ಗೋಣಿಕೊಪ್ಪ ವರದಿ, ಜು. ೪: ಕೈಕೇರಿ ಗ್ರಾಮದಲ್ಲಿರುವ ಕೊಡಗು ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ವಿಪ್ರ ಸಭಾಭವನ ಲೋಕಾರ್ಪಣೆ ಕಾರ್ಯಕ್ರಮ ತಾ. ೮ ಮತ್ತು ೯ ರಂದು ಜರುಗಲಿದೆ ಎಂದು ಕೊಡಗು ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಘವೇಂದ್ರ ವೈಲಾಯ ತಿಳಿಸಿದ್ದಾರೆ.

ಉದ್ಘಾಟನಾ ಸಂದರ್ಭ ವಿವಿಧ ಧಾರ್ಮಿಕ ವಿಧಿವಿಧಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ತಾ. ೮ ರಂದು ಸಂಜೆ ೬ ಗಂಟೆಗೆ ವಾಸ್ತು ಹೋಮ, ರಾಕ್ಷೆÆÃಘ್ನ ಹೋಮ, ಮಹಾ ಸುದರ್ಶನ ಹೋಮ, ದುರ್ಗಾ ನಮಸ್ಕಾರ ಪೂಜೆ ನೆರವೇರಲಿದೆ. ತಾ. ೯ ರಂದು ಬೆಳಿಗ್ಗೆ ೬.೩೦ ಗಂಟೆಗೆ ಮಹಾ ಗಣಪತಿ ಹೋಮ, ೮ಕ್ಕೆ ಸತ್ಯನಾರಾಯಣ ಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ೨ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ, ೩.೩೦ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು. ಜು. ೯.೩೦ ಗಂಟೆಗೆ ಸಂಸದ ಯದುವೀರ್ ಒಡೆಯರ್ ವಿಪ್ರ ಯುವ ಸಂಘದ ಭೋಜನ ಶಾಲೆ(ಅನ್ನಪೂರ್ಣ)ಯನ್ನು ಉದ್ಘಾಟಿಸಲಿದ್ದಾರೆ. ಶಾಸಕ ಎ.ಎಸ್. ಪೊನ್ನಣ್ಣ ಸಭಾಭವನ ಉದ್ಘಾಟಿಸಲಿದ್ದಾರೆ. ಶ್ರೀ ಮಠ ಬಾಳೆಕುದ್ರು ಶ್ರೀ ವಾಸುದೇವ ಸದಾಶಿವಾಶ್ರಮದ ಮಹಾ ಸ್ವಾಮೀಜಿ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಆಶೀರ್ವಚನ ನೀಡಲಿದ್ದಾರೆ. ಕೊಡಗು ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಘವೇಂದ್ರ ವೈಲಾಯ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ವಿಪ್ರ ಯುವಸಂಘ ಸ್ಥಾಪಕ ಕಾರ್ಯದರ್ಶಿ ರಾಜೇಶ್ ನೂರಿತ್ತಾಯ, ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ, ಮಾಜಿ ಎಂಎಲ್‌ಸಿ ಮಂಡೇಪAಡ ಸುನಿಲ್ ಸುಬ್ರಮಣಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ರಮಣಶರ್ಮ ಅಧ್ಯಕ್ಷತೆಯಲ್ಲಿ ಸಂಘ ಸ್ಥಾಪನೆ ಮಾಡಲಾಯಿತು. ಹಿರಿಯ ವಿಪ್ರ ಬಾಂಧವರ ಅವಿರತ ಶ್ರಮದಿಂದ ನಿವೇಶನ ಖರೀದಿಸಿ ೨೦೧೬ ರಲ್ಲಿ ವಿಪ್ರ ಸಭಾಭವನ ಹೆಸರಿನಲ್ಲಿ ಉದ್ಘಾಟಿಸಲಾಯಿತು. ನಂತರ ವರ್ಷಗಳಲ್ಲಿ ಸಾಕಷ್ಟು ಚಟುವಟಿಕೆ ನಡೆಸಿ, ೨೦೨೪ ರಲ್ಲಿ ಹೊಸ ತಂಡ ಆಡಳಿತ ವಹಿಸಿಕೊಂಡು ಸುಸಜ್ಜಿತ ಸಭಾ ಭವನ ಇಲ್ಲದೆ ಇರುವುದನ್ನು ಪರಿಗಣಿಸಿ ಮಹಾಸಭೆಯಲ್ಲಿ ಅನುಮತಿ ಪಡೆದುಕೊಂಡು ವಿಪ್ರ ಸಭಾ ಭವನ ನಿರ್ಮಾಣಕ್ಕೆ ಯೋಜನೆ ರೂಪಿಸಿ ಮುಂದುವರಿಸಲಾಯಿತು.

ವಿಪ್ರ ಯುವಸಂಘ ಹೆಸರಿನಲ್ಲಿ ರೂ. ೫ ಲಕ್ಷ ಸಹಾಯ ಧನ ಲಭಿಸಿದ್ದು, ಕಾರ್ಯ ಯೋಜನೆ ರೂಪಿಸಿ ವಿಪ್ರ ಅನ್ನಪೂರ್ಣೇಶ್ವರಿ ಭೋಜನ ಶಾಲೆ ಎಂದು ಪ್ರಾರಂಭಿಸಲಾಯಿತು. ಸಂಸದ ಯದುವೀರ್ ಒಡೆಯರ್ ರೂ. ೨೦ ಲಕ್ಷ ಅನುದಾನ ನೀಡುವ ಭರವಸೆಯಂತೆ ಹಾಗೂ ವಿಪ್ರ ಬಾಂಧವರ ಪ್ರೋತ್ಸಾಹದಿಂದ ಅಂದಾಜು ಮೊತ್ತ ರೂ. ೯೦ ಲಕ್ಷ ಹಣದಲ್ಲಿ ಸಭಾ ಭವನ ನಿರ್ಮಿಸಲಾಗಿದ್ದು, ಒಂದಷ್ಟು ಕಾಮಗಾರಿಗಳು ನಡೆಯಬೇಕಿದೆ. ಶಾಸಕ ಎ.ಎಸ್. ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಅವರುಗಳು ಕೂಡ ಅನುದಾನ ನೀಡುವುದಾಗಿ ಭರವಸೆ ನೀಡಿದ್ದು, ಮುಂದಿನ ದಿನಗಳಲ್ಲಿ ಉಳಿಕೆಯಾಗಿರುವ ಎಲ್ಲಾ ಯೋಜನೆಯನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು. ಗೌರವ ಅಧ್ಯಕ್ಷ ಶ್ರೀಪತಿ ಪಡಂತ್ತಾಯ, ಪ್ರಧಾನ ಕಾರ್ಯದರ್ಶಿ ಸುದರ್ಶನ್ ಕೆದಿಲಾಯ, ಕೋಶಾಧಿಕಾರಿ ಪವನ್ ಕಂಡಿಪಾಡಿತ್ತಾಯ, ಉಪಾಧ್ಯಕ್ಷ ಮೋಹನ್ ನಲ್ಲೂರಾಯ, ಸಹ ಕಾರ್ಯದರ್ಶಿ ಲಲಿತಾ ಹರಿ ನಾರಾಯಣ, ನಿರ್ದೇಶಕರುಗಳಾದ ಪ್ರಭಾಕರ್ ನೆಲ್ಲಿತ್ತಾಯ, ವಿಜಯಲಕ್ಷಿö್ಮ ಶಶಿಧರ, ಶಾರದ ಮಣಿ, ವಿಷ್ಣುಮೂರ್ತಿ ಹರಳಿತ್ತಾಯ, ವಿಕ್ರಂ ತೋಟಂತಿಲ್ಲಾಯ, ಸದಸ್ಯೆ ಚಂದ್ರಕಲಾ ಮೂರ್ತಿ ಉಪಸ್ಥಿತರಿದ್ದರು.