ಮಡಿಕೇರಿ, ಜೂ. ೨೮: ೨೦೨೬-೨೭ನೇ ಸಾಲಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅನುಷ್ಠಾನಗೊಳಿಸಲು ಸರ್ಕಾರವು ಮಂಜೂರಾತಿ ನೀಡಿದೆ.

ಬರ, ನೆರೆ / ಪ್ರವಾಹಗಳಿಂದ ಬೆಳೆ ಹಾನಿ ಉಂಟಾದಾಗ ಬೆಳೆ ವಿಮೆಗೆ ನೋಂದಾಯಿಸಿದ ರೈತರಿಗೆ ಸೂಕ್ತ ಪರಿಹಾರ ನೀಡುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.ಈ ಯೋಜನೆಯಡಿ ರೈತರ ವಿಮಾ ಕಂತನ್ನು ಆಹಾರ ಮತ್ತು ಎಣ್ಣೆ ಕಾಳು ಬೆಳೆಗಳಿಗೆ ಮುಂಗಾರು ಹಂಗಾಮಿಗೆ ವಿಮಾ ಮೊತ್ತದ ಶೇ.೨ ಎಂದು ಪರಿಗಣಿಸಲಾಗಿದೆ. ಈ ಯೋಜನೆಯಡಿ ಪ್ರಸ್ತುತ ಸಾಲು ಹಾಗೂ ಹಂಗಾಮಿನಲ್ಲಿ, ವಿವಿಧ ವಿಮಾ ಘಟಕಗಳಲ್ಲಿ ಅಧಿಸೂಚಿಸಲಾದ ಬೆಳೆಗಳಿಗೆ ೪ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ಇಚ್ಛೆಯುಳ್ಳ ಬೆಳೆ ಸಾಲ ಪಡೆದ/ಪಡೆಯದ ರೈತರು ಯೋಜನೆಯಡಿ ಭಾಗವಹಿಸಬಹುದು.

ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ, ಬ್ಯಾಂಕ್ ಪಾಸ್ ಪುಸ್ತಕ ಮತ್ತು ಆಧಾರ್ ಸಂಖ್ಯೆ ನೀಡತಕ್ಕದ್ದು. ಬಿತ್ತನೆ ವೈಫಲ್ಯ, ಮಧ್ಯಂತರ ಬೆಳೆ ವೈಫಲ್ಯ, ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪ ಮತ್ತು ಕೊಯ್ಲಿನೋತ್ತರ ಬೆಳೆ ನಷ್ಟ ಸಹ ಪರಿಗಣಿಸಲಾಗುತ್ತದೆ.

ಪ್ರಸಕ್ತ ಸಾಲಿನಲ್ಲಿ ಕೊಡಗು ಜಿಲ್ಲೆಗೆ ಸಂಬAಧಿಸಿದAತೆ, ಇಂಡಸ್ ಇಂಡ್ ಜನರಲ್ ಇನ್ಸೂರೆನ್ಸ್ ಕಂಪನಿಯನ್ನು ಬೆಳೆ ವಿಮೆ ಕಾರ್ಯಕ್ಕೆ ಆಯ್ಕೆ ಮಾಡಲಾಗಿದೆ. ಈ ಯೋಜನೆಯಡಿ ಅರ್ಜಿಯನ್ನು ರಾಷ್ಟಿçÃಕೃತ ಬ್ಯಾಂಕ್, ಗ್ರಾಮ ಒನ್ ಕೇಂದ್ರ ಮತ್ತು ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಸಲ್ಲಿಸಿ ಹೆಸರು ನೋಂದಾಯಿಸಬಹುದಾಗಿದೆ.

೨೦೨೬ನೇ ಸಾಲಿನ ಮುಂಗಾರು ಹಂಗಾಮಿನ ವಿಮಾ ಮೊತ್ತ ಮತ್ತು ರೈತರ ವಿಮಾ ಕಂತಿನ ವಿವರ

ವಿಮೆಗೆ ಒಳಪಡಿಸಿದ ಬೆಳೆಗಳು ಭತ್ತ (ನೀರಾವರಿ) ರೈತರ ಪಾಲಿನ ಶೇಕಡ ವಿಮಾ ಕಂತು ೨ ಹೆಕ್ಟೇರ್ ಮತ್ತು ಎಕರೆವಾರು ವಿಮಾ ಮೊತ್ತ ಮತ್ತು ವಿಮಾ ಕಂತಿನ ವಿವರಗಳು.

ವಿಮಾ ಮೊತ್ತ ಪ್ರತಿ ಹೆಕ್ಟೇರ್‌ಗೆ ೧,೦೮,೬೦೦, ಪ್ರತಿ ಎಕರೆಗೆ ೪೩,೯೫೦.೪೨, ರೈತರ ವಿಮಾ ಕಂತು (ರೂ.ಗಳಲ್ಲಿ) ಪ್ರತಿ ಹೆಕ್ಟೇರ್‌ಗೆ ೨೧೭೨, ಪ್ರತಿ ಎಕರೆಗೆ ೮೭೯.೦೧, ನೋಂದಾಯಿಸಿಕೊಳ್ಳಲು ೨೦೨೬ರ ಆಗಸ್ಟ್ ೧೪ ಕೊನೆಯ ದಿನವಾಗಿದೆ.

ಭತ್ತ (ಮಳೆಯಾಶ್ರಿತ) ರೈತರ ಪಾಲಿನ ಶೇಕಡ ವಿಮಾ ಕಂತು ೨ ಹೆಕ್ಟೇರ್ ಮತ್ತು ಎಕರೆವಾರು ವಿಮಾ ಮೊತ್ತ ಮತ್ತು ವಿಮಾ ಕಂತಿನ ವಿವರಗಳು:

ವಿಮಾ ಮೊತ್ತ ಪ್ರತಿ ಹೆಕ್ಟೇರ್‌ಗೆ ೭೫,೬೦೦, ಪ್ರತಿ ಎಕರೆಗೆ ೩೦,೫೯೫.೩೨, ರೈತರ ವಿಮಾ ಕಂತು(ರೂ.ಗಳಲ್ಲಿ) ಪ್ರತಿ ಹೆಕ್ಟೇರ್‌ಗೆ ೧,೫೧೨, ಪ್ರತಿ ಎಕರೆಗೆ ೬೧೧.೯೧, ನೋಂದಾಯಿಸಿಕೊಳ್ಳಲು ೨೦೨೬ ರ ಆಗಸ್ಟ್ ೧೪ ಕೊನೆಯ ದಿನವಾಗಿದೆ.

ಮುಸುಕಿನ ಜೋಳ (ಮಳೆಯಾಶ್ರಿತ) ರೈತರ ಪಾಲಿನ ಶೇಕಡ ವಿಮಾ ಕಂತು ೨ ಹೆಕ್ಟೇರ್ ಮತ್ತು ಎಕರೆವಾರು ವಿಮಾ ಮೊತ್ತ ಮತ್ತು ವಿಮಾ ಕಂತಿನ ವಿವರಗಳು ವಿಮಾ ಮೊತ್ತ ಪ್ರತಿ ಹೆಕ್ಟೇರ್‌ಗೆ ೬೭,೫೦೦, ಪ್ರತಿ ಎಕರೆಗೆ ೨೭,೩೧೭.೨೫, ರೈತರ ವಿಮಾ ಕಂತು(ರೂ.ಗಳಲ್ಲಿ) ಪ್ರತಿ ಹೆಕ್ಟೇರ್‌ಗೆ ೧,೩೫೦, ಪ್ರತಿ ಎಕರೆಗೆ ೫೪೬.೩೫, ನೋಂದಾಯಿಸಿಕೊಳ್ಳಲು ೨೦೨೬ ರ ಜುಲೈ ೩೧ ಕೊನೆಯ ದಿನವಾಗಿದೆ.

ರೈತರು ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗೆ ಸಂರಕ್ಷಣೆ ತಂತ್ರಾAಶದಲ್ಲಿ ಪಡೆಯಬಹುದು. (hಣಣಠಿ://ತಿತಿತಿ.sಚಿmಡಿಚಿಞshಚಿಟಿe.ಞಚಿಡಿಟಿಚಿಣಚಿಞಚಿ.gov.iಟಿ/) ಹೆಚ್ಚಿನ ಮಾಹಿತಿಗೆ ಹೋಬಳಿಯ ರೈತ ಸಂಪರ್ಕ ಕೇಂದ್ರ ಹಾಗೂ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಬಹುದಾಗಿದೆ.

ಕೊಡಗು ಜಿಲ್ಲೆಯ ಹೆಚ್ಚಿನ ರೈತರು ಈ ಯೋಜನೆಯಲ್ಲಿ ಭಾಗವಹಿಸಿ ಯೋಜನೆಯ ಸದುಪಯೋಗಪಡಿಸಿಕೊಳ್ಳುವಂತೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಂದ್ರಶೇಖರ್ ತಿಳಿಸಿದ್ದಾರೆ.