ಐಗೂರು, ಜು. ೨ : ಎಸ್‌ಎಸ್‌ಎಫ್ ಸೋಮವಾರಪೇಟೆ ಸೆಕ್ಟರ್ ವತಿಯಿಂದ ಹೊಸತೋಟದ ಶಾದಿ ಮಹಲ್‌ನಲ್ಲಿ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಿತು. ಜಮಾಅತ್ ಕತೀಬ್ ಶಬೀರ್ ಅಲಿ ನೂರಾನಿ ಪ್ರಾರ್ಥನೆ ನಡೆಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಾಹಿತ್ಯೋತ್ಸವದಲ್ಲಿ ಭಾಗವಹಿಸಿದ ತಂಡಗಳಲ್ಲಿ ಕಲ್ಕಂದೂರು ತಂಡ ಪ್ರಥಮ, ಕೊಡ್ಲಿಪೇಟೆ ತಂಡ ದ್ವಿತೀಯ, ಮತ್ತು ಹೊಸತೋಟ ತಂಡ ತೃತೀಯ ಸ್ಥಾನ ಪಡೆಯಿತು. ನೌಶದ್ ಅಶ್ರಫಿ ಪ್ರಾಸ್ತಾವಿಕ ನುಡಿಯನ್ನಾಡಿದರು. ಕಾರ್ಯಕ್ರಮದಲ್ಲಿ ಮಹಮದ್ ಕುಟ್ಟಿ, ಸಲೀಂ ಹೊಸತೋಟ, ಶರೀಫ್, ಯಾಕುಬ್ ಮಾಸ್ಟರ್, ಫೈಸಲ್ ಮತ್ತು ಸಿದ್ದಿಕ್ ಉಪಸ್ಥಿತರಿದ್ದರು. ಶರೀಫ್ ಅನ್ವರಿ ಸ್ವಾಗತಿಸಿ, ವಂದಿಸಿದರು.