ಕಡಂಗ, ಜು. ೪: ಸ್ಥಳೀಯ ಮೊಹಿಯದ್ದೀನ್ ಜಮಾಅತ್ ವತಿಯಿಂದ ಎಸ್.ಐ.ಆರ್ ವಿಷಯದ ಕುರಿತ ಕಾರ್ಯಕ್ರಮವನ್ನು ಕಡಂಗ ಗ್ರಾಮದ ಶಾದಿ ಮಹಲ್ ಸಭಾಂಗಣದಲ್ಲಿ ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷರಾದ ಅಬ್ದುಲ್ ಅವರು ವಹಿಸಿದ್ದರು. ಪ್ರಾರ್ಥನೆಯನ್ನು ಇರ್ಷಾದ್ ಮನ್ನಾನಿ ಮತ್ತು ಸ್ವಾಗತವನ್ನು ಶುಹೈಬ್ ಫೈಜಿ ನಿರ್ವಹಿಸಿದ್ದರು.

ಈ ಸಂದರ್ಭದಲ್ಲಿ ಪಿರಿಯಾಪಟ್ಟಣದ ಪ್ರಾಧ್ಯಾಪಕರಾದ ಶಾಕಿರ್ ಅವರ ಮಾರ್ಗದರ್ಶನದಲ್ಲಿ ಎಸ್.ಐ.ಆರ್‌ನ ಕುರಿತು ಅರಿವು ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ವಂದನೆಯನ್ನು ಸುಬೀರ್ ಸಿ.ಇ ನಿರ್ವಹಿಸಿದರು.