ಕುಶಾಲನಗರ, ಜೂ. ೩೦: ಹಿಂದೂ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಬಲವಂತದ ಮತಾಂತರ ಪ್ರಕರಣ ಖಂಡಿಸಿ ಹಿಂದೂ ಸುರಕ್ಷಾ ಸಮಿತಿ ವತಿಯಿಂದ ಕುಶಾಲನಗರದಲ್ಲಿ ಬೃಹತ್ ಜನಾಂದೋಲನ ಜಾಗೃತಿ ಜಾಥಾ ನಡೆಯಿತು.
ಕುಶಾಲನಗರದ ವಿವಿಧ ಸಂಘ ಸಂಸ್ಥೆಗಳು, ವಿವಿಧ ಸಮುದಾಯ ಬಾಂಧವರು ಜಾಥಾದಲ್ಲಿ ಪಾಲ್ಗೊಂಡು ಧರ್ಮ ರಕ್ಷಣೆ ಕಹಳೆ ಮೊಳಗಿಸಿದರು. ಬೆಳಿಗ್ಗೆ ೧೧ ಗಂಟೆಗೆ ಆರಂಭಗೊAಡ ಜಾಥಾ ಮುಖ್ಯ ರಸ್ತೆಯಲ್ಲಿ ಸಾಗಿ ಕುಶಾಲನಗರ ಪಟ್ಟಣದ ಗಣಪತಿ ದೇವಾಲಯ ಬಳಿ ಸೇರಿ ನಂತರ ಪಟ್ಟಣದ ಕಾರು ನಿಲ್ದಾಣ ಆವರಣದಲ್ಲಿ ಬೃಹತ್ ಸಭೆ ನಡೆಯಿತು.
ಸ್ಥಳೀಯರು ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಹಿಂದೂ ಕಾರ್ಯಕರ್ತರು ಬೃಹತ್ ಪ್ರತಿಭಟನಾ ಜಾಥಾದಲ್ಲಿ ಪ್ರಕರಣದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದರು.
ಕುಶಾಲನಗರ ಕಾವೇರಿ ನಿಸರ್ಗಧಾಮ ಮುಂಭಾಗದಿAದ ಕೇಸರಿ ಧ್ವಜ ಹಿಡಿದು ಶಲ್ಯ ಧರಿಸಿ ಧರ್ಮ ಪರ ಘೋಷಣೆಗಳೊಂದಿಗೆ ಹೆದ್ದಾರಿಯಲ್ಲಿ ಜಾಗೃತಿ ಜಾಥಾ ಸಾಗಿ ಬಂತು. ಭಾರತಾಂಭೆಯ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮತ್ತಿತರರು ಚಾಲನೆ ನೀಡಿದರು.
ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರ ಒಳಗೊಂಡ ೩ ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡಿದ್ದ ಜಾಥಾದಲ್ಲಿ ಕಾರ್ಯಕರ್ತರು ಜೈ ಶ್ರೀರಾಮ್ ಘೋಷಣೆಗಳೊಂದಿಗೆ ಮತಾಂತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೊಡಗಿನ ಮಾಜಿ ಶಾಸಕದ್ವಯರಾದ ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ ಮತ್ತಿತರ ಮುಖಂಡರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
ನಿಸರ್ಗಧಾಮ ಟೂರಿಸ್ಟ್ ಸೆಂಟರ್ ಬಂದ್ ಮಾಡಿ ಕೇಂದ್ರದ ಮಾಲೀಕರು, ವರ್ತಕರು, ಸಿಬ್ಬಂದಿಗಳು ಕೇಸರಿ ಶಲ್ಯ ಧರಿಸಿ ಜಾಥಾದಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು.
ಜಾಥಾ ಹಿನ್ನೆಲೆಯಲ್ಲಿ ಕುಶಾಲನಗರ ಪಟ್ಟಣದ ವರ್ತಕರು ಸ್ವಯಂಪ್ರೇರಣೆಯಿAದ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಿ ಬೆಂಬಲ ಸೂಚಿಸಿದ್ದರು. ಔಷಧಿ ಅಂಗಡಿಗಳು, ಹಣ್ಣಿನ ಅಂಗಡಿಗಳು ಎಂದಿನAತೆ ಕಾರ್ಯ ನಿರ್ವಹಿಸಿದವು. ವಾಹನ ಸಂಚಾರ ಯಾವುದೇ ತೊಡಕಿಲ್ಲದೆ ಸಾಗಿದವು. ಬೆರಳೆಣಿಕೆಯ ಅಂಗಡಿಗಳು ತೆರೆದು ವಹಿವಾಟು ನಡೆಸಿದ ದೃಶ್ಯಗಳು ಗೋಚರಿಸಿದವು. ಪ್ರಮುಖ ವಾಣಿಜ್ಯ ಬೀದಿ ರಥಬೀದಿ ರಸ್ತೆಯಲ್ಲಿ ವ್ಯಾಪಾರಿಗಳು ಸ್ವಯಂ ಪ್ರೇರಿತವಾಗಿ ಸಂಪೂರ್ಣ ಅಂಗಡಿಗಳು ಬಂದ್ ಮಾಡುವ ಮೂಲಕ ಬೆಂಬಲ ಸೂಚಿಸಿದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಂಡಿತ್ತು. ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿತ್ತು. ಇಬ್ಬರು ಡಿವೈಎಸ್ಪಿ, ೫ ಮಂದಿ ಇನ್ಸ್ಪೆಕ್ಟರ್, ೧೦ ಎಸ್.ಐ ಒಳಗೊಂಡAತೆ ೧೫೦ಕ್ಕೂ ಅಧಿಕ ಮಂದಿಯ ಪೊಲೀಸ್ ಸಿಬ್ಬಂದಿಗಳ ಪಡೆ ತೀವ್ರ ನಿಗಾ ವಹಿಸಿತ್ತು.
ಸಭಾ ಕಾರ್ಯಕ್ರಮ : ಕಾರು ನಿಲ್ದಾಣದ ವೇದಿಕೆಯಲ್ಲಿ ನಡೆದ ಜನಾಂದೋಲನ ಜಾಗೃತಿ ಸಭೆಯಲ್ಲಿ ಪಾಲ್ಗೊಂಡ ಹಿಂದೂ ಜಾಗರಣ ವೇದಿಕೆ ದಕ್ಷಿಣ ಕರ್ನಾಟಕ ಪ್ರಾಂತ ಸಹ ಸಂಚಾಲಕ ಸತೀಶ್ ದಾವಣಗೆರೆ ದಿಕ್ಸೂಚಿ ಭಾಷಣ ಮಾಡಿದರು. ಜಾತಿ, ಮತ, ಪಕ್ಷ, ಪ್ರಾಂತ ಬೇಧ ಮರೆತು ಹಿಂದೂಗಳು ಒಂದಾದರೆ ಮಾತ್ರ ಮತಾಂತರಕ್ಕೆ ಕಡಿವಾಣ ಹಾಕಬಹುದು ಎಂದರು.
ಹಿAದೂ ಸಮಾಜ ಉಳಿದಿರುವುದೇ ಮಹಿಳೆಯರಿಂದ. ಪ್ರತಿ ಕುಟುಂಬದ ಹೆಣ್ಣು ಮಕ್ಕಳ ಬಗ್ಗೆ ಪೋಷಕರು ಜಾಗೃತಿ ವಹಿಸಬೇಕು. ಮಕ್ಕಳಿಗೆ ಭಗವದ್ಗೀತೆ, ರಾಮಾಯಣ, ದೇಶದ ಹಿರಿಮೆ ಹೇಳುವ ಕತೆ ಹೇಳಬೇಕು. ೧೯೯೫ರಲ್ಲೇ ಕೊಡಗು ಜಿಲ್ಲೆಯಲ್ಲಿ ಲವ್ ಜಿಹಾದ್ ಶುರುವಾಗಿದೆ. ವೀರ ಸೇನಾನಿಗಳ ನಾಡಿನಲ್ಲಿ ಇಂತಹ ಹುನ್ನಾರ ಹೇಗೆ ಶುರುವಾಯಿತು ಎನ್ನುವುದನ್ನು ಚಿಂತಿಸಬೇಕು. ಲವ್ ಜಿಹಾದ್ ಹಿಂದೂ ಸಮಾಜಕ್ಕೆ ಆತಂಕಕಾರಿ ಬೆಳವಣಿಗೆಯಾಗಿದೆ. ನಾವೆಲ್ಲರೂ ಹಿಂದೂ, ನಾವೆಲ್ಲಾ ಒಂದು, ನಾವೆಲ್ಲಾ ಬಂಧು ಎಂಬ ಮನೋಭಾವ ಎಲ್ಲರಿಗೂ ಬರಬೇಕು ಎಂದರು. ರಾಜಕಾರಣಿಗಳು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ತುಷ್ಟೀಕರಣ ಮಾಡಬಾರದು ಎಂದು ಸಲಹೆ ನೀಡಿದರು.
ಪ್ರೀತಿ, ಪ್ರೇಮಕ್ಕೆ ಜಾತಿ ಇಲ್ಲ ಎನ್ನುತ್ತಾರೆ. ಹಿಂಸೆ ನೀಡಿ ಮಹಿಳೆಗೆ ತಲಾಕ್ ನೀಡಿದಾಗ ರಾಜಕೀಯ ಪ್ರಮುಖರು ಮೌನ ವಹಿಸುತ್ತಿದ್ದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.
ಹಿಂದೂ ಹೆಣ್ಣು ಮಕ್ಕಳನ್ನು ಮದುವೆ ಆಗುವ ಷಡ್ಯಂತ್ರ ನಿರಂತರವಾಗಿ ಸಾಗುತ್ತಿದೆ ಎಂದ ಅವರು ತಾಯಿ ಭಾರತಿ ವಿಶ್ವಗುರು ಆಗಬೇಕು. ಭಾರತೀಯರು ಮುಸ್ಲಿಂ ವಿರೋಧಿಗಳಲ್ಲ. ಎಲ್ಲಾ ಮುಸ್ಲಿಂ, ಕ್ರಿಶ್ಚಿಯನ್ನರು ಕೆಟ್ಟವರಲ್ಲ. ವಂದೇ ಮಾತರಂ, ರಾಷ್ಟ್ರಗೀತೆಗೆ ಗೌರವ ಕೊಡದವರು ಮಾತ್ರ ರಾಷ್ಟçದೋಹಿಗಳಂತೆ ಭಾಸವಾಗುತ್ತಿದ್ದಾರೆ. ನಮ್ಮ ವೀರ ರಕ್ತದ ಪರಿಚಯ ಇರುವವರು ಮತಾಂತರ ಆಗುವುದಿಲ್ಲ. ಧರ್ಮದ ಮೇಲೆ ನಿಷ್ಠೆ ಹೊಂದಬೇಕು ಎಂದರು.
ಜನಾಂದೋಲನ ಸಭೆಯ ಅಧ್ಯಕ್ಷತೆ ವಹಿಸಿದ್ದ ಹಿಂದೂ ಸುರಕ್ಷಾ ಸಮಿತಿ ಸಂಚಾಲಕ ಬಿ.ಅಮೃತ ರಾಜ್ ಮಾತನಾಡಿ, ಮತಾಂತರದ ವಿರುದ್ಧ ಜಾಗೃತಿ ಜಾಥಾ ಯಾವುದೇ ಒಂದು ವರ್ಗದ ವಿರುದ್ದ ಅಲ್ಲ. ಈ ಪಿಡುಗಿಗೆ ಬಡವರು, ಶ್ರೀಮಂತರು ಬಲಿಯಾಗುತ್ತಿದ್ದಾರೆ. ದೇಶದ ವಿವಿಧೆಡೆ ನಡೆಯುತ್ತಿದ್ದ ಮತಾಂತರ ಪ್ರಕರಣ ಇದೀಗ ಕೊಡಗು ಜಿಲ್ಲೆಗೂ ಕಾಲಿಟ್ಟಿದೆ. ಭಾರತೀಯರು ಸಂವೇದನಾಶೀಲರು. ಹಾಗಾಗಿ ಮತಾಂತರ ಪ್ರಕರಣಗಳು ಹೆಚ್ಚು ಹೊರಗೆ ಬರುತ್ತಿಲ್ಲ. ಕುಶಾಲನಗರದ ಕಾಲೇಜುಗಳು, ವಾಣಿಜ್ಯ ಕೇಂದ್ರಗಳಲ್ಲಿ ಈ ರೀತಿಯ ಪ್ರಕರಣಗಳು ಸದ್ದಿಲ್ಲದೆ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ನಿರಂತರವಾಗಿ ನಡೆಯುತ್ತಿವೆ. ಇದರ ವಿರುದ್ದ ಹೋರಾಟ ಮುಂದುವರಿಸಿ ಸಮಾಜದಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದರು. ಇದು ಪ್ರಥಮ ಹೆಜ್ಜೆಯಾಗಿದ್ದು ಮುಂದಿನ ದಿನಗಳಲ್ಲಿ ಜಿಲ್ಲೆ, ರಾಜ್ಯ ಮಟ್ಟದಲ್ಲಿ ಈ ಬಗ್ಗೆ ಪ್ರತಿಭಟನೆಗಳು ಮುಂದುವರಿಯಲಿವೆ ಎಂದರು.
ಹಿAದೂ ಜಾಗರಣ ವೇದಿಕೆಯ ಮುಖಂಡ ಭರತ್ ಮಾಚಯ್ಯ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಅಜಿತ್ ಕುಕ್ಕೇರ ಮಾತನಾಡಿದರು. ಜನಾಂದೋಲನ ಸಹ ಸಂಚಾಲಕ ಚಿಲ್ಲನ ಗಣಿಪ್ರಸಾದ್, ವಸಂತ ರೈ, ಚಂದ್ರಶೇಖರ್ ಹೇರೂರು, ಜ್ಯೋತಿ ಕುದುಪಜೆ, ವಿ.ಹೆಚ್. ಪ್ರಶಾಂತ್ ಮತ್ತಿತರರು ವೇದಿಕೆಯಲ್ಲಿದ್ದರು.