ಮಡಿಕೇರಿ, ಜೂ. ೩೦: ೩೩/೧೧ ಕೆ.ವಿ. ಮೂರ್ನಾಡು ವಿದ್ಯುತ್ ವಿತರಣಾ ಉಪಕೇಂದ್ರದ ಕೇಂದ್ರದಿAದ ಹೊರಹೊಮ್ಮುವ ಎಫ್೩ ಮೂರ್ನಾಡು ಫೀಡರ್‌ನಲ್ಲಿ ತಾ. ೧ ರಂದು (ಇಂದು) ಬೆಳಿಗ್ಗೆ ೧೦ ರಿಂದ ಸಂಜೆ ೫ ಗಂಟೆಯವರೆಗೆ ಕೊಡಗು ವಿದ್ಯುತ್ ಜಾಲ ಬಲವರ್ಧನೆ ಹಾಗೂ ಮಳೆಗಾಲ ಮುಂಜಾಗ್ರತಾ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ ವಿದ್ಯುತ್ ಸರಬರಾಜಾಗುವ ಮೂರ್ನಾಡು ಟೌನ್, ಕಿಗ್ಗಾಲು, ಮುತ್ತಾರ್‌ಮುಡಿ, ಬೇತ್ರಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ಮೇಲೆ ತಿಳಿಸಿರುವ ಸಮಯದಲ್ಲಿ ಹಾಗೂ ಸ್ಥಳದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಪ್ರಕಟಣೆ ಕೋರಿದೆ.