ವೀರಾಜಪೇಟೆ, ಜು. ೧ : ಕರಾಟೆ ಡೊ ಗೋಜುಕನ್ ಅಸೋಸಿಯೇಷನ್ ಆಯೋಜಿಸಿದ್ದ ಮುಕ್ತ ರಾಷ್ಟಿçÃಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ವೀರಾಜಪೇಟೆಯ ಆರ್ಜಿ ಗ್ರಾಮದ ಪೆರುಂಬಾಡಿಯ ಜೆನ್ ಶಿಟೋರಿಯೋ ಸ್ಕೂಲ್ ಆಫ್ ಇಂಡಿಯಾ ಕರಾಟೆ ಶಾಲೆಯ ವಿದ್ಯಾರ್ಥಿಗಳು ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾರೆ.
ಕರಾಟೆ ಡೊ ಗೋಜುಕನ್ ಅಸೋಸಿಯೇಷನ್ ವತಿಯಿಂದ "ಗೋಜು ವಾರಿಯರ್ಸ್ ಕಪ್ ೨೦೨೬" ಮುಕ್ತ ರಾಷ್ಟಿçÃಯ ಕರಾಟೆ ಚಾಂಪಿಯನ್‌ಶಿಪ್ ಮೈಸೂರಿನ ಸಿದ್ದಾರ್ಥನಗರದ ಟೆರೇಶಿಯನ್ ಕಾಲೇಜು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು.
ಬಾಲಕರ ಕುಮಿತೆ ವಿಭಾಗದಲ್ಲಿ ಕಾರ್ತಿಕ್ ಕೆ.ಹೆಚ್. ಪ್ರಥಮ ಸ್ಥಾನಗಳಿಸಿ ಚಿನ್ನದ ಪದಕ ಹಾಗೂ ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
ಸೊಧಾನ್ ಕುಮಿತೆಯಲ್ಲಿ ಬೆಳ್ಳಿ, ಕಟಾದಲ್ಲಿ ಕಂಚಿನ ಪದಕ ಗಳಿಸಿದ್ದಾರೆ. ಲಕ್ಸೀಶ್ ಬಿ.ಎನ್. ಕುಮಿತೆಯಲ್ಲಿ ಹಾಗೂ ಕಟಾ ವಿಭಾಗದಲ್ಲಿ ಬೆಳ್ಳಿ ಪದಕ, ದವನ್ ಬಿ.ವಿ. ಕುಮಿತೆಯಲ್ಲಿ ಕಂಚು, ಕಟಾದಲ್ಲಿ ಕಂಚು ಪಡೆದಿದ್ದಾರೆ.
ಗಿಲನ್ ಬಿ.ಬಿ. ಕುಮಿತೆ ಹಾಗೂ ಕಟಾದಲ್ಲಿ ಕಂಚು, ಆದರ್ಶ ಕೆ.ಬಿ. ಕುಮಿತೆಯಲ್ಲಿ ಬೆಳ್ಳಿ, ಕಟಾದಲ್ಲಿ ಕಂಚು, ಕೃತಿಕ್ ಎಂ. ಕಟಾದಲ್ಲಿ ಬೆಳ್ಳಿ, ಡ್ಯಾನಿಶ್ ಕುಮಿತೆಯಲ್ಲಿ ಕಂಚು, ಕಟಾದಲ್ಲಿ ಬೆಳ್ಳಿ, ಸಮಿತ್ ಪಿ.ಬಿ. ಕುಮಿತೆಯಲ್ಲಿ ಬೆಳ್ಳಿ, ಕಟಾದಲ್ಲಿ ಬೆಳ್ಳಿ, ಆದಿ ದೇವು ಎನ್.ಎ. ಕಟಾದಲ್ಲಿ ಕಂಚು, ಕೃಶಾಂಕ್ ಎಂ.ಎನ್. ಕುಮಿತೆಯಲ್ಲಿ ಕಂಚು, ಕಟಾದಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
ಬಾಲಕಿಯರ ಕುಮಿತೆ ವಿಭಾಗದಲ್ಲಿ ಧನುಶ್ರೀ ಬೆಳ್ಳಿ ಪದಕ, ಕಟಾ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಗಾನವಿ ಎನ್.ಎಲ್. ಕುಮಿತೆಯಲ್ಲಿ ಚಿನ್ನದ ಪದಕ, ಕಟಾದಲ್ಲಿ ಬೆಳ್ಳಿ, ಬಿಂದ್ಯಾಯ ಪಿ.ಬಿ. ಕುಮಿತೆಯಲ್ಲಿ ಬೆಳ್ಳಿ, ಕಟಾದಲ್ಲಿ ಬೆಳ್ಳಿ ಪದಕ, ಸಾನವಿ ಪಿ.ಬಿ. ಕುಮಿತೆಯಲ್ಲಿ ಬೆಳ್ಳಿ ಪದಕ, ಕಟಾ ಕಂಚು, ಚೈತನ್ಯ ಅವರು ಕಟಾದಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದಾರೆ. ಇವರಿಗೆ ಸೆನ್ಸಾಯಿ ಶಿವಪ್ಪ ಅವರು ತರಬೇತಿ ನೀಡಿದ್ದಾರೆ.