯೋ ಸಾಕ್ಷಾö್ಯಧಾರ ಪಡೆದುಕೊಂಡ ಉಪಲೋಕಾಯುಕ್ತರು ಪ್ರಕರಣ ದಾಖಲಿಸಲು ಪೊಲೀಸ್ ವರಿಷ್ಠಾಧಿಕಾರಿಗೆ ನಿರ್ದೇಶನ ನೀಡಿದರು. ಬಳಿಕ ಪೊಲೀಸರು ಪೌರಾಯುಕ್ತ ರಮೇಶ್ ಅವರು ನೀಡಿದ ದೂರಿನಡಿ ಪ್ರಕರಣ ದಾಖಲಿಸಿಕೊಂಡರು.
ಆರ್ಟಿಓ ಕಚೇರಿ ಖಾಲಿ ಖಾಲಿ
ಸದಾ ಜನರಿಂದ ಗಿಜಿಗುಡುತ್ತಿದ್ದ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿ ಇಂದು ಖಾಲಿ ಹೊಡೆಯುತ್ತಿತ್ತು. ಇದು ಉಪಲೋಕಾಯುಕ್ತರಲ್ಲಿ ಪ್ರಶ್ನೆಯನ್ನೂ ಮೂಡಿಸಿತು. ಆರ್ಟಿಓಗೆ ಭೇಟಿ ನೀಡಿ ಪರಿಶೀಲಿಸಿದ ಉಪಲೋಕಾಯುಕ್ತರು ತೆರಿಗೆ ಪಾವತಿಸದ ವಾಹನಗಳನ್ನು ವಶಪಡಿಸಿಕೊಳ್ಳಬೇಕು. ಕಡತ ವಿಲೇವಾರಿ ತಡವಾಗಬಾರದು ಎಂದು ಸೂಚಿಸಿದರು.
ಇದೇ ವೇಳೆ ಕಡತಗಳೊಂದಿಗೆ ಸಿಬ್ಬಂದಿಗಳ ಮೊಬೈಲ್, ಡಿಜಿಟಲ್ ಹಣ ಪಾವತಿ ಆ್ಯಪ್ಗಳನ್ನು ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಆರ್ಟಿಓದಲ್ಲಿ ಸಾರ್ವಜನಿಕರೇ ಇಲ್ಲದ ಬಗ್ಗೆಯೂ ಪ್ರಶ್ನಿಸಿದರು.
ಮೆಡಿಕಲ್ ಕಾಲೇಜಿಗೆ ಭೇಟಿ
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮೆಡಿಕಲ್ ಕಾಲೇಜು) ವಸತಿ ನಿಲಯಗಳಿಗೆ ಉಪಲೋಕಾಯುಕ್ತರು ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು.
ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ವಸತಿನಿಲಯಗಳಿಗೆ ಭೇಟಿ ನೀಡಿ ಅಲ್ಲಿನ ಅಡುಗೆ ಕೋಣೆ, ಮಲಗುವ ಕೊಠಡಿ, ಆಹಾರದ ಗುಣಮಟ್ಟವನ್ನು ಪರಿಶೀಲನೆ ನಡೆಸಿದರು. ಇದೇ ಸಂದರ್ಭ ಮಕ್ಕಳೊಂದಿಗೆ ಸಮಲೋಚನೆ ನಡೆಸಿ ಸಮಸ್ಯೆಗಳಿದ್ದರೆ ತಿಳಿಸುವಂತೆ ಹೇಳಿದರು. ಈ ವೇಳೆ ವಿದ್ಯುತ್ ಕಡಿತಗೊಂಡ ಸಂದರ್ಭ ಜನರೇಟರ್ ವ್ಯವಸ್ಥೆ ಇಲ್ಲ, ಕ್ರೀಡಾ ಚಟುವಟಿಕೆಗಳಿಲ್ಲ, ಬಟ್ಟೆ ಒಣಗಿಸಲು ವ್ಯವಸ್ಥೆಯಿಲ್ಲ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಹೇಳಿಕೊಂಡರು. ಪ್ರತಿ ಅಂತಸ್ತಿನಲ್ಲಿ ವಾಟರ್ ಫಿಲ್ಟರ್, ಅಗತ್ಯ ಔಷಧಿಗಳ ದಸ್ತಾನು, ವೈದ್ಯಕೀಯ ತಪಾಸಣೆ ನಡೆಸುವಂತೆ ಉಪಲೋಕಾಯುಕ್ತರು ಸೂಚಿಸಿದರು.
ಈ ಸಂದರ್ಭ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ, ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಮತ್ತು ಸಿವಿಲ್ ನ್ಯಾಯಾಧೀಶರಾದ ಕಿರಣ್ ಪಾಟೀಲ, ಲೋಕಾಯುಕ್ತ ಎಸ್ಪಿ ಉದೇಶ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ, ತಹಶೀಲ್ದಾರ್ ಶ್ರೀಧರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.