ಮಡಿಕೇರಿ, ಜು. ೨: ಕೂಡಿಗೆ ಕ್ರೀಡಾ ವಸತಿ ನಿಲಯದಲ್ಲಿ ಹಾಲಿ ನಡೆಯುತ್ತಿದ್ದ ಪದವಿಪೂರ್ವ ಕಾಲೇಜನ್ನು ರದ್ದುಮಾಡುವುದಾಗಿ ಸುತ್ತೋಲೆ ಬಂದಿದ್ದು ನಿಜ. ಆದರೆ, ಈ ಬಗ್ಗೆ ಯುವಸಬಲೀಕರಣ ಮತ್ತು ಕ್ರೀಡಾ ಸಚಿವರೊಂದಿಗೆ ಮಾತುಕತೆ ನಡೆಸಿ ಪಿಯುಸಿ ನಿಲಯ/ತರಗತಿಗಳನ್ನು ಮುಂದುವರಿಸುವAತೆ ತೀರ್ಮಾ ನಿಸಲಾಗಿದೆ ಎಂದು ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್. ಅರುಣ್ ಮಾಚಯ್ಯ ತಿಳಿಸಿದ್ದಾರೆ. ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ಶಕ್ತಿ ಪತ್ರಿಕೆಯಲ್ಲಿ ‘ಕ್ರೀಡೆಯ ತವರೂರಲ್ಲಿ ಕ್ರೀಡಾ ಹಾಸ್ಟೆಲ್ಗೆ ಕೊಕ್’ ಎಂಬ ಶೀರ್ಷಿಕೆಯ ಅಡಿಯಲ್ಲಿ ಬಂದ ಲೇಖನವನ್ನು ಗಮನಿಸಿದ್ದೇನೆ. ಕೂಡಿಗೆ ಕ್ರೀಡಾ ವಸತಿ ನಿಲಯದಲ್ಲಿ ಹಾಲಿ ನಡೆಯುತ್ತಿದ್ದ ಪದವಿ ಪೂರ್ವ ಕಾಲೇಜನ್ನು ರದ್ದು ಮಾಡುವುದಾಗಿ ಸುತ್ತೋಲೆ ಬಂದದ್ದು ನಿಜ. ಇದರ ಬಗ್ಗೆ ಈಗಾಗಲೇ ಇಲಾಖೆ ಮತ್ತು ಕ್ರೀಡಾ ಸಚಿವರೊಂದಿಗೆ ಜಿಲ್ಲೆಯ ಇಬ್ಬರು ಶಾಸಕರು ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಇದರ ಬಗ್ಗೆ ಇಲಾಖೆಯಲ್ಲಿ ಚರ್ಚಿಸಲಾಗಿ ಪ್ರಸ್ತುತ ನಡೆಯುತ್ತಿರುವ ಪಿಯುಸಿ ತರಗತಿಗಳನ್ನು ಪ್ರಸ್ತುತ ವರ್ಷದಿಂದಲೇ ಮುಂದುವರಿಸುವAತೆ ತೀರ್ಮಾನಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.