ಕೂಡಿಗೆ, ಜು. ೨ : ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ವತಿಯಿಂದ ಅಂತರರಾಷ್ಟಿçÃಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ ಕೂಡಿಗೆ ಮತ್ತು ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕರು, ಆಟೋ ಚಾಲಕರು ಸೇರಿದಂತೆ ಗ್ರಾಮಸ್ಥರ ಸಹಕಾರದೊಂದಿಗೆ ಮಾದಕ ದ್ರವ್ಯ ವಿರೋಧಿ ದಿನಾಚರಣೆಯನ್ನು ಆಚರಿಸಲಾಯಿತು.
ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ರಾಮಚಂದ್ರ ಅವರು ಮಾತನಾಡಿ, ಯುವಕರು ದುಷ್ಟಟಗಳಿಂದ ದೂರವಿರಬೇಕಾಗಿದೆ. ಅಂತಹ ಪ್ರಸಂಗದ ಸುದ್ದಿ ತಿಳಿದ ತಕ್ಷಣವೇ ಪೊಲೀಸ್ ಸಹಾಯವಾಣೆ ಅಥವಾ ಠಾಣೆಯ ವ್ಯಾಪ್ತಿಯ ಗ್ರಾಮಾಂತರ ಗುಸ್ತು ಪೊಲೀಸ್ ಸಿಬ್ಬಂದಿಗೆ ಮಾಹಿತಿಯನ್ನು ನೀಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಗ್ರಾಮಾಂತರ ಠಾಣೆಯ ಅಪರಾಧ ವಿಭಾಗದ ಠಾಣಾಧಿಕಾರಿ ಸ್ವಾಮಿ ಸೇರಿದಂತೆ ಸಿಬ್ಬಂದಿ ವರ್ಗ, ಕೂಡಿಗೆ, ಕೂಡುಮಂಗಳೂರು ಸರ್ಕಲ್ನ ಆಟೋ ಮಾಲೀಕರು ಮತ್ತು ಚಾಲಕರು, ನೂರಾರು ಸಾರ್ವಜನಿಕರು ಇದ್ದರು.
ನಂತರ ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಎರಡೂ ಕಡೆಯ ಹಲವು ಆಟೋ ಚಾಲಕರು, ಮಾಲೀಕರು ಸೇರಿದಂತೆ ಸಾರ್ವಜನಿಕರು ತಮ್ಮ ತಮ್ಮ ವಾಹನಗಳ ಮೂಲಕ ಕೂಡಿಗೆ ಸರ್ಕಲ್ನಿಂದ ಹಾಸನ ಹೆದ್ದಾರಿ ಮೂಲಕ ಕೈಗಾರಿಕಾ ವೃತ್ತದವರೆಗೆ ಸಾಗಿ ಸಾರ್ವಜನಿಕವಾಗಿ ಅರಿವು ಮೂಡಿಸಿದರು.