ಮಡಿಕೇರಿ, ಜು. ೧: ಮಡಿಕೇರಿ ನಾಯರ್ ಸೊಸೈಟಿಯ ೨೦೨೫-೨೬ ನೇ ಸಾಲಿನ ವಾರ್ಷಿಕ ಮಹಾಸಭೆ ಮಡಿಕೇರಿಯ ಲಕ್ಷಿö್ಮÃ ನರಸಿಂಹ ಕಲ್ಯಾಣ ಮಂಟಪ ದಲ್ಲಿ ನಡೆಯಿತು. ಸಭೆಗೆ ವೀಕ್ಷಕರಾಗಿ ಸುಳ್ಯ ನಾಯರ್ ಸೊಸೈಟಿಯ ಭಾಸ್ಕರ ನಾಯರ್ ಮತ್ತು ಶಶಿಧರ ನಾಯರ್ ಭಾಗವಹಿಸಿದ್ದರು. ಕಳೆದ ವರ್ಷದ ವಾರ್ಷಿಕ ವರದಿ ಮತ್ತು ಲೆಕ್ಕಪತ್ರವನ್ನು ಮಂಡಿಸಿ ಅನುಮೋದಿಸಲಾಯಿತು. ಮುಂದಿನ ಸಾಲಿನ ಅಧ್ಯಕ್ಷರಾಗಿ ಕೆ.ಕೆ. ಹರೀಶ್ ಕುಮಾರ್, ಉಪಾಧ್ಯಕ್ಷರಾಗಿ ಸುಕುಮಾರನ್ ನಾಯರ್, ಕಾರ್ಯದರ್ಶಿಯಾಗಿ ಪ್ರೀಜಿತಾ ಶ್ರೀಧರ್, ಖಜಾಂಚಿಯಾಗಿ ಉತ್ತಮನ್ ನಾಯರ್ ಹಾಗೂ ತಂಡವನ್ನು ಆಯ್ಕೆ ಮಾಡಲಾಯಿತು. ಶ್ರೀದೇವಿ ಮಹಿಳಾ ವಿಭಾಗದ ಅಧ್ಯಕ್ಷರಾಗಿ ಶೈಲಾ ನಾಯರ್, ಉಪಾಧ್ಯಕ್ಷರಾಗಿ ಸ್ರಿಲಾ ಮಹೇಶ್, ಕಾರ್ಯದರ್ಶಿಯಾಗಿ ದೀಪ ಉದಯಕುಮಾರ್ ಹಾಗೂ ಖಜಾಂಚಿಯಾಗಿ ರಾಧಾ ಮನೋಜ್ ಆಯ್ಕೆಯಾದರು. ಈ ವರ್ಷದ ಓಣಂ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಭ್ರಮದಿAದ ಆಚರಿಸುವಂತೆ ನಿರ್ಧರಿಸಲಾಯಿತು.