ಕೂಡಿಗೆ, ಜು. ೪: ಕೂಡಿಗೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮತದಾನ ಸಾಕ್ಷರತಾ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಅರಿವು ಕಾರ್ಯಕ್ರಮವು ನೆರವೇರಿತು.

ರಾಜ್ಯಶಾಸ್ತç ಉಪನ್ಯಾಸಕ ಎಂ.ಟಿ ರಮೇಶ್ ಮಾತನಾಡಿ, ಭಾರತದ ಸಂವಿಧಾನ ಮತದಾನದ ಹಕ್ಕನ್ನು ಒದಗಿಸಿದೆ. ಈ ಹಕ್ಕನ್ನು ಬಳಸಿಕೊಂಡು ಉತ್ತಮ ಸರ್ಕಾರವನ್ನು ಆಯ್ಕೆ ಮಾಡುವ ಅವಕಾಶ ಎಲ್ಲರ ಕೈಯಲ್ಲಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅನರ್ಹರು ಮತದಾನ ಹಕ್ಕನ್ನು ಪಡೆದಿದ್ದಾರೆ. ಹಾಗಾಗಿ ಭಾರತದ ಚುನಾವಣಾ ಆಯೋಗ ಅರ್ಹರಾದ ಮತದಾರರಿಗೆ ನಿಜವಾದ ಹಕ್ಕು ಲಭ್ಯವಾಗಬೇಕು ಎಂಬ ಉದ್ದೇಶದಿಂದ ದೇಶಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆ ನಡೆಸುತ್ತಿದೆ ಎಂದರು.

ಮನೆಗಳಲ್ಲಿ ಬಿ.ಎಲ್.ಓಗಳು ಬರುವ ಸಂದರ್ಭದಲ್ಲಿ ಸೂಕ್ತ ದಾಖಲೆಗಳೊಂದಿಗೆ ಅವರಿಗೆ ಸ್ಪಂದಿಸಿ ಮತದಾನದ ಹಕ್ಕನ್ನು ಪಡೆಯಬೇಕು ಎಂದು ತಿಳಿಸಿದರು.

ಪ್ರಾಂಶುಪಾಲ ಹಂಡ್ರAಗಿ ನಾಗರಾಜ್ ಮಾತನಾಡಿ, ಈಗ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ವಿಶೇಷತೆಯಿಂದ ಕೂಡಿದ್ದು ಮುಂದಿನ ದಿನಗಳಲ್ಲಿ ಸರ್ಕಾರದ ಆಯ್ಕೆ ಹಾಗೂ ಸೌಲಭ್ಯಗಳಿಗೆ ಮತದಾರರ ಗುರುತಿನ ಚೀಟಿ ಮಾನದಂಡವಾಗಲಿದೆ. ಆದುದರಿಂದ ವಿದ್ಯಾರ್ಥಿಗಳು ನಿರ್ಲಕ್ಷö್ಯ ವಹಿಸದೆ ಕಡ್ಡಾಯವಾಗಿ ಮತದಾರರ ಪಟ್ಟಿ ಪರಿಷ್ಕರಣೆಗೆ ಸ್ಪಂದಿಸಬೇಕು ಎಂದು ತಿಳಿ ಹೇಳಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ನಾಗಪ್ಪ ಯಾಲಕ್ಕಿ ಕಟ್ಟೆ, ರವೀಶ್, ಹನುಮರಾಜು, ಆನಂದ್ ಲಿನೆಟ್ ಸೂಸಿ ತಂಗಚ್ಚನ್ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಇದ್ದರು.