ಗೋಣಿಕೊಪ್ಪ, ಜು. ೪: ಗೋಣಿಕೊಪ್ಪ ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ವತಿಯಿಂದ ಗೋಣಿಕೊಪ್ಪ ಅನುದಾನಿತ ಪ್ರೌಢಶಾಲೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ನಡೆಯಿತು.

ಕಿತ್ತಳೆ, ಕೈಹುಳಿ, ಬೇವು, ಸೀಬೆ, ಮೂಸಂಬಿ ಸೇರಿದಂತೆ ಸುಮಾರು ೧೭ ಬಗೆಯ ಗಿಡಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದ್ದು, ಅವುಗಳನ್ನು ನೆಟ್ಟು ಪೋಷಿಸುವ ಸಂಕಲ್ಪವನ್ನು ವಿದ್ಯಾರ್ಥಿಗಳು ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ೯ನೇ ತರಗತಿ ವಿದ್ಯಾರ್ಥಿನಿ ಮಿಕ್ಷಾ ಪರಿಸರ ಸಂರಕ್ಷಣೆಯ ಮಹತ್ವ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಅಧ್ಯಕ್ಷ ಡಾ. ಆಶಿಕ್ ಚಂಗಪ್ಪ, ಕಾರ್ಯದರ್ಶಿ ಮೋಹನ್, ಖಜಾಂಚಿ ಸಚಿನ್, ಬಿ.ಎನ್. ಪ್ರಕಾಶ್, ನಾಗೇಂದ್ರ, ರವಿ, ಸಂಜೀವ್, ರತು ಉತ್ತಪ್ಪ, ನಾಗೇಶ್, ಆ್ಯಂಟೋನಿ ಜೋಸೆಫ್, ಶರತ್, ಜಿತೇಂದ್ರ, ರಾಜನ್ ತಿಮ್ಮಯ್ಯ, ಶಾಲಾ ನಿರ್ವಹಣಾ ಸಮಿತಿಯ ಅಧ್ಯಕ್ಷ ಪಳನಿ ಹಾಗೂ ಮುಖ್ಯೋಪಾಧ್ಯಾಯ ಚೈತನ್ಯ ಉಪಸ್ಥಿತರಿದ್ದರು.