ಮಡಿಕೇರಿ, ಜೂ. ೩೦: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಮಳೆಯ ಅಂಕಿಅAಶಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಭಾರೀ ಬದಲಾವಣೆ ಕಂಡುಬAದಿದೆ. ಇದೀಗ ಜೂನ್ ತಿಂಗಳು ಪೂರ್ಣಗೊಂಡರೂ ಮುಂಗಾರು ಮಳೆಯೂ ಕೈಕೊಟ್ಟಂತಿದೆ. ಬೇಸಿಗೆ ಅವಧಿಯಲ್ಲಿ ಒಂದಷ್ಟು ಮಳೆ ಸೇರಿದಂತೆ ವಾಡಿಕೆಯಂತೆ ಮುಂಗಾರು ಆರಂಭವಾಗುವ ಜೂನ್ ತಿಂಗಳ ಮಳೆ ಸೇರಿ ಈ ತನಕ ಜಿಲ್ಲೆಯಲ್ಲಿ ಕೇವಲ ೧೨.೯೮ ಇಂಚುಗಳಷ್ಟು ಸರಾಸರಿ ಮಳೆ ಮಾತ್ರ ಸುರಿದಿದೆ.
ಕಳೆದ ವರ್ಷ ಜನವರಿಯಿಂದ ಈ ತನಕದ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ ೫೬.೩೩ ಇಂಚು ಮಳೆಯಾಗಿದ್ದು, ಈ ವರ್ಷ ೪೩.೩೫ ಇಂಚುಗಳಷ್ಟು ಕಡಿಮೆಯಾಗಿದೆ. ಜೂನ್ ತಿಂಗಳು ಪೂರ್ಣಗೊಂಡರೂ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಇನ್ನೂ ಆರಂಭಗೊAಡAತಿಲ್ಲ. ಎಲ್ಲವೂ ಸಹಜವಾಗಿದ್ದರೆ ಈಗಾಗಲೇ ಬಹುತೇಕ ಕಡೆಗಳಲ್ಲಿ ಸಸಿಮಡಿಯ ತಯಾರಿಗೆ ಬಿತ್ತನೆ ಕಾರ್ಯ ನಡೆದಿರುತ್ತಿತ್ತು. ಆದರೆ, ಪ್ರಸ್ತುತ ಗದ್ದೆ ಉಳುಮೆ ಮಾಡಿರುವ ರೈತರು ಮಳೆಗಾಗಿ ಕಾಯುವಂತಾಗಿದೆ.
ಕೇವಲ ಸಣ್ಣಪ್ರಮಾಣದಲ್ಲಿ ಮಾತ್ರ ಆಗಾಗ್ಗೆ ಮಳೆಯಾಗುತ್ತಿದ್ದು, ಮಲೆನಾಡು ಪ್ರದೇಶದ ನೈಜ ಮುಂಗಾರಿನ ಚಿತ್ರಣದ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲ. ಮೋಡ ಕವಿದ ವಾತಾವರಣ ಎದುರಾಗುತ್ತಿದೆಯಾದರೂ ನಡು-ನಡುವೆ ಬಿಸಿಲಿನ ಸನ್ನಿವೇಶವೂ ಈ ಬಾರಿಯ ವಿದ್ಯಮಾನವಾಗಿದ್ದು, ನಿರೀಕ್ಷಿತ ಮಳೆಯಾಗದಿದ್ದರೆ ಮುಂದಿನ ದಿನಗಳಲ್ಲಿ ಆತಂಕದ ಪರಿಸ್ಥಿತಿ ಖಚಿತ ಎನ್ನುವಂತಾಗಿದೆ.
ಮಡಿಕೇರಿ ತಾಲೂಕಿನಲ್ಲಿ ೬೦.೭೮ ಇಂಚು ಕಡಿಮೆ
ಮಡಿಕೇರಿ ತಾಲೂಕಿನಲ್ಲಿ ಪ್ರಸಕ್ತ ವರ್ಷ ೬೦.೭೮ ಇಂಚುಗಳಷ್ಟು ಕಡಿಮೆ ಮಳೆಯಾಗಿದೆ. ೨೦೨೫ರಲ್ಲಿ ಜನವರಿಯಿಂದ ಈ ತನಕದ ಅವಧಿಯಲ್ಲಿ ತಾಲೂಕಿನಲ್ಲಿ ಬರೋಬರಿ ೮೦.೮೬ ಇಂಚುಗಳಷ್ಟು ಮಳೆಬಿದ್ದಿತ್ತು. ಆದರೆ, ಈ ಬಾರಿ ಕೇವಲ ೨೦.೦೮ ಇಂಚು ಮಾತ್ರ ಮಳೆಯಾಗಿದೆ.
ವೀರಾಜಪೇಟೆ ತಾಲೂಕಿನಲ್ಲೂ ೪೦.೬೭ ಇಂಚು ಕಡಿಮೆ ಮಳೆ ದಾಖಲಾಗಿದೆ. ಕಳೆದ ವರ್ಷ ಜನವರಿಯಿಂದ ಜೂನ್ ಅಂತ್ಯಕ್ಕೆ ೫೬.೪೨ ಇಂಚು ಮಳೆಯಾಗಿದ್ದು, ಈ ಬಾರಿ ೧೫.೭೫ ಇಂಚು ಮಳೆ ಕಂಡುಬAದಿದೆ.
ಪ್ರಸಕ್ತ ವರ್ಷ ಪೊನ್ನಂಪೇಟೆ ತಾಲೂಕಿನಲ್ಲಿ ೪೪.೧೮ ಇಂಚು, ಸೋಮವಾರಪೇಟೆ ೪೮ ಇಂಚು ಹಾಗೂ ಕುಶಾಲನಗರ ತಾಲೂಕಿನಲ್ಲಿ ೨೩.೧೬ ಇಂಚು ಕಡಿಮೆ ಮಳೆಯಾಗಿದೆ. ಕಳೆದ ವರ್ಷ ಅವಧಿಯಲ್ಲಿ ಪೊನ್ನಂಪೇಟೆ ತಾಲೂಕಿನಲ್ಲಿ ೫೫.೪೩, ಸೋಮವಾರಪೇಟೆ ೫೮.೪೯, ಕುಶಾಲನಗರದಲ್ಲಿ ೩೦.೪೭ ಇಂಚು ಮಳೆಯಾಗಿತ್ತು.
ಪ್ರಸಕ್ತ ವರ್ಷ ಪೊನ್ನಂಪೇಟೆ ತಾಲೂಕಿನಲ್ಲಿ ೧೧.೨೫, ಸೋಮವಾರಪೇಟೆ ೧೦.೪೯ ಹಾಗೂ ಕುಶಾಲನಗರ ತಾಲೂಕಿನಲ್ಲಿ ೭.೩೧ ಇಂಚುಗಳಷ್ಟು ಮಾತ್ರ ಮಳೆ ದಾಖಲಾಗಿದೆ. ಭಾನುವಾರ ಹಾಗೂ ಸೋಮವಾರದಂದು ಜಿಲ್ಲೆಯಲ್ಲಿ ವಾತಾವರಣದಲ್ಲಿ ಬದಲಾವಣೆ ಕಂಡುಬAದು ಒಂದಷ್ಟು ಮಳೆಯಾಗಿ ಆಶಾಭಾವನೆ ಮೂಡಿತ್ತು.