(ವರದಿ : ಉಜ್ವಲ್ ರಂಜಿತ್)
ಮಡಿಕೇರಿ, ಜೂ. ೨೯: ಯಾವುದೇ ಅನರ್ಹ ವ್ಯಕ್ತಿಯನ್ನು ಮತದಾರರ ಪಟ್ಟಿಗೆ ಸೇರಿಸದೆ, ಅರ್ಹ ವ್ಯಕ್ತಿಯನ್ನು ಮತದಾರರ ಪಟ್ಟಿಯಿಂದ ಕೈಬಿಡದಂತೆ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಭಾರತ ಚುನಾವಣಾ ಆಯೋಗ ಹಮ್ಮಿಕೊಂಡಿರುವ ಮತದಾರರ ಪಟ್ಟಿಗಳ ವಿಶೇಷ ಸಮಗ್ರÀ ಪರಿಷ್ಕರಣೆ ಪ್ರಕ್ರಿಯೆಗೆ ಕೊಡಗು ಜಿಲ್ಲಾಡಳಿತ ಸಜ್ಜಾಗಿದೆ.
ಈ ಪ್ರಕ್ರಿಯೆಯ ಭಾಗವಾಗಿ ತಾ. ೩೦ ರಿಂದ (ಇಂದಿನಿAದ) ಜುಲೈ ೨೯ ರವರೆಗೆ ಪ್ರತಿಯೊಂದು ಮನೆಗಳಿಗೂ ಬೂತ್ಮಟ್ಟದ ಅಧಿಕಾರಿಗಳು (ಬಿಎಲ್ಓ) ಭೇಟಿ ನೀಡಿ ಮನೆಯವರಿಂದ ಅಗತ್ಯ ಮಾಹಿತಿಗಳನ್ನು ಪಡೆಯಲಿದ್ದು, ಇದಕ್ಕಾಗಿ ಜಿಲ್ಲೆಯಲ್ಲಿ ೫೫೨ ಮಂದಿ ಬಿಎಲ್ಓಗಳನ್ನು ನೇಮಿಸಲಾಗಿದೆ. ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಮುನಿಸಿಪಾಲಿಟಿ ಹಾಗೂ ಗ್ರಾಮ ಪಂಚಾಯಿತಿ ಹಾಗೂ ವಿವಿಧ ಇಲಾಖೆಯ ಸಿಬ್ಬಂದಿಗಳನ್ನು ಬಿಎಲ್ಓಗಳಾಗಿ ನೇಮಿಸಲಾಗಿದ್ದು, ಅಗತ್ಯ ತರಬೇತಿಯನ್ನು ನೀಡಲಾಗಿದೆ. ೨೦೦೨ರ ಮತದಾರರ ಪಟ್ಟಿಯೊಂದಿಗೆ ೨೦೨೫ರ ಮತದಾರರ ಪಟ್ಟಿಯಲ್ಲಿರುವ ಮತದಾರರನ್ನು ಹೊಂದಾಣಿಕೆ ಮಾಡಿ, ಲಭ್ಯವಿರುವ ಮತದಾರರನ್ನು ಹಾಗೂ ಅವರ ಸಂತತಿಯ ವಿವರಗಳನ್ನು ಜೋಡಣೆ ಮಾಡುವ ಮ್ಯಾಪಿಂಗ್ ಕಾರ್ಯವನ್ನು ಕೂಡ ಈಗಾಗಲೇ ಜಿಲ್ಲಾಡಳಿತ ಕೈಗೊಂಡಿದ್ದು, ಇದರಲ್ಲಿ ಶೇ. ೯೮.೬೮ ರಷ್ಟು ಪ್ರಗತಿ ಸಾಧಿಸಿದೆ; ಮ್ಯಾಪಿಂಗ್ ಕಾರ್ಯ ಮುಂದೆಯೂ ನಡೆಯಲಿದೆ.
ಅಧಿಕಾರಿಗಳಿಗೆ ತರಬೇತಿ
ಮತಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬAಧಿಸಿದAತೆ ಜಿಲ್ಲಾ ಚುನಾವಣಾಧಿಕಾರಿಗಳು, ಅಪರ ಜಿಲ್ಲಾ ಚುನಾವಣಾಧಿಕಾರಿಗಳು, ಮತದಾರರ ನೋಂದಣಾಧಿಕಾರಿಗಳು, ಸಹಾಯಕ ಮತದಾರರ ನೋಂದಣಾಧಿಕಾರಿಗಳು, ಚುನಾವಣಾ ತಹಶೀಲ್ದಾರ್ಗಳು, ಮಾಸ್ಟರ್ಸ್ ತರಬೇತುದಾರರು, ಟೆಕ್ನಿಕಲ್ ಪ್ರೋಗ್ರಾಮರ್ಗಳಿಗೆ ಮುಖ್ಯ ಚುನಾವಣಾಧಿಕಾರಿ ಕಚೇರಿಯಿಂದ ತರಬೇತಿ ನೀಡಲಾಗಿದೆ.
ಜಿಲ್ಲಾ ಚುನಾವಣಾಧಿಕಾರಿಗಳಾಗಿ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್, ಅಪರ ಜಿಲ್ಲಾ ಚುನಾವಣಾಧಿಕಾರಿಗಳಾಗಿ ಎಡಿಸಿ ಸಹನಾ ಹಾದಿಮನಿ ಇವರುಗಳು ಕಾರ್ಯನಿರ್ವಹಿಸಲಿದ್ದಾರೆ. ಮಡಿಕೇರಿ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿಯಾಗಿ ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿಯಾಗಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಆರ್. ಮಂಜುನಾಥ್ ನಿಯುಕ್ತಿಗೊಂಡಿದ್ದಾರೆ. ಮಡಿಕೇರಿ ಕ್ಷೇತ್ರಕ್ಕೆ ಸಹಾಯಕ ಮತದಾರರ ನೋಂದಣಾಧಿಕಾರಿಯಾಗಿ ಮಡಿಕೇರಿ, ಸೋಮವಾರಪೇಟೆ, ಕುಶಾಲನಗರ ತಾಲೂಕುಗಳ ತಹಶೀಲ್ದಾರ್ಗಳು, ವೀರಾಜಪೇಟೆ ಕ್ಷೇತ್ರಕ್ಕೆ ಸಹಾಯಕ ಮತದಾರರ ನೋಂದಣಾಧಿಕಾರಿಗಳಾಗಿ ಮಡಿಕೇರಿ, ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕುಗಳ ತಹಶೀಲ್ದಾರ್ಗಳು ಕಾರ್ಯನಿರ್ವಹಿಸಲಿದ್ದಾರೆ. ಮಡಿಕೇರಿ ಕ್ಷೇತ್ರದಲ್ಲಿ ೨೭೫ ಬಿಎಲ್ಓಗಳಿಗೆ ೩೫ ಮೇಲ್ವಿಚಾರಕರು, ವೀರಾಜಪೇಟೆ ಕ್ಷೇತ್ರದಲ್ಲಿ ೨೭೭ ಬಿಎಲ್ಓಗಳಿಗೆ ೬೧ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಬಿಎಲ್ಓಗಳಿಗೆ ಹಾಗೂ ಬಿಎಲ್ಓಗಳ ಮೇಲ್ವಿಚಾರಕರಿಗೂ ತರಬೇತಿ ನೀಡಲಾಗಿದೆ.
ಮನೆ ಮನೆಗೆ ಭೇಟಿ
ಬೂತ್ಮಟ್ಟದ ಅಧಿಕಾರಿಗಳು ತಾ. ೩೦ ರಿಂದ (ಇಂದಿನಿAದ) ಪ್ರತಿಯೊಂದು ಮನೆಗಳಿಗೆ ಭೇಟಿ ನೀಡಲಿದ್ದಾರೆ. ಮನೆಯವರಿಗೆ ಗಣತಿ ನಮೂನೆಯನ್ನು ನೀಡಿ ಅದನ್ನು ಭರ್ತಿ ಮಾಡಲು ಮಾರ್ಗದರ್ಶನ ನೀಡಲಿದ್ದಾರೆ. ಒಂದು ವೇಳೆ ಮನೆಯಲ್ಲಿ ಯಾರೂ ಇಲ್ಲದೆ ಮನೆಗೆ ಬೀಗ ಹಾಕಿರುವುದು ಕಂಡು ಬಂದರೆ ಗಣತಿ ನಮೂನೆಯನ್ನು ಆ ಮನೆಗೆ ಸಿಕ್ಕಿಸಿ ಬಿಎಲ್ಓಗಳು ಹಿಂತಿರುಗುತ್ತಾರೆ. ನಂತರ ಕನಿಷ್ಟ ಮೂರು ಬಾರಿ ಬಿಎಲ್ಓಗಳು ಆ ಮನೆಗೆ ಭೇಟಿ ನೀಡುತ್ತಾರೆ. ಒಂದು ವೇಳೆ ಮತದಾರರು ಗಣತಿ ನಮೂನೆಯನ್ನು ಸಲ್ಲಿಸಲು ವಿಫಲರಾದರೆ ಅಂತಹ ಮತದಾರರನ್ನು ಮತಗಟ್ಟೆವಾರು ಗೈರುಹಾಜರಿ/ ಸ್ಥಳಾಂತರ/ ಮರಣ, ನಕಲಿ ಎಂದು ಪಟ್ಟಿ ಮಾಡಿ ತಾಲೂಕು ಕಚೇರಿ, ತಾಲೂಕು ಪಂಚಾಯಿತಿ ಕಚೇರಿ, ನಗರ - ಸ್ಥಳೀಯ ಸಂಸ್ಥೆಗಳ ಕಚೇರಿ, ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಕಾಣುವ ರೀತಿಯಲ್ಲಿ ಪ್ರಚುರ ಪಡಿಸಿ, ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗುವುದು.
ಅಂತಹ ಮತದಾರರನ್ನು ಕರಡು ಮತದಾರರ ಪಟ್ಟಿಗೆ ಸೇರಿಸುವುದಿಲ್ಲ. ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ ದಿನಾಂಕದಿAದ ಅಂದರೆ ೫.೮.೨೦೨೬ ರಿಂದ ೪.೯.೨೦೨೬ರವರೆಗೆ ಹಕ್ಕುಗಳು, ಆಕ್ಷೇಪಣೆಗಳನ್ನು, ಮತದಾರರ ನೋಂದಣಾಧಿಕಾರಿ/ ಸಹಾಯಕ ಮತದಾರರ ನೋಂದಣಾಧಿಕಾರಿಗೆ ಸಲ್ಲಿಸಲು ಅವಕಾಶವಿರುತ್ತದೆ. ಒಂದು ವೇಳೆ ಮತದಾರರ ಅರ್ಹತೆಯ ಬಗ್ಗೆ ಸಂದೇಹ ಬಂದಲ್ಲಿ ಸ್ವಯಂ ವಿಚಾರಣೆ ಪ್ರಾರಂಭಿಸಿ ಅಂತಹ ಮತದಾರರನ್ನು ಯಾಕೆ ಮತದಾರರ ಪಟ್ಟಿಯಿಂದ ತೆಗೆಯಬಾರದು ಎಂಬ ಬಗ್ಗೆ ನೋಟೀಸ್ ೪ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ನೀಡುವ ಪ್ರಕ್ರಿಯೆಯೂ ನಡೆಯಲಿದ್ದು, ಕ್ಷೇತ್ರ ಪರಿಶೀಲನೆ, ದಾಖಲೆಗಳು ಅಥವಾ ಇತರೆ ಅಂಶವನ್ನಾಧರಿಸಿ ಮತದಾರರ ನೋಂದಣಾಧಿಕಾರಿಯವರು ಅಂತಹ ಮತದಾರರನ್ನು ಅಂತಿಮ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ಬಗ್ಗೆ ನಿರ್ಧರಿಸಲಿದ್ದಾರೆ.
ಅಂತಹ ಸಂದರ್ಭ ಲಿಖಿತ ಆದೇಶ ಹೊರಡಿಸಲಿದ್ದಾರೆ. ಹೊಸ ಮತದಾರರಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗಾಗಿ ಘೋಷಣೆ ನಮೂನೆಯೊಂದಿಗೆ ನಮೂನೆ - ೬ರಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಥವಾ ಕ್ಷೇತ್ರದ ಹೊರಗೆ ನಿವಾಸವನ್ನು ಸ್ಥಳಾಂತರಿಸಲು, ನಮೂದುಗಳನ್ನು ಸರಿಪಡಿಸಲು, ಮತದಾನದ ಗುರುತಿನ ಚೀಟಿಯನ್ನು ಬದಲಾಯಿಸಲು ಮತ್ತು ವಿಶೇಷಚೇತನ ವ್ಯಕ್ತಿಯನ್ನು ಗುರುತು ಮಾಡಲು ನಮೂನೆ ೮ ರಲ್ಲಿ ಅರ್ಜಿ ಸಲ್ಲಿಸಬಹುದು. ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಸಂಬAಧ ಯಾವುದೇ ಸಂಶಯಗಳಿದ್ದಲ್ಲಿ ಅಥವಾ ಮಾಹಿತಿ ಬೇಕಿದ್ದಲ್ಲಿ ತಾಲೂಕು ಕಚೇರಿಗಳಲ್ಲಿ ಅಥವಾ ಬಿಎಲ್ಓಗಳಿಂದ ಪಡೆದುಕೊಳ್ಳಬಹುದಾಗಿದೆ.
ಸಲ್ಲಿಸಬೇಕಾದ ದಾಖಲೆಗಳು
ಯಾವುದೇ ಕೇಂದ್ರ ಸರ್ಕಾರ/ ರಾಜ್ಯ ಸರ್ಕಾರ/ ಸಾರ್ವಜನಿಕ ವಲಯ ಉದ್ಯಮದ ಖಾಯಂ ಉದ್ಯೋಗಿ/ ಪಿಂಚಣಿದಾರರಿಗೆ ನೀಡಿರುವ ಯಾವುದೇ ಗುರುತಿನ ಚೀಟಿ/ ಪಿಂಚಣಿ ಸಂದಾಯ ಆದೇಶ. ಭಾರತದಲ್ಲಿ ೦೧.೦೭.೧೯೮೭ಕ್ಕೂ ಮುಂಚೆ ಸರ್ಕಾರ/ ಸ್ಥಳೀಯ ಪ್ರಾಧಿಕಾರಗಳು/ ಬ್ಯಾಂಕುಗಳು/ ಅಂಚೆ ಕಚೇರಿ/ ಜೀವ ವಿಮಾ ನಿಗಮ/ ಸಾರ್ವಜನಿಕ ವಲಯ ಉದ್ಯಮಗಳು ನೀಡಿರುವ ಯಾವುದೇ ಗುರುತಿನ ಚೀಟಿ/ ಪ್ರಮಾಣಪತ್ರ/ ದಸ್ತಾವೇಜು. ಸಕ್ಷಮ ಪ್ರಾಧಿಕಾರವು ನೀಡಿರುವ ಜನನ ಪ್ರಮಾಣ ಪತ್ರ, ಪಾಸ್ಪೋರ್ಟ್.
ಮಾನ್ಯತೆ ಪಡೆದ ಮಂಡಳಿಗಳು/ ವಿಶ್ವವಿದ್ಯಾಲಯಗಳು ನೀಡಿರುವ ಮೆಟ್ರಿಕ್ಯೂಲೇಷನ್/ ಶೈಕ್ಷಣಿಕ ಪ್ರಮಾಣ ಪತ್ರ, ರಾಜ್ಯದ ಸಕ್ಷಮ ಪ್ರಾಧಿಕಾರವು ನೀಡಿರುವ ಖಾಯಂ ನಿವಾಸ ಪ್ರಮಾಣ ಪತ್ರ, ಅರಣ್ಯ ಹಕ್ಕು ಪ್ರಮಾಣ ಪತ್ರ, ಸಕ್ಷಮ ಪ್ರಾಧಿಕಾರವು ನೀಡಿರುವ ಒಬಿಸಿ/ ಪ.ಜಾ/ ಪ.ಪಂ ಅಥವಾ ಯಾವುದೇ ಜಾತಿ ಪ್ರಮಾಣಪತ್ರ.
ರಾಷ್ಟಿçÃಯ ಪೌರತ್ವ ರಿಜಿಸ್ಟರ್ (ಅದು ಎಲ್ಲಾದರೂ ಅಸ್ತಿತ್ವದಲ್ಲಿರಲಿ) ರಾಜ್ಯ/ ಸ್ಥಳೀಯ ಪ್ರಾಧಿಕಾರಗಳು ಸಿದ್ದಪಡಿಸಿದ ಕುಟುಂಬ ರಿಜಿಸ್ಟರ್. ಸರ್ಕಾರವು ನೀಡಿದ ಯಾವುದೇ ಜಮೀನು/ ಮನೆ ಹಂಚಿಕೆ ಪ್ರಮಾಣಪತ್ರ.
ಆಧಾರ್ಗೆ ಸಂಬAಧಿಸಿದAತೆ, ಆಯೋಗವು ದಿನಾಂಕ ೦೯.೦೯.೨೦೨೫ರ ಪತ್ರ ಸಂಖ್ಯೆ ೨೩/೨೦೨೫-ಇಖS/ ಸಂಪುಟ II ರಲ್ಲಿ ಹೊರಡಿಸಲಾದ ನಿರ್ದೇಶನಗಳು ಅನ್ವಯಿಸುತ್ತವೆ. (ಆಧಾರ್ ಕಾರ್ಡ್ ಅನ್ನು ಗುರುತಿನ ಪುರಾವೆಯಾಗಿ ಸ್ವೀಕರಿಸಲಾಗುವುದು. ಆಧಾರ್ ಕಾರ್ಡ್ ಪೌರತ್ವ, ವಿಳಾಸ ಅಥವಾ ಜನ್ಮ ದಿನಾಂಕದ ಪುರಾವೆಯಾಗಿರುವುದಿಲ್ಲ.)
ಬೂತ್ ಹಂತದ ಏಜೆಂಟರ ನೇಮಕ
ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದ ಹಿನ್ನೆಲೆಯಲ್ಲಿ ಎಲ್ಲಾ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಪ್ರತಿ ಮತಗಟ್ಟೆಗೆ ಒಬ್ಬರಂತೆ ಬೂತ್ ಮಟ್ಟದ ಏಜೆಂಟರನ್ನು ನೇಮಕ ಮಾಡುವುದು ಕಡ್ಡಾಯವಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಾರ್ಟಿ ಪಕ್ಷದ ವತಿಯಿಂದ ಬೂತ್ ಮಟ್ಟದ ಏಜೆಂಟರನ್ನು ನೇಮಕ ಮಾಡಿ ಪಟ್ಟಿಯನ್ನು ಸಲ್ಲಿಸಲಾಗಿದೆ.
ಉಳಿದ ಮಾನ್ಯತೆ ಪಡೆದಿರುವ ಎಲ್ಲಾ ರಾಜಕೀಯ ಪಕ್ಷಗಳಿಗೆ ಮತಗಟ್ಟೆ ಹಂತದಲ್ಲಿ ಹೆಚ್ಚಿನ ಮಾಹಿತಿ ನೀಡಲು, ಮತಗಟ್ಟೆ ಅಧಿಕಾರಿಗಳ ಕಾರ್ಯವನ್ನು ಪರಿವೀಕ್ಷಿಸಲು ಹಾಗೂ ನ್ಯೂನತೆ ರಹಿತ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು ಅನುಕೂಲವಾಗುವಂತೆ ಪಕ್ಷದ ವತಿಯಿಂದ ಬೂತ್ ಮಟ್ಟದ ಏಜೆಂಟರನ್ನು ನೇಮಕ ಮಾಡಿ ಪಟ್ಟಿಯನ್ನು ಸಲ್ಲಿಸಲು ತಿಳಿಸಲಾಗಿದೆ.