ವೀರಾಜಪೇಟೆ, ಜೂ. ೩೦: ವೀರಾಜಪೇಟೆ ಸಮೀಪದ ಅರಮೇರಿ ಗ್ರಾಮದಲ್ಲಿ ಗಣಿಗಾರಿಕೆ ನಡೆಯುತ್ತಿರುವ ಸಂಬAಧ ಗ್ರಾಮಸ್ಥರ ದೂರಿನಂತೆ ಕಂದಾಯ ಇಲಾಖೆ ಅಧಿಕಾರಿ ಹರೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಗಣಿಗಾರಿಕೆ ನಡೆಸದಂತೆ ಸೂಚನೆ ನೀಡಿದ್ದಾರೆ.
ಶಾಸಕರ ಸೂಚನೆ ಹಾಗೂ ನಂತರದಲ್ಲಿ ಪತ್ರಿಕೆಯಲ್ಲಿ ಈ ಕುರಿತು ವರದಿಗಳೂ ಬಂದ ಬಳಿಕ ಏ ೧೭ ರಂದು ಗಣಿಗಾರಿಕೆ ಸ್ಥಗಿತವಾಗಿತ್ತು. ಆದರೆ ಪರವಾನಿಗೆದಾರ ವೇಣುಗೋಪಾಲ್ ಕಡೆಯವರು ಮತ್ತೆ ಕೆಲವು ದಿನಗಳಿಂದ ಗಣಿಗಾರಿಕೆ ಆರಂಭಿಸಿದ್ದರು.
ಈ ಕುರಿತು ಅರಮೇರಿ ಮತ್ತು ನೆರೆಯ ಕಡಂಗಮರೂರು ಗ್ರಾಮಸ್ಥರು ವೀರಾಜಪೇಟೆ ತಾಲೂಕು ತಹಶೀಲ್ದಾರ್ ಗಮನಕ್ಕೆ ತಂದ ಬಳಿಕ ಕಂದಾಯ ಪರಿವೀಕ್ಷಕ ಹರೀಶ್ ಅವರನ್ನು ಸ್ಥಳಕ್ಕೆ ಕಳುಹಿಸಿದ್ದರು. ಅವರು ಪರಿಶೀಲನೆ ನಡೆಸಿ ಸದ್ಯಕ್ಕೆ ಗಣಿಗಾರಿಕೆ ನಿಲ್ಲಿಸುವಂತೆ ಸೂಚಿಸಿದ್ದು ಈ ವಾರದಲ್ಲಿ ಗ್ರಾಮಸ್ಥರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ, ತಹಶೀಲ್ದಾರ್, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮತ್ತಿತರರ ಸಭೆ ಕರೆದು ಪರಿಹಾರ ಕಂಡುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಜಾಗದ ಮಾಲೀಕ ಹಾಗೂ ಇತ್ತೀಚೆಗೆ ಸ್ಥಳದಲ್ಲಿ ಗಣಿಗಾರಿಕೆ ನಡೆಸುತ್ತಿದ್ದವರು ಗ್ರಾಮಸ್ಥರು ಸ್ಥಳಕ್ಕೆ ಪ್ರವೇಶ ಮಾಡಿದನ್ನು ಆಕ್ಷೇಪಿಸಿ ಗ್ರಾಮಸ್ಥರು ಹಾಗೂ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. ಜೊತೆಗೆ ಗ್ರಾಮಸ್ಥರು, ಅಧಿಕಾರಿಗಳಿಗೂ ಸ್ಥಳದಲ್ಲಿ ದಿಗ್ಬಂಧನ ಹಾಕಿದರು. ಗ್ರಾಮಸ್ಥರು ನಾವು ಅಧಿಕಾರಿಗಳ ಜೊತೆ ಸ್ಥಳಕ್ಕೆ ಬಂದಿರುವುದಾಗಿ ಹೇಳಿದರಲ್ಲದೆ ಇಲ್ಲಿ ನಾವು ಜಲ, ಪರಿಸರ, ಕೃಷಿ ಭೂಮಿ, ಮನೆಯನ್ನು ಉಳಿಸಲು ಹೋರಾಟ ನಡೆಸುತ್ತಿದ್ದೇವೆ. ಗಣಿಗಾರಿಕೆಯಿಂದ ಎರಡು ಗ್ರಾಮಕ್ಕೆ ತೊಂದರೆ ನಿಶ್ಚಿತ. ಹಾಗಾಗಿ ಗ್ರಾಮಸ್ಥರ ಭಾವನೆಯನ್ನು ಅರ್ಥಮಾಡಿಕೊಂಡು ಸಹಕರಿಸಿ. ಈ ಹಿಂದೆ ಗಣಿಗಾರಿಕೆ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ನಿಂತು ಅನೇಕ ವರ್ಷಗಳು ಕಳೆದ ಬಳಿಕ ಇದನ್ನು ಮತ್ತೆ ಜೀವಂತಗೊಳಿಸುವ ಅಗತ್ಯ ಇಲ್ಲ ಎಂದರು.
ಈ ಕುರಿತು ಗ್ರಾಮಸ್ಥರ ಪರವಾಗಿ ಮಾತನಾಡಿದ ಕೋದಂಡ ಮಂಜುಳ ಅಯ್ಯಪ್ಪ ಅವರು, ಗಣಿಗಾರಿಕೆ ವಿಚಾರದಲ್ಲಿ ಉಭಯ ಗ್ರಾಮಸ್ಥರು ೨೦೨೨ ರಿಂದ ಹೋರಾಟ ನಡೆಸುತ್ತಾ ಬಂದಿದ್ದು, ೨೦೨೪ರಲ್ಲಿ ತಹಶೀಲ್ದಾರ್‌ಗೆ ನೀಡಿದ ದೂರಿನಂತೆ ಅವರು ಸ್ಥಳಕ್ಕೆ ಬಂದು ಪರಿಶೀಲಿಸಿ ಗ್ರಾಮಸ್ಥರ ಅಹವಾಲು ಆಲಿಸಿದ್ದಾರೆ. ಆದರೆ ಅಲ್ಲಿಯೂ ವಸತಿ ಪ್ರದೇಶದಲ್ಲಿ ಕೃಷಿ ಪ್ರದೇಶದ ವ್ಯಾಪಕ ಸರ್ವೆ ಆಗಿಲ್ಲ. ನಂತರ ಜಿಲ್ಲಾಧಿಕಾರಿ ಆದೇಶ ನೀಡಿದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಇಂದಿನವರೆಗೆ ಗ್ರಾಮಸ್ಥರ ಸಭೆ ಕರೆದು ಚರ್ಚಿಸಿಲ್ಲ. ಇಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸಂಪೂರ್ಣವಾಗಿ ಎಲ್ಲಾ ನಿಯಮವನ್ನು ಗಾಳಿಗೆತೂರಿ ಪಶ್ಚಿಮಘಟ್ಟಕ್ಕೆ ಸನಿಹವಾಗಿದ್ದರೂ ಅರಮೇರಿ ಗ್ರಾಮದ ಸರ್ವೆ ಸಂ ೩೪೩ ರ ೪.೫೦ ಎಕರೆಯಲ್ಲಿ ಗಣಿಗಾರಿಕೆಗೆ ಏ. ೨ ರಂದು ವೇಣುಗೋಪಾಲ್ ಅವರಿಗೆ ಪರವಾನಿಗೆ ನೀಡಿದ್ದಾರೆ. ಇಲ್ಲಿ ಪರವಾನಿಗೆಯಂತೆ ಮಾನವ ಶಕ್ತಿ ಬಳಸಿ ಕಲ್ಲು ಒಡೆಯಬೇಕು, ಸ್ಫೋಟ ನಡೆಸದಂತೆ ಸೂಚಿಸಿದರೂ ಭಾರೀ ಸ್ಫೋಟಕವನ್ನು ಬಳಸುತ್ತಿರುವುದು ವಿಪರ್ಯಾಸ ಎಂದರು.
ಈ ಸಂದರ್ಭ ಗ್ರಾಮಸ್ಥರಾದ ಪೂಳಂಡ ಡಾಲು ಪೂಣಚ್ಚ, ಪೂಳಂಡ ಮಾಚಯ್ಯ, ಬಾಚೀರ ಬಿದ್ದಪ್ಪ, ಬಲ್ಲಟಿಕಾಳಂಡ ಮದನ್, ಕಾಂಗೀರ ಸತೀಶ್, ಬಲ್ಯಂಡ ಸದಾ, ಕೋದಂಡ ಸುರ ಅಯ್ಯಪ್ಪ, ಸುನಿಲ್, ನಂದ, ಪದ್ಮನಾಭ ನಾಯ್ಡು, ಬಲ್ಲಚಂಡ ಚಂಗಪ್ಪ, ಕೋದಂಡ ಪೂವಯ್ಯ, ಬಲ್ಲಟಿಕಾಳಂಡ ಮಂಜು ಸುಬ್ಬಯ್ಯ, ಪೂಳಂಡ ತಿಲಕ್ ಮುಂತಾದವರು ಇದ್ದರು.