ಮಡಿಕೇರಿ, ಜೂ. ೨೬: ನಿನ್ನೆಯಷ್ಟೆ ಏಷ್ಯನ್ ಗೇಮ್ಸ್ಗೆ ಅರ್ಹತೆ ಪಡೆದ ಕೊಡಗಿನ ಬೊಳ್ಳಂಡ ಉನ್ನತಿ ಅಯ್ಯಪ್ಪ ಬುಬನೇಶ್ವರದಲ್ಲಿ ನಡೆದ ರಾಷ್ಟಿçÃಯ ಕ್ರೀಡಾಕೂಟದಲ್ಲಿ ಮತ್ತೊಂದು ಪದಕದ ಸಾಧನೆ ಮಾಡಿದ್ದಾರೆ. ಉನ್ನತಿ ಅಯ್ಯಪ್ಪ ಅವರನ್ನು ಒಳಗೊಂಡ ಕರ್ನಾಟಕ ತಂಡ ೪x೧೦೦ ರಿಲೇ ಓಟದಲ್ಲಿ ಚಿನ್ನದ ಪದಕ ಪಡೆದಿದೆ.
ನಿನ್ನೆಯಷ್ಟೆ ನಡೆದ ರಾಷ್ಟಿçÃಯ ಕ್ರೀಡಾಕೂಟದಲ್ಲಿ ೨೦೦ ಮೀಟರ್ ಓಟದಲ್ಲಿ ಬೆಳ್ಳಿ ಪಡೆದು ಸೆಪ್ಟೆಂಬರ್ ನಲ್ಲಿ ಜಪಾನ್ ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಗೆ ಉನ್ನತಿ ಅರ್ಹತೆ ಪಡೆದಿದ್ದರು. ಇದೀಗ ರಿಲೇಯಲ್ಲಿ ಚಿನ್ನದ ಪದಕ ಗಳಿಸಿ ಮತ್ತೊಂದು ಸಾಧನೆ ಗೈದಿದ್ದಾರೆ.