ಚೆಯ್ಯಂಡಾಣೆ, ಜೂ. ೨೬: ಸಮಸ್ತ ಶತಮಾನೋತ್ಸವ ಆಚರಣೆಯ ಅಂಗವಾಗಿ ಮುಅಲ್ಲಿಂಗಳಿಗೆ ನಿರ್ಮಿಸಿಕೊಡಲಾಗುತ್ತಿರುವ ‘ಮುಅಲ್ಲಿಮ್ ಭವನ' ಯೋಜನೆಯಡಿಯಲ್ಲಿ ಕೊಡಗು ಜಿಲ್ಲೆಗೆ ಮಂಜೂರಾದ ನಾಲ್ಕು ಮನೆಗಳಲ್ಲಿ ಮೂರನೇ ಮನೆಯ ಶಂಕುಸ್ಥಾಪನಾ ಕಾರ್ಯಕ್ರಮ ಎಮ್ಮೆಮಾಡುವಿನಲ್ಲಿ ಜರುಗಿತು. ಎಮ್ಮೆಮಾಡು ನುಸ್ರತುಲ್ ಇಸ್ಲಾಂ ಮದ್ರಸ ಮುಅಲ್ಲಿಂಮರಾದ ತಾಜುದ್ದೀನ್ ನಿಝಾಮಿಯವರಿಗೆ ಲಭಿಸಿದ ಈ ನೂತನ ಮನೆಯ ನಿರ್ಮಾಣ ಕಾರ್ಯಕ್ಕೆ ಸಯ್ಯಿದ್ ಅಬ್ದುಲ್ ಅಝೀಝ್ ಅಲ್ ಐದರೂಸಿ ತಂಙಳ್ ಎಮ್ಮೆಮಾಡು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಈ ಸಂದರ್ಭ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ (ಎಸ್‌ಜೆಎಂ) ಕೊಡಗು ಜಿಲ್ಲಾ ಅಧ್ಯಕ್ಷ ಅಬ್ದುಲ್ಲಾ ಸಖಾಫಿ ಕೊಳಕೇರಿ, ಪ್ರಧಾನ ಕಾರ್ಯದರ್ಶಿ ಷಂಶುದ್ದೀನ್ ಅಮ್ಜದಿ ಬಲಮುರಿ, ಜಿಲ್ಲಾ ಪರೀಕ್ಷಾ ಮಂಡಳಿ ಕಾರ್ಯದರ್ಶಿ ಹಂಸ ರಹ್ಮಾನಿ ಕಂಡಕರೆ, ಎಮ್ಮೆಮಾಡು ರೇಂಜ್ ಕಾರ್ಯದರ್ಶಿ ಯೂನುಸ್ ಮರ್ಸೂಖಿ, ಕೋಶಾಧಿಕಾರಿ ಸುಲೈಮಾನ್ ಸಖಾಫಿ ಗರಗಂದೂರು, ಸ್ಥಳೀಯ ಮುದರ್ರಿಸ್ ಹಂಸ ಸಖಾಫಿ ಮಲಪ್ಪುರಂ ಹಾಗೂ ಇತರ ಸಾಂಘಿಕ ಮುಖಂಡರು ಮತ್ತು ಜಮಾಅತ್ ಪ್ರಮುಖರು ಉಪಸ್ಥಿತರಿದ್ದರು.