ಶನಿವಾರಸಂತೆ, ಜು. ೪: ಸಮೀಪದ ಕೊಡ್ಲಿಪೇಟೆ ಹೋಬಳಿ, ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಣಿಗನಹಳ್ಳಿ ಗ್ರಾಮದ ಡಾ. ವಿಶಾಲ್ ಶೆಟ್ಟಿ ಅವರು “ಸ್ಟಾರ್ ಎಕ್ಸಲೆನ್ಸ್ ಅವಾರ್ಡ್ -೨೦೨೬’’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಡಾ. ವಿಶಾಲ್ ಶೆಟ್ಟಿ ಅವರು ಸಮಾಜಮುಖಿ ಸೇವೆ, ಶಿಕ್ಷಣ, ಮಾನಸಿಕ ಆರೋಗ್ಯ ಜಾಗೃತಿ ಮತ್ತು ಯುವಜನರ ವ್ಯಕ್ತಿತ್ವ ವಿಕಸನ ಕ್ಷೇತ್ರದಲ್ಲಿ ಸಲ್ಲಿಸಿರುವ ವಿಶಿಷ್ಟ ಸೇವೆಯನ್ನು ಗುರುತಿಸಿ, ಕರ್ನಾಟಕ ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅಸೋಸಿಯೇಷನ್ ಆಫ್ ಅಲೆಯೆನ್ಸ್ ಕ್ಲಬ್ ಇಂಟರ್ ನ್ಯಾಷನಲ್ ವತಿಯಿಂದ ಶ್ರೀ ಅನಂತೇಶ್ವರ ಭವನದಲ್ಲಿ ಆಯೋಜಿಸಲಾದ ವಿಶೇಷ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗಿದೆ. ಕೋಣಿಗನಹಳ್ಳಿ ಗ್ರಾಮದ ಗುರುಸ್ವಾಮಿ ಶೆಟ್ಟಿ - ಲಲಿತಮ್ಮ ದಂಪತಿಯ ಪುತ್ರ ಡಾ. ವಿಶಾಲ್ ಶೆಟ್ಟಿ ಕಳೆದ ೧೨ ವರ್ಷಗಳಿಂದ ಮಾನಸಿಕ ಆರೋಗ್ಯ, ವ್ಯಕ್ತಿತ್ವ ವಿಕಸನ ಹಾಗೂ ಜೀವನ ಕೌಶಲ್ಯ ಕ್ಷೇತ್ರದಲ್ಲಿ ಮೈಂಡ್ ಕೋಚ್ ಹಾಗೂ ಕೌನ್ಸೆಲರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.