ಭಾಗಮಂಡಲ, ಜು. ೪: ಕಾವೇರಿ ತವರು ಭಾಗಮಂಡಲದಲ್ಲಿ ಜೂನ್ ತಿಂಗಳಲ್ಲಿ ಮಳೆಯ ಕೊರತೆ ಕಂಡುಬAದಿತ್ತಾದರೂ ಇದೀಗ ಚೇತರಿಕೆ ಹಾದಿಯಲ್ಲಿದೆ. ಕಳೆದ ಎರಡು ಮೂರು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ.

ಮಳೆ ಕಾಣಿಸಿಕೊಳ್ಳುತ್ತಿದ್ದಂತೆ ಭಾಗಮಂಡಲ ವ್ಯಾಪ್ತಿಯಲ್ಲಿ ರೈತರು ವ್ಯವಸಾಯ ಮಾಡಲು ಉತ್ಸುಕರಾಗಿದ್ದಾರೆ. ಕೆಲವು ಭಾಗಗಳಲ್ಲಿ ಈಗಾಗಲೇ ಗದ್ದೆ ಉಳುಮೆ ಮಾಡಲಾಗಿದ್ದು, ಭತ್ತದ ಬಿತ್ತನೆಗೆ ಅಣಿಯಾಗುತ್ತಿದ್ದಾರೆ. ಸಮೀಪದ ತಣ್ಣಿಮಾನಿ ಭಾಗದಲ್ಲಿ ಬಿತ್ತನೆ ಆರಂಭಗೊAಡಿದ್ದು ೧೫ ದಿನಗಳಲ್ಲಿ ಭತ್ತದ ನಾಟಿ ಕೆಲಸ ಆರಂಭವಾಗಲಿದೆ. ಮಳೆಯಿಂದಾಗಿ ತ್ರಿವೇಣಿ ಸಂಗಮದಲ್ಲಿ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದೆ.

ಕಳೆದ ವರ್ಷಕ್ಕೂ ಈ ವರ್ಷಕ್ಕೂ ಮಳೆಯ ಪ್ರಮಾಣದಲ್ಲಿ ತುಂಬಾ ವ್ಯತ್ಯಾಸ ಕಂಡು ಬಂದಿದ್ದು, ತಲಕಾವೇರಿಯಲ್ಲಿ ಕಳೆದ ವರ್ಷ ಈ ಅವಧಿಗೆ ೧೪೮ ಇಂಚು ಮಳೆಯಾಗಿತ್ತು. ಈ ವರ್ಷ ಇದುವರೆಗೆ ಕೇವಲ ೪೭ ಇಂಚು ಮಳೆ ಸುರಿದಿದೆ. ಭಾಗಮಂಡಲದಲ್ಲಿ ಕಳೆದ ವರ್ಷ ೧೨೧ ಇಂಚು ಮಳೆಯಾಗಿದ್ದರೆ ಈ ವರ್ಷ ಇದುವರೆಗೆ ಕೇವಲ ೩೫ ಇಂಚು ಮಳೆ ಸುರಿದಿದೆ.

ಮಳೆಯೊಂದಿಗೆ ವಿದ್ಯುತ್ ಕಡಿತಗೊಳ್ಳುತ್ತಿದ್ದು ಜನ ಸಾಮಾನ್ಯರು ಸಮಸ್ಯೆ ಎದು ರಿಸುವಂತಾಗಿದೆ. ಗ್ರಾಮೀಣ ಪ್ರದೇಶಗಳು ವಿದ್ಯುತ್ ಕೊರತೆ ಯಿಂದ ಕತ್ತಲಲ್ಲಿ ಮುಳುಗ Äವಂತಾಗಿದೆ. ಮಳೆಗಾಲದಲ್ಲಿ ವಿದ್ಯುತ್ ಕಡಿತಗೊಳ್ಳದಂತೆ ಸೆಸ್ಕ್ ಇಲಾಖೆ ಕ್ರಮವಹಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

- ಸುನಿಲ್ ಕುಯ್ಯಮುಡಿ