ಸುಂಟಿಕೊಪ್ಪ, ಜೂ.೨೯: ಸುಂಟಿಕೊಪ್ಪ ಲಯನ್ಸ್ ಸಂಸ್ಥೆಯ ೨೦೨೬-೨೦೨೭ ಸಾಲಿನ ನೂತನ ಅಧ್ಯಕ್ಷರಾಗಿ ಎಸ್.ಜಿ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿಯಾಗಿ ಗ್ಲೆನ್ ಮೆನೇಜಸ್ ಆಯ್ಕೆಗೊಂಡರು. ಖಜಾಂಚಿಯಾಗಿ ಕೆ.ಪಿ. ಜಗನ್ನಾಥ್ ಆಯ್ಕೆಯಾದರು.
ಸಂಸ್ಥೆಯ ಕಚೇರಿಯಲ್ಲಿ ಚೆಟ್ಟಿಮಾಡ ರಕ್ಷಿತ್ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳ ಹಾಗೂ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭ ಸಂಸ್ಥೆಯ ಅಧ್ಯಕ್ಷ ಚೆಟ್ಟಿಮಾಡ ರಕ್ಷಿತ್ ಅವರ ಅಧ್ಯಕ್ಷತೆಯಲ್ಲಿ ಜು.೧ ರಂದು ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಲಿದೆೆ. ಈ ಸಮಾರಂಭಕ್ಕೆ ಲಯನ್ಸ್ ರಾಜ್ಯಪಾಲರಾದ ಗೋವರ್ದನ್ ಶೆಟ್ಟಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಭೋಧಿಸಲ್ಲಿದ್ದಾರೆ.