ಮಡಿಕೇರಿ, ಜು. ೩: ಮಡಿಕೇರಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಜಿ. ಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ತಾಲೂಕು ಗ್ಯಾರಂಟಿ ಸಮಿತಿ ಸಭೆ ನಡೆಯಿತು.
ಶಿಶು ಅಭಿವೃದ್ಧಿ ಇಲಾಖೆಯಲ್ಲಿ ಗೃಹಲಕ್ಷಿö್ಮ ಯೋಜನೆಯಡಿ ಏಪ್ರಿಲ್ ಮಾಹೆಯವರೆಗೆ ಮಾತ್ರ ಫಲಾನುಭವಿಗಳಿಗೆ ಹಣ ಬಿಡುಗಡೆಯಾಗಿದ್ದು, ಗೃಹಲಕ್ಷಿö್ಮ ಯೋಜನೆಗೆ ಸಂಬAಧಿಸಿದAತೆ ಮಹಾಲೇಖಪಾಲಕರ ಆಡಿಟ್‌ಗೆ ಅನುಪಾಲನೆ ಒದಗಿಸುವಂತೆ ಪ್ರಿನ್ಸಿಪಲ್ ಅಕೌಂಟೆAಟ್ ಜನರಲ್ ಅವರು ಪತ್ರದಲ್ಲಿ ಸೂಚಿಸಿದ್ದು, ಈ ಪತ್ರದ ಕ್ರ.ಸಂ. ೧ ರಲ್ಲಿ ತಾಲೂಕುಗಳಲ್ಲಿ ಹಲವು ಫಲಾನುಭವಿಗಳಿಗೆ ಒಂದೇ ಖಾತೆಗೆ ಯೋಜನೆಯ ಧನಸಹಾಯ ಪಾವತಿಯಾಗಿರುವುದು ಕಂಡುಬAದಿದೆ. ಆದ್ದರಿಂದ ಈ ವಿಷಯದ ಕುರಿತು ಸಂಬAಧಪಟ್ಟ ಬ್ಯಾಂಕ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಲು ಸೂಚಿಸಿದರು.
ಮಡಿಕೇರಿ ತಾಲೂಕಿನಲ್ಲಿ ೧ ಪ್ರಕರಣ ಕಂಡುಬAದಿದ್ದು ಇದುವರೆಗೆ ಬೇರೆ ಬೇರೆ ರೇಷನ್ ಕಾರ್ಡ್ ಇದ್ದು, ಇಬ್ಬರ ಗೃಹಲಕ್ಷಿö್ಮ ಹಣ ಒಂದೇ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದ್ದು ಈ ಮಾಹಿತಿಯನ್ನು ಮೇಲಾಧಿಕಾರಿಯವರಿಗೆ ವರದಿ ಮಾಡಲಾಗಿದೆ ಎಂದು ಅಧ್ಯಕ್ಷರು ಹೇಳಿದರು. ಜಿಲ್ಲೆಯಲ್ಲಿ ಹಲವು ಫಲಾನುಭವಿಗಳಿಗೆ ಒಂದಕ್ಕಿAತ ಹೆಚ್ಚು ಬ್ಯಾಂಕ್ ಖಾತೆಗಳಿಗೆ ಯೋಜನೆಯ ಧನಸಹಾಯ ಪಾವತಿಯಾಗಿರುವುದು ಕಂಡುಬAದಿದ್ದು, ಕ್ಷೇತ್ರ ಮಟ್ಟದಲ್ಲಿ ಪರಿಶೀಲಿಸಲು ಸೂಚಿಸಿದ್ದು, ಅದರಂತೆ ಮಡಿಕೇರಿ ತಾಲ್ಲೂಕಿನಲ್ಲಿ ಪರಿಶೀಲನೆ ನಡೆಸಿದಾಗ ಒಂದಕ್ಕಿAತ ಹೆಚ್ಚು ಖಾತೆ ಇರುವ ಫಲಾನುಭವಿಗಳು ೧೫೦೦ ಜನರ ಮಾಹಿತಿ ಸಿಕ್ಕಿದ್ದು ಈ ಮಾಹಿತಿಯನ್ನು ಸರ್ಕಾರಕ್ಕೆ ವರದಿ ಮಾಡಲಾಗಿರುತ್ತದೆ ಎಂದು ಮಂದ್ರೀರ ಮೋಹನ್ ದಾಸ್ ಸಭೆಗೆ ತಿಳಿಸಿದರು.
ತಾ.ಪಂ. ಇಒ ಶೇಖರ್ ಮಾತನಾಡಿ, ಮುಂದಿನ ವಾರ ಲೀಡ್ ಬ್ಯಾಂಕ್, ಅಂಚೆ ಕಚೇರಿಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮರಣ ಹೊಂದಿದವರ ಖಾತೆಗೆ ಹಣ ಜಮೆಯಾಗಿರುವ ವಿವರ ಪಡೆದು ಈ ಹಣವನ್ನು ಸರ್ಕಾರದ ಲೆಕ್ಕ ಶೀರ್ಷಿಕೆಗೆ ಜಮೆ ಮಾಡಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಬಸ್‌ಗಳು ಮಡಿಕೇರಿ ಬಸ್ ನಿಲ್ದಾಣದಿಂದ ಸರಿಯಾದ ಸಮಯಕ್ಕೆ ತೆರಳದೆ ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದು ಬಸ್‌ಗಳು ಸರಿಯಾದ ಸಮಯಕ್ಕೆ ತೆರಳುವಂತೆ ಕ್ರಮವಹಿಸಲು ಇಲಾಖಾಧಿಕಾರಿಯವರಿಗೆ ಅಧ್ಯಕ್ಷರು ಸೂಚಿಸಿದರು. ಸಮಿತಿ ಸದಸ್ಯರು ಮಾತನಾಡಿ, ಭಾಗಮಂಡಲ - ತಲಕಾವೇರಿ ಮಾರ್ಗದಲ್ಲಿ ಹಾಗೂ ಮಡಿಕೇರಿ - ಕರಿಕೆ ಮಾರ್ಗದಲ್ಲಿಯೂ ಬಸ್ ಕೊರತೆ ಇದ್ದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಬಸ್ ವ್ಯವಸ್ಥೆ ಕಲ್ಪಿಸುವಂತೆ ಇಲಾಖಾಧಿಕಾರಿಯವರಿಗೆ ತಿಳಿಸಿದರು.
ಯುವನಿಧಿ ಯೋಜನೆಗೆ ಸಂಬAಧಿಸಿದAತೆ ೨೦೨೪, ೨೦೨೫ ಮತ್ತು ೨೦೨೬ ರಲ್ಲಿ ಪದವಿ ಮತ್ತು ಡಿಪ್ಲೋಮಾ ಉತ್ತೀರ್ಣರಾಗಿ ಕನಿಷ್ಟ ೬ ತಿಂಗಳ ಅವಧಿಯವರೆಗೆ ಸರ್ಕಾರಿ/ಖಾಸಗಿ ಉದ್ಯೋಗ ಹೊಂದಿಲ್ಲದವರು, ಸ್ವಯಂ ಉದ್ಯೋಗ ಹೊಂದಿಲ್ಲದವರು, ಉನ್ನತ ವಿದ್ಯಾಭ್ಯಾಸ ಮುಂದುವರಿಸದೇ ಇರುವವರು ಈ ಯೋಜನೆಗೆ ಅರ್ಹರಾಗಿರುತ್ತಾರೆ.
ಈ ಯೋಜನೆಯ ಪ್ರಯೋಜನ ಮುಂದುವರಿಸಬೇಕಾಗಿದ್ದಲ್ಲಿ ಪ್ರತಿ ತಿಂಗಳ ೨೫ನೇ ತಾರೀಖಿನೊಳಗೆ ಸ್ವಯಂ ಘೋಷಣೆ ಮಾಡಬೇಕು, ನಿರುದ್ಯೋಗಿಗಳು ಸ್ವಯಂ ದೃಢೀಕರಣ ನೀಡಿದ್ದಲ್ಲಿ ಮಾತ್ರ ಡಿಬಿಟಿ ಮೂಲಕ ನಿರುದ್ಯೋಗ ಭತ್ಯೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಇಲಾಖಾ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಸಮಿತಿ ಸದಸ್ಯರಾದ ಪ್ರಭು ರೈ ಮಾತನಾಡಿ, ಯುವನಿಧಿ ಯೋಜನೆಗೆ ಸಂಬAಧಿಸಿದAತೆ ೨೦೨೩-೨೪, ೨೦೨೪-೨೫ ಹಾಗೂ ೨೦೨೫-೨೬ನೇ ಸಾಲಿನ ಮಡಿಕೇರಿ ತಾಲೂಕುವಾರು ವರದಿಯನ್ನು ಮುಂದಿನ ಸಭೆಗೆ ಒದಗಿಸುವಂತೆ ಹಾಗೂ ಯುವನಿಧಿ ಯೋಜನೆಯಲ್ಲಿ ನೋಂದಣಿಯಾಗಿರುವ ಡಿಪ್ಲೋಮ ಹಾಗೂ ಪದವಿಧರರ ಮಾಹಿತಿಯನ್ನು ಒದಗಿಸುವಂತೆ ಇಲಾಖಾಧಿಕಾರಿಯವರಿಗೆ ತಿಳಿಸಿದರು.
ಸೆಸ್ಕ್ ಇಂಜಿನಿಯರ್ ಮಾತನಾಡಿ, ಮಡಿಕೇರಿ ತಾಲೂಕಿನಲ್ಲಿ ೫೨,೬೫೩ ಅರ್ಹ ವಿದ್ಯುತ್ ಸ್ಥಾವರಗಳಿದ್ದು, ಗೃಹಜ್ಯೋತಿ ಯೋಜನೆಯಡಿ ೫೨,೧೧೦ ನೋಂದಣಿಗೊAಡ ಅರ್ಜಿಗಳಾಗಿದ್ದು ಶೇ. ೯೮.೯೭ ಶೇಕಡವಾರು ಪ್ರಗತಿಯಾಗಿರುವ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
ಅನ್ನಭಾಗ್ಯ ಯೋಜನೆಗೆ ಸಂಬAಧಿಸಿದAತೆ ಮಡಿಕೇರಿ ತಾಲೂಕಿನಲ್ಲಿ ಪತ್ತೆಹಚ್ಚಿರುವ ಅನರ್ಹ ಫಲಾನುಭವಿಗಳ ಸಂಖ್ಯೆ ೧,೩೮೦ ಆಗಿರುತ್ತದೆ ಹಾಗೂ ಪ್ರಸ್ತುತ ಆಹಾರ ಇಲಾಖೆಯಲ್ಲಿ ಹೊಸಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವುದನ್ನು ಸ್ಥಗಿತಗೊಳಿಸಲಾಗಿದೆ. ಪ್ರಸ್ತುತ ಆಹಾರ ಇಲಾಖೆಯಲ್ಲಿ ಆಸ್ಷತ್ರೆ ಚಿಕಿತ್ಸೆಗಾಗಿ, ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಮತ್ತು ಈಗಾಗಲೇ ಚಾಲ್ತಿಯಲ್ಲಿರುವ ಪಡಿತರ ಚೀಟಿಗಳಲ್ಲಿ ಸದಸ್ಯರ ಹೆಸರು ಸೇರ್ಪಡೆ ಮಾಡುವ / ವರ್ಗಾವಣೆ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ ಎಂದು ಸಭೆಗೆ ಸಂಬAಧಿಸಿದವರು ಮಾಹಿತಿ ನೀಡಿದರು.
ಸಭೆಯಲ್ಲಿ ರಾಜೇಶ್ವರಿ, ಸಿರಾಜುದ್ದಿನ್, ದಯಾನಂದ ಎಂ.ಎಸ್., ರಂಗಪ್ಪ, ಮಿಟ್ಟು ಸೋಮಯ್ಯ ಮತ್ತು ಇಲಾಖಾ ಅಧಿಕಾರಿಗಳು ಇದ್ದರು.