ಮಡಿಕೇರಿ, ಜೂ. ೨೭: ಕೊಡಗಿನ ಇಗ್ಗುತಪ್ಪ ದೇವರ ಆದಿ ಸ್ಥಾನ ಮಲ್ಮ ಕ್ಷೇತ್ರಕ್ಕೆ ಹೊಂದಿಕೊAಡAತಿರುವ ಬೆಟ್ಟದ ತಪ್ಪಲಿನಲ್ಲಿ ಮಾರಾಟವಾಗಿರುವ ಜಾಗವನ್ನು ಅಖಿಲ ಕೊಡವ ಸಮಾಜದ ಹೆಸರಿನಲ್ಲಿ ಖರೀದಿಸಲು ನಿರ್ಧರಿಸಲಾಗಿದೆ.
ಕೊಡಗಿನ ಇಗ್ಗುತಪ್ಪ ದೇವರ ಆದಿಸ್ಥಾನ ಮಲ್ಮ ಕ್ಷೇತ್ರಕ್ಕೆ ಹೊಂದಿಕೊAಡAತೆ ಇರುವ ಪವಿತ್ರ ಬೆಟ್ಟದ ತಪ್ಪಲಿನಲ್ಲಿ ಮಾರಾಟವಾಗಿರುವ ಸ್ಥಳದ ಬಗ್ಗೆ ವಿವಾದ ಉಂಟಾಗಿದ್ದು ಈ ಕುರಿತಂತೆ ಈ ಸ್ಥಳಗಳ ಖರೀದಿದಾರರಾದ ಶ್ರೀ ಎಂ ಅವರು ಅಖಿಲ ಕೂಡವ ಸಮಾಜಕ್ಕೆ ಖುದ್ದಾಗಿ ಭೇಟಿ ನೀಡಿ ಈ ಸ್ಥಳಗಳನ್ನು ನೋಂದಾಯಿತ ಸಂಸ್ಥೆಗೆ ಮಾರಾಟ ಮಾಡುವುದಾಗಿ ತಿಳಿಸಿರುವ ಹಿನ್ನೆಲೆಯಲ್ಲಿ ಈ ಕುರಿತಂತೆ ಸೂಕ್ತ ನಿರ್ಣಯಗಳನ್ನು ತೆಗೆದುಕೊಳ್ಳಲು ಇಂದು ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಸಭೆಯನ್ನು ಕರೆಯಲಾಗಿತ್ತು.
ಈ ಸಭೆಯಲ್ಲಿ ಇಗ್ಗುತಪ್ಪ ದೇವರ ಈ ಪವಿತ್ರ ಸ್ಥಳಗಳನ್ನು ರಕ್ಷಿಸುವ ಪ್ರಯುಕ್ತ ಅಖಿಲ ಕೊಡವ ಸಮಾಜದ ಹೆಸರಿನಲ್ಲಿ ಈ ಸ್ಥಳಗಳನ್ನು ಖರೀದಿಸಬೇಕು ಎಂದು ತೀರ್ಮಾನಿಸಲಾಯಿತು. ಅಲ್ಲದೆ ಸ್ಥಳಗಳ ಖರೀದಿಗೆ ಬೇಕಾಗಿರುವ ಮೊತ್ತವನ್ನು ಇಗ್ಗುತಪ್ಪ ದೇವರ ಭಕ್ತಮಹಾ ಜನರಿಂದ ವಂತಿಕೆಯಾಗಿ ಶೇಖರಿಸಲು ನಿರ್ಧರಿಸಲಾಯಿತು. ಈ ಕಾರ್ಯಗಳಿಗೆ ಎಲ್ಲಾ ಸಂಘ ಸಂಸ್ಥೆಗಳು ಪೂರ್ಣ ಸಹಕಾರ ನೀಡುವಂತೆ ತೀರ್ಮಾನಿಸಲಾಯಿತು.
ಸಭೆಯಲ್ಲಿ ನೆಲಜಿ, ಪೇರೂರು, ಬಲ್ಲಮಾವಟಿ ಗ್ರಾಮಸ್ಥರು, ಅಖಿಲ ಕೊಡವ ಸಮಾಜದ ಕೇಂದ್ರೀಯ ಸಮಿತಿ ಸದಸ್ಯರು, ಯುನೈಟೆಡ್ ಕೊಡವ ಆರ್ಗನೈಸೇಷನ್ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಚೊಟ್ಟೇಕ್‌ಮಾಡ ರಾಜೀವ್ ಬೋಪಯ್ಯ, ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ, ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಘಟಕದ ಕಾರ್ಯದರ್ಶಿ ಚೆÀಟ್ರುಮಾಡ ಸುಜಯ್ ಬೋಪಯ್ಯ, ಬೆಂಗಳೂರು ಕೊಡವ ಸಮಾಜ - ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ, ಬೆಂಗಳೂರು ಕೊಡವ ಸಮಾಜದ ಕಾರ್ಯದರ್ಶಿ ಬೇರೆರ ಮಧು ಅಯ್ಯಣ್ಣ, ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ, ಮಕ್ಕಂದೂರು ಕೊಡವ ಸಮಾಜದ ಅಧ್ಯಕ್ಷ ತಂಬುಕುತ್ತಿರ ಮಧು ಮಂದಣ್ಣ, ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷ ತೇಲಪಂಡ ಸುಬ್ಬಯ್ಯ, ಕೊಡವ ಭಾಷಿಕ ಸಮಾಜದ ಸಂಚಾಲಕ ಪಡ್‌ಞÁರಂಡ ಪ್ರಭು ಕುಮಾರ್, ಕೊಲ್ಲಿರ ಉಮೇಶ್, ಅಪ್ಪಂಡೇರAಡ ಯಶ್ವಂತ್ ಕಾಳಪ್ಪ, ಪುಚ್ಚಿಮಂಡ ಅಪ್ಪಯ್ಯ, ಮಂಡಿರ ಸಚಿನ್ ಗಣಪತಿ, ನೆಲಜಿ, ಪೇರೂರು, ಬಲ್ಲಮಾವಟಿ ಗ್ರಾಮಸ್ಥರಾದ ಮಣವಟ್ಟಿರ ಕುಶಾಲಪ್ಪ, ಚಂಗೇಟಿರ ಕುಶಾಲಪ್ಪ, ಮಾಳೆಯಂಡ ಪೃಥ್ಯು ಪೆಮ್ಮಯ್ಯ, ಕೈಬುಲಿರ ದಿನು ಕಾರ್ಯಪ್ಪ, ಮಾಳೆಯಂಡ ಜಗದ ಈರಪ್ಪ, ಮಣವಟಿರ ಅರುಣ್ ಪಳಂಗಪ್ಪ, ಮಾಳೆಯಂಡ ಪ್ರಭು ಪೂಣಚ್ಚ, ಕರವಂಡ ಲವ ನಾಣಯ್ಯ ಮತ್ತಿತರರು ಪಾಲ್ಗೊಂಡಿದ್ದರು.