ಕುಶಾಲನಗರ, ಜೂ. ೨೮: ಅಧ್ಯಯನ ಪ್ರಕಾರ ೨೦೨೬ರ ಸಾಲಿನಲ್ಲಿ ಮುಂಗಾರು ಮಳೆ ಕೊರತೆ ಸ್ಪಷ್ಟವಾಗಿ ಕಂಡುಬರುತ್ತದೆ ಎಂದು ಭೂ ವಿಜ್ಞಾನಿ ಹೆಚ್ ಎಂ ಪ್ರಕಾಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅವರು ಪತ್ರಿಕಾ ಪ್ರಕಟಣೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು ಭಾರತ ಸೇರಿದಂತೆ ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ಇರುವ ಆವಿಯ ಮೂಲಗಳಾದ ಜ್ವಾಲಾಮುಖಿಗಳ ಚಟುವಟಿಕೆಗಳು ತುಂಬಾ ಇಳಿಮುಖವಾಗಿರುವ ಆ ಕಾರಣದಿಂದ ಮುಂದಿನ ಆರು ತಿಂಗಳ ಕಾಲ ಮುನ್ಸೂಚನೆ ವರದಿಗಳ ಅಧ್ಯಯನದಿಂದ ಮಳೆಯ ಕೊರತೆ ಕಂಡುಬರುತ್ತದೆ. ಈ ವರ್ಷದ ಡಿಸೆಂಬರ್ ತಿಂಗಳ ತನಕ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಎಲ್ ನಿನೋ ಪರಿಸ್ಥಿತಿಗೂ ಸಹ ಸಮುದ್ರದ ಒಳಭಾಗದಲ್ಲಿ ಭೀಕರ ಜ್ವಾಲಾಮುಖಿಗಳು ಕಾರಣ ಎನ್ನುವುದನ್ನು ವಿಜ್ಞಾನಿಗಳು ಗಮನಿಸಿದ್ದಾರೆ. ಆ ಪ್ರಕಾರ ಈ ಬಾರಿ ಮಳೆಯ ಕೊರತೆ ಉಂಟಾಗುವ ಸಾಧ್ಯತೆ ಅಧಿಕವಾಗಿದೆ ಎಂದು ಪ್ರಕಾಶ್ ತಿಳಿಸಿದ್ದಾರೆ.